'ಇಂಡಿ ಇದನ್ನು ಇಷ್ಟಪಡುತ್ತಾಳೆ, ಕೊಹ್ಲಿಗೆ ಥ್ಯಾಂಕ್ಸ್' ಎಂದ ಡೇವಿಡ್ ವಾರ್ನರ್

ಸಿಡ್ನಿ: ಪ್ರಸ್ತುತ ದಿನಗಳಲ್ಲಿ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇಬ್ಬರೂ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡವರು. ಕ್ರಿಕೆಟ್ ಮೈದಾನದಲ್ಲಿ ಎದುರಾಳಿಗಳಂತಿದ್ದರೂ ಮೈದಾನದ ಹೊರಗೆ ವಾರ್ನರ್-ಕೊಹ್ಲಿ ಒಳ್ಳೆಯ ಸ್ನೇಹ ಹೊಂದಿದ್ದಾರೆ.
ಡೇವಿಡ್ ವಾರ್ನರ್ ಅವರ ಮಧ್ಯದ ಪುತ್ರಿ ಇಂಡಿ-ರೇಗೆ ಅವಳ ಅಪ್ಪನಾಗಲೀ ಇಲ್ಲವೆ ಆಸ್ಟ್ರೇಲಿಯಾದ ಬೇರೆ ಯಾವುದೇ ಕ್ರಿಕೆಟರ್ ಆಗಲೀ ಅಚ್ಚುಮೆಚ್ಚು ಅಲ್ಲವಂತೆ. ಬದಲಿಗೆ ವಿರಾಟ್ ಕೊಹ್ಲಿಯೆಂದರೆ ಇಂಡಿಗೆ ಬಲು ಇಷ್ಟವಂತೆ. ಇದನ್ನು ವಾರ್ನರ್ ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ವಾರ್ನರ್ ಪುತ್ರಿ ಇಂಡಿ ಅವರು ಕೊಹ್ಲಿಯ ಟೆಸ್ಟ್ ಜೆರ್ಸಿ ಧರಿಸಿ ಪೋಸ್ ಕೊಟ್ಟಿದ್ದರು. ಈ ಚಿತ್ರ ಹಾಕಿದ್ದ ವಾರ್ನರ್, 'ನನಗೆ ಗೊತ್ತು, ನಾವು ಸರಣಿ ಸೋತಿದ್ದೇವೆ. ಆದರೆ ಇಲ್ಲೊಬ್ಬಳು ಹುಡುಗಿ ಈಗಲೂ ತುಂಬಾ ಖುಷಿಯಲ್ಲಿದ್ದಾಳೆ. ನಿಮ್ಮ ಜೆರ್ಸಿಗೆ ಥ್ಯಾಂಕ್ಸ್ ಕೊಹ್ಲಿ. ಇಂಡಿ ಇದನ್ನು ತುಂಬಾ ಇಷ್ಟಪಟ್ಟಿದ್ದಾಳೆ. ಅವಳು ಅವಳ ಅಪ್ಪ ಮತ್ತು ಆ್ಯರನ್ ಫಿಂಚ್ ಬಿಟ್ಟರೆ ವಿಕೆಯನ್ನು ಹೆಚ್ಚು ಇಷ್ಟಪಡುತ್ತಾಳೆ,' ಎಂದು ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡ ಅಲ್ಲಿ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 2-1ರ ಗೆಲುವು ದಾಖಲಿಸಿತ್ತು. ಆ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಆಡಿದ ಬಳಿಕ ಕೊಹ್ಲಿ ಪಿತೃತ್ವ ರಜೆ ಪಡೆದು ಭಾರತಕ್ಕೆ ಬಂದಿದ್ದರು. ಅಂದ್ಹಾಗೆ ವಾರ್ನರ್‌ಗೆ ಐವಿ-ಮಾ (6 ವರ್ಷ), ಇಂಡಿ-ರೇ (4), ಇಸ್ಲಾ ರೋಸ್ (1) ಎನ್ನುವ ಮೂವರು ಪುತ್ರಿಯರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications