For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನ ವಿಶೇಷ ಟೂರ್ನಿ 'ದ ಹಂಡ್ರೆಡ್‌'ನಿಂದ ಡೇವಿಡ್ ವಾರ್ನರ್ ಹೊರಕ್ಕೆ

David Warner pulls out of England’s the Hundred

ಸಿಡ್ನಿ, ಮಾರ್ಚ್ 20: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ವಿಶೇಷ ಟೂರ್ನಿ 'ದ ಹಂಡ್ರೆಡ್‌ನಿಂದ ಹೊರ ನಡೆದಿದ್ದಾರೆ ಎಂದು ವರದಿಯಾಗಿದೆ. 100 ಎಸೆತಗಳ ಟೂರ್ನಿ ದ ಹಂಡ್ರೆಡ್‌ನಲ್ಲಿ ವಾರ್ನರ್ ಸದರ್ನ್ ಬ್ರೇವ್ ತಂಡದಲ್ಲಿದ್ದರು.

ವಾಟುಡೇ ಪ್ರಕಾರ, ಡೇವಿಡ್ ವಾರ್ನರ್ ಡೂರ್ನಿಯಿಂದ ಹೊರ ನಡೆಯಲು ಕಾರಣ ಕೊರೊನಾವೈರಸ್ ಭೀತಿ ಎನ್ನಲಾಗುತ್ತಿದೆ. ಫ್ರಾಂಚೈಸಿಗಳ ಮಧ್ಯೆ ನಡೆಯುವ ಟಿ20 ಟೂರ್ನಿಯಾದ ದ ಹಂಡ್ರೆಡ್, ಜುಲೈನಿಂದ ನಡೆಯುವುದರಲ್ಲಿತ್ತು. ಟೂರ್ನಿಯಲ್ಲಿ 8 ಫ್ರಾಂಚೈಸಿಗಳು ಸ್ಪರ್ಧಿಸಲಿದ್ದವು.

ಮಾರಕ ಕೊರೊನಾವೈರಸ್ ಸೋಂಕಿನಿಂದಾಗಿ ಬಹುತೇಕ ಎಲ್ಲಾ ಕ್ರೀಡಾಸ್ಪರ್ಧೆಗಳು ರದ್ದಾಗಿವೆ ಇಲ್ಲವೆ ಮುಂದೂಡಲ್ಪಟ್ಟಿವೆ. ವಿಶ್ವದಲ್ಲಿ ಸುಮಾರು 9000 ಮಂದಿ ಈ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ವಿಶ್ವದಲ್ಲಿ ಒಟ್ಟಾರೆ ಸುಮಾರು 220,000 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ಪರ ಲಭ್ಯನಿರುವ ಕಾರಣಕ್ಕೂ ಡೇವಿಡ್ ವಾರ್ನರ್ ದ ಹಂಡ್ರೆಡ್‌ನಿಂದ ಹೊರ ನಡೆದಿದ್ದಾರೆ ಎಂದು ವರದಿ ಹೇಳಿದೆ. ವಾರ್ನರ್ ಜೊತೆಗೆ ಇನ್ನೊಂದಿಷ್ಟು ಜನಪ್ರಿಯ ಆಟಗಾರರೂ ಹಂಡ್ರೆಡ್‌ನಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

Story first published: Friday, March 20, 2020, 16:39 [IST]
Other articles published on Mar 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+