ಡೇವಿಡ್ ವಾರ್ನರ್ ಸೆಕೆಂಡ್ ಇನ್ನಿಂಗ್ಸ್‌ಗೆ ವೇದಿಕೆ ಸಜ್ಜು, ಭಾರತ- ಆಸೀಸ್ ಟೆಸ್ಟ್ ವೇಳೆ ಈ ಜವಾಬ್ದಾರಿ
ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಪಾಕಿಸ್ತಾನ ಟೆಸ್ಟ್ ಪಂದ್ಯವು ಡೇವಿಡ್ ವಾರ್ನರ್ ವೃತ್ತಿಜೀವನದ ಕೊನೆಯ ಟೆಸ್ಟ್ . ಇದಾದ ನಂತರ ಅವರು ಆಸ್ಟ್ರೇಲಿಯದ ಟೆಸ್ಟ್ ಜರ್ಸಿಯಲ್ಲಿ ಎಂದಿಗೂ ಮೈದಾನಕ್ಕೆ ಮರಳುವುದಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೊಸ ಇನ್ನಿಂಗ್ಸ್ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ.
ಒಬ್ಬ ಕ್ರಿಕೆಟ್ ಆಟಗಾರ ನಿಶ್ಚಿತವಾಗಿ ಕ್ರಿಕೆಟ್‌ನಿಂದ ಸನ್ಯಾಸ ಪಡೆದ ಮೇಲೆ ಏನು ಮಾಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಅದೇ ರೀತಿ ವಾರ್ನರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿದ್ದು, ಅವರು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ವಾರ್ನರ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಾಮೆಂಟೇಟರ್ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಡೇವಿಡ್ ವಾರ್ನರ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುವ ಮೊದಲ ಸರಣಿ ಭಾರತ ಮತ್ತು ಆಸ್ಟ್ರೇಲಿಯಾ ಆಗಿರಬಹುದು.
ಟೀಮ್ ಇಂಡಿಯಾ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಾಗಿದೆ. ಇಲ್ಲಿ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಡೇವಿಡ್ ವಾರ್ನರ್ ಕಾಮೆಂಟೇಟರ್ ಪಾತ್ರವನ್ನು ನಿರ್ವಹಿಸಬಹುದು.
ಡೇವಿಡ್ ವಾರ್ನರ್ ಅವರ ಈ ಹೊಸ ಪಾತ್ರದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಉತ್ಸುಕರಾಗಿದ್ದಾರೆ. ವಾರ್ನರ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಅಬ್ಬರದ ಆಟದ ಮೂಲಕ ಅಭಿಮಾನಿಗಳನ್ನು ಸಾಕಷ್ಟು ರಂಜಿಸುತ್ತಾರೆ. ಮೈದಾನದ ಹೊರಗೆ ಸಹ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತಮಾಷೆಯ ವೀಡಿಯೊಗಳೊಂದಿಗೆ ಅಭಿಮಾನಿಗಳನ್ನು ಕನೆಕ್ಟ್ ಆಗಿದ್ದಾರೆ. ವಾರ್ನರ್ ಕ್ರಿಕೆಟಿಗ ಎನ್ನುವುದಕ್ಕಿಂತ ಕಾಮೆಂಟೇಟರ್ ಆಗಿಯೇ ಹೆಚ್ಚು ಯಶಸ್ವಿಯಾಗುತ್ತಾರೆ ಎನ್ನುತ್ತಾರೆ ಅಭಿಮಾನಿಗಳು.

ಏಕದಿನ ಕ್ರಿಕೆಟ್‌ಗೂ ವಿದಾಯ
ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯು ತಮ್ಮ ವೃತ್ತಿಜೀವನದ ಕೊನೆಯ ಕೆಂಪು ಚೆಂಡಿನ ಸರಣಿ ಎಂದು ಡೇವಿಡ್ ವಾರ್ನರ್ ಬಹಳ ಹಿಂದೆಯೇ ಘೋಷಿಸಿದ್ದರು. ಇದರೊಂದಿಗೆ, 2024 ರ ಆರಂಭದಲ್ಲಿ, ಅವರು ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದರು. ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 2023ರ ವಿಶ್ವಕಪ್‌ನ ಫೈನಲ್ ಪಂದ್ಯ ಅವರ ವೃತ್ತಿಜೀವನದ ಕೊನೆಯ ODI ಪಂದ್ಯ ಎಂದು ಸಾಬೀತಾಯಿತು.
2025ರಲ್ಲಿ ಏಕದಿನ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತಾನು ಲಭ್ಯವಿರುತ್ತೇನೆ ಎಂದು ವಾರ್ನರ್ ಹೇಳಿದ್ದಾರೆ. ಇದರೊಂದಿಗೆ, ಅವರು ವಿಶ್ವದಾದ್ಯಂತ ಫ್ರಾಂಚೈಸಿ ಪಂದ್ಯಾವಳಿಗಳಲ್ಲಿ ಟಿ 20 ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications