ಡೇವಿಡ್ ವಾರ್ನರ್ ಗಾಯಕ್ಕೆ 'ಮ್ಯಾರಥಾನ್ ಸೆಕ್ಸ್' ಕಾರಣ: ವಾರ್ನರ್ ಪತ್ನಿ

ಸಿಡ್ನಿ: ಟೀಮ್ ಇಂಡಿಯಾವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಇತ್ತಂಡಗಳು ಏಕದಿನ ಸರಣಿಯಲ್ಲಿ ಆಡುತ್ತಿವೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ (ನವೆಂಬರ್ 29) ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡ 51 ರನ್‌ಗಳ ಸೋಲನುಭವಿಸಿತು. ಆರಂಭಿಕ ಪಂದ್ಯದಲ್ಲೂ ಆಸ್ಟ್ರೇಲಿಯಾ 66 ರನ್‌ಗಳ ಜಯ ಸಾಧಿಸಿದ್ದರಿಂದ ಮೂರು ಪಂದ್ಯಗಳ ಏಕದಿನ ಸರಣಿಯೀಗ ಆಸ್ಟ್ರೇಲಿಯಾ ವಶವಾಗಿದೆ. ಮೂರನೇ ಮತ್ತು ಔಪಚಾರಿಕ ಏಕದಿನ ಪಂದ್ಯ ಡಿಸೆಂಬರ್ 2ರಂದು ನಡೆಯಲಿದೆ.
ಏಕದಿನ ಸರಣಿ ಮುಕ್ತಾಯದ ಬಳಿಕ ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಅದಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಪ್ರವಾಸ ಸರಣಿಯಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಕರೆಯಲಾಗುವ ಟೆಸ್ಟ್ ಸರಣಿಯೇ ಹೆಚ್ಚು ಕುತೂಹಲಕಾರಿ.
ಆದರೆ 1 ಏಕದಿನ, 3 ಟಿ20ಐ ಮತ್ತು ಟೆಸ್ಟ್ ಸರಣಿ ಬಾಕಿಯಿರುವಾಗಲೇ ಆಸ್ಟ್ರೇಲಿಯಾದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗಾಯಗೊಂಡಿದ್ದಾರೆ.

ದ್ವಿತೀಯ ಪಂದ್ಯದ ವೇಳೆ ಗಾಯ
ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ 77 ಎಸೆತಗಳಿಗೆ 83 ರನ್ ಬಾರಿಸಿ ರನ್ ಔಟ್ ಆಗಿ ನಿರ್ಗಮಿಸಿದ್ದರು. ಭಾರತದ ಇನ್ನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಗ್ರೋಯಿನ್ ಇಂಜುರಿಯಿಂದ (ತೊಡೆ ಸಂದು ಗಾಯ) ಮೈದಾನದಿಂದ ಹೊರ ನಡೆದಿದ್ದರು.

ಪಂದ್ಯಗಳಿಂದ ವಾರ್ನರ್ ಹೊರಕ್ಕೆ
1 ಏಕದಿನ, 3 ಟಿ20ಐ ಮತ್ತು ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಿಂದ ಡೇವಿಡ್ ವಾರ್ನರ್ ಹೊರಗುಳಿಯುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಅಂದ್ಹಾಗೆ ವಾರ್ನರ್ ಗಾಯಕ್ಕೆ ಅಸಲಿ ಕಾರಣ ಏನಿರಬಹುದೆಂದು ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಹೇಳಿಕೊಂಡಿದ್ದಾರೆ.

ಬೆಡ್ ರೂಮ್ ಚಟುವಟಿಕೆ ಗಾಯಕ್ಕೆ ಕಾರಣ
'ಟ್ರಪಲ್ಸ್ ಎಮ್ಸ್ ಮೂನ್ ಮ್ಯಾನ್ ಇನ್ ದ ಮಾರ್ನಿಂಗ್' ರೇಡಿಯೋ ಶೋನಲ್ಲಿ ಮಾತನಾಡಿರುವ ಡೇವಿಡ್ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್, ಕ್ರಿಕೆಟರ್‌ಗಳ ಗಾಯಕ್ಕೆ ಬರೀ ಕ್ರಿಕೆಟ್ ಮಾತ್ರ ಕಾರಣವಲ್ಲ, ಜೊತೆಗಾತಿಯಿರುವ ಕ್ರಿಕೆಟರ್‌ಗಳ ಬೆಡ್‌ರೂಮ್ ವರ್ತನೆಗಳೂ ಗಾಯಕ್ಕೆ ಕಾರಣವಿರಬಹುದು ಎಂದು ತಮಾಷೆಯಾಗಿ ಹೇಳಿದ್ದಾರೆ.

ಮ್ಯಾರಥಾನ್ ಸೆಕ್ಸ್‌ನಿಂದ ಗಾಯ
ವಾರ್ನರ್ ಗಾಯದ ಬಗ್ಗೆ ಮಾತನಾಡಿದ ಕ್ಯಾಂಡಿಸ್ ವಾರ್ನರ್, 'ನಾಲ್ಕು ತಿಂಗಳ ಕಾಲ ದೂರವಿದ್ದ ನಾವು ಈಗಷ್ಟೇ ಕೆಲದಿನಗಳ ಕಾಲ ಜೊತೆಯಾಗಿದ್ದೇವೆ. ಎಲ್ಲರ ಹಾಗೇ ನಾವೂ..,' ಎಂದು ರಾಗ ಎಳೆದರು. ನೀವು ಆತನಿಗೇನು ಮಾಡಿದಿರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕ್ಯಾಂಡಿಸ್, 'ನಾನು ಮಾಡಿದ್ದಲ್ಲ, ನಾನು ಮಾಡಿದ್ದಲ್ಲ..' ಎನ್ನುತ ನಾನಾರ್ಥ ರೀತಿಯಲ್ಲಿ ನಕ್ಕಿದ್ದರು. ಕ್ಯಾಂಡಿಸ್ ಹೇಳಿಕೆ ನೋಡಿದರೆ, ಏಕದಿನ ಪಂದ್ಯಕ್ಕೂ ಮುನ್ನ ಡೇವಿಡ್ ವಾರ್ನರ್ ಪತ್ನಿಯ ಜೊತೆ ಸುದೀರ್ಘ ಕಾಲ ಲೈಂಗಿಕ ಕ್ರಿಯೆ ನಡೆಸಿದಂತಿದೆ. ಇದನ್ನೇ ಕ್ಯಾಂಡಿಸ್ ಬೋಲ್ಡ್ ಆಗಿ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications