For Quick Alerts
ALLOW NOTIFICATIONS  
For Daily Alerts
 

T20 World Cup: ಆಸ್ಟ್ರೇಲಿಯಾಕ್ಕೆ ಶುರುವಾಗಿದೆ ಭಯ, ಪ್ರಮುಖ ಆಟಗಾರನಿಗೆ ಕಾಡುತ್ತಿದೆ ಗಾಯದ ಸಮಸ್ಯೆ

David Warner Suffering With A Stiff Neck, Raises Concern For Australia Team Ahead T20 World Cup

2022ರ ಟಿ20 ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ಒಂದಾಗಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಹಲವು ರಾಷ್ಟ್ರಗಳಿಗೆ ತಮ್ಮ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ.

ಟೀಂ ಇಂಡಿಯಾಕ್ಕೆ ಆಟಗಾರರ ಗಾಯದ ಸಮಸ್ಯೆ ಹೆಚ್ಚಾಗೆ ತಟ್ಟಿದೆ. ಈಗ, ವಿಶ್ವಕಪ್ ಆರಂಭಕ್ಕೆ ಕೆಲವು ದಿನಗಳ ಮುನ್ನವೇ ಆತಂಕ ಶುರುವಾಗಿದೆ. ಆಸ್ಟ್ರೇಲಿಯಾದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಗಾಯಗೊಂಡಿರುವ ಬಗ್ಗೆ ಆತಂಕ ಎದುರಾಗಿದೆ.

ಶುಕ್ರವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಡೇವಿಡ್ ವಾರ್ನರ್ ಕಣಕ್ಕಿಳಿಯಲಿಲ್ಲ. ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಪ್ರಮುಖ ಆಟಗಾರನ ಫಿಟ್ನೆಸ್ ಬಗ್ಗೆ ಅನುಮಾನ ಶುರುವಾಗಿದೆ. ಒಂದು ವೇಳೆ ವಾರ್ನರ್ ಗಾಯಗೊಂಡು ಟೂರ್ನಿಯನ್ನು ತಪ್ಪಿಸಿಕೊಂಡರೆ ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹೊಡೆತ ಬೀಳಲಿದೆ.

ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್‌ನ ತಮ್ಮ ಮೊದಲನೆ ಪಂದ್ಯವನ್ನು ಆಡಲಿದೆ. ಅದಕ್ಕೂ ಮುನ್ನ ಅಕ್ಟೋಬರ್ 17ರಂದು ಭಾರತದ ವಿರುದ್ಧ ಬ್ರಿಸ್ಬೇನ್‌ನಲ್ಲಿ ಅಭ್ಯಾಸ ಪಂದ್ಯವನ್ನು ಆಡಲಿದೆ.

2021ರ ಟಿ20 ವಿಶ್ವಕಪ್‌ನಲ್ಲಿ ಡೇವಿಡ್ ವಾರ್ನರ್ ಅತ್ಯತ್ತಮ ಪ್ರದರ್ಶನ ನೀಡಿದ್ದರು. ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಟಿ20 ವಿಶ್ವಕಪ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದಿದ್ದರು.

David Warner Suffering With A Stiff Neck, Raises Concern For Australia Team Ahead T20 World Cup

ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಿಂದ ಹೊರಗುಳಿದ ವಾರ್ನರ್

ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿತು. ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಸೋಲನುಭವಿಸಿತ್ತು.

ಸರಣಿಯ ಮೊದಲನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಉತ್ತಮ ರನ್ ಗಳಿಸಿದ್ದರು. 44 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 73 ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾಗಿದ್ದರು. ಮೂರನೇ ಪಂದ್ಯದಲ್ಲಿ ವಾರ್ನರ್ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದರು. ಅವರ ಬದಲಾಗಿ ಸ್ಟೀವ್ ಸ್ಮಿತ್ ತಂಡದಲ್ಲಿ ಸ್ಥಾನ ಪಡೆದರು.

David Warner Suffering With A Stiff Neck, Raises Concern For Australia Team Ahead T20 World Cup

ಕ್ಯಾಚ್ ಹಿಡಿಯಲು ಹೋಗಿ ಗಾಯ

ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಬುಧವಾರ ನಡೆದ ಎರಡನೇ ಟಿ 20 ಪಂದ್ಯದಲ್ಲಿ ವಾರ್ನರ್ ಕುತ್ತಿಗೆಗೆ ನೋವು ಮಾಡಿಕೊಂಡಿದ್ದರು. ಮೊಯಿನ್ ಅಲಿ ಕ್ಯಾಚ್‌ ಹಿಡಿಯುವ ಯತ್ನದಲ್ಲಿ ವಾರ್ನರ್ ಪಾಯಿಂಟ್ ಬೌಂಡರಿಯಲ್ಲಿ ಬಿದ್ದು ನೋವು ಮಾಡಿಕೊಂಡರು. ನಂತರ ಅವರ ಬದಲಾಗಿ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಮಾಡಿದ್ದರು.

ಆದರೂ, ಚೇತರಿಸಿಕೊಂಡ ವಾರ್ನರ್, ನಂತರ ಚೇಸಿಂಗ್‌ನಲ್ಲಿ ನಾಯಕ ಆರನ್ ಫಿಂಚ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಎರಡನೇ ಟಿ20 ಪಂದ್ಯದಲ್ಲಿ 11 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟಾದರು. ಮೂರನೇ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತ ಕಾರಣ, ಯಾವುದೇ ಫಲಿತಾಂಶವಿಲ್ಲದೆ ಕೊನೆಯಾಯಿತು. ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.

ವಾರ್ನರ್ ಗಾಯ ತೀವ್ರ ಸ್ವರೂಪದ್ದಲ್ಲ ಎಂದು ಹೇಳಲಾಗಿದೆ, ಭಾರತದ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಮೊದಲು ವಾರ್ನರ್ ಸಿದ್ಧರಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡ ನಿರೀಕ್ಷೆ ಮಾಡಿದೆ.

Story first published: Friday, October 14, 2022, 23:43 [IST]
Other articles published on Oct 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+