ತನ್ನ ನೆಚ್ಚಿನ ಆಲ್ ಟೈಮ್ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್

ಬೆಂಗಳೂರು, ಮೇ 7: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್, ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್)ನ ನಾಯಕ ಡೇವಿಡ್ ವಾರ್ನರ್ ತನ್ನ ನೆಚ್ಚಿನ ಆಲ್ ಟೈಮ್ ಐಪಿಎಲ್ ತಂಡ ಪ್ರಕಟಿಸಿದ್ದಾರೆ. ವಾರ್ನರ್ ಹೆಸರಿಸಿರುವ ಈ ಸಾರ್ವಕಾಲಿನ ಐಪಿಎಲ್ ತಂಡ ಸಾಕಷ್ಟು ಬಲಿಷ್ಠವಾಗಿದೆ. ಆದರೆ ಅಚ್ಚರಿಯೆಂದರೆ ಈ ತಂಡದಲ್ಲಿ ಇನ್ನೊಂದಿಷ್ಟು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಹೆಸರಿಲ್ಲ. ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಪ್ಲೇಯಿಂಗ್ XIನಲ್ಲಿ ಇಲ್ಲ.
ಯುವಿ ಮಾತ್ರವಲ್ಲ, ಆಸೀಸ್ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್, ಮುಂಬೈ ಇಂಡಿಯನ್ಸ್ ಜೋಡಿ ಕೀರನ್ ಪೊಲಾರ್ಡ್ ಮತ್ತು ಲಸಿತ್ ಮಾಲಿಂಗ ಕೂಡ ವಾರ್ನರ್ ನೆಚ್ಚಿನ ಈ ಐಪಿಎಲ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅಂದ್ಹಾಗೆ, ಕಾಮೆಂಟೇಟರ್ ಹರ್ಷ ಭೋಗ್ಲೆ ಜೊತೆಗಿನ ಸಂದರ್ಶನದ ವೇಳೆ ವಾರ್ನರ್ ಈ ಐಪಿಎಲ್ ತಂಡ ಪ್ರಕಟಿಸಿದ್ದಾರೆ.
ನೂರಾರು ಶ್ರೇಷ್ಠ ಕ್ರಿಕೆಟಿಗರಿರುವಾಗ 11 ಜನರ ನಿಮ್ಮ ನೆಚ್ಚಿನ ತಂಡವನ್ನು ಹೆಸರಿಸಿ ಅಂದರೆ ಒಂದಿಷ್ಟು ಒಳ್ಳೆಯ ಆಟಗಾರರ ಹೆಸರು ತಪ್ಪಿ ಹೋಗೋದು ಸಹಜಾನೆ. ಹಾಗಾದರೆ ವಾರ್ನರ್ ನೆಚ್ಚಿನ ಐಪಿಎಲ್ ತಂಡ ಹೇಗಿದೆ ನೋಡಿ.

ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು
ಡೇವಿಡ್ ವಾರ್ನರ್ ನೆಚ್ಚಿನ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಆರಂಭಿಕರಾಗಿ ಡೇವಿಡ್ ವಾರ್ನರ್, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಪ್ 3 ಬ್ಯಾಟಿಂಗ್ ಆರ್ಡರ್‌ನಲ್ಲಿದ್ದಾರೆ (1. ಡೇವಿಡ್ ವಾರ್ನರ್, 2. ರೋಹಿತ್ ಶರ್ಮಾ, 3. ವಿರಾಟ್ ಕೊಹ್ಲಿ).

ಮಧ್ಯಮ ಬ್ಯಾಟಿಂಗ್ ಕ್ರಮಾಂಕ
ವಾರ್ನರ್ ಫೇವರಿಟ್ ಐಪಿಎಲ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಡೈನಮಿಕ್ ಪ್ಲೇಯರ್ ಸುರೇಶ್ ರೈನಾ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕಾಣಿಸಿಕೊಂಡಿದ್ದಾರೆ (4. ಸುರೇಶ್ ರೈನಾ, 5. ಹಾರ್ದಿಕ್ ಪಾಂಡ್ಯ, 6. ಗ್ಲೆನ್ ಮ್ಯಾಕ್ಸ್‌ವೆಲ್).

ಕೀಪರ್ ಆಗಿ ಕೂಲ್ ಕ್ಯಾಪ್ಟನ್
ಟೀಮ್ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ವಿಕೆಟ್ ಕೀಪರ್ ಆಗಿ ಹೆಸರಿಸಲ್ಪಟ್ಟಿದ್ದಾರೆ. ಆಸ್ಟ್ರೇಲಿಯಾದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ತಂಡದಲ್ಲಿದ್ದಾರೆ (7. ಎಂಎಸ್ ಧೋನಿ, 8. ಮಿಚೆಲ್ ಸ್ಟಾರ್ಕ್).

ವೇಗಿಗಳ ಸಂಖ್ಯೆ ಹೆಚ್ಚು
ಡೇವಿಡ್ ನೆಚ್ಚಿನ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಸ್ಟಾರ್ಕ್ ಜೊತೆಗೆ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ, ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ, ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬೌಲಿಂಗ್ ಬಣದಲ್ಲಿ ಇದ್ದಾರೆ (9. ಜಸ್‌ಪ್ರೀತ್ ಬೂಮ್ರಾ, 10. ಆಶಿಶ್ ನೆಹ್ರಾ, 11. ಯುಜುವೇಂದ್ರ ಚಾಹಲ್/ಕುಲದೀಪ್ ಯಾದವ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications