Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

David Warner: ಪಾಕಿಸ್ತಾನ ಸೂಪರ್ ಲೀಗ್‌ನತ್ತ ಮುಖ ಮಾಡಿದ ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಮಾಜಿ ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯಿಂದ ಹೊರಗುಲಿದಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಡೇವಿಡ್ ವಾರ್ನರ್ ಅವರನ್ನು ಯಾವ ಫ್ರಾಂಚೈಸಿಯೂ ಕೂಡ ಬಿಡ್ ಮಾಡಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ಪರ ಸಾಕಷ್ಟು ರನ್ ಗಳಿಸಿದ ವಾರ್ನರ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿರುವುದು ಅಚ್ಚರಿ ಮೂಡಿಸಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನೂ ಪಡೆದಿದ್ದರು. ಇದೀಗ ಐಪಿಎಲ್‌ನಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಪಾಕಿಸ್ತಾನದತ್ತ ವಾರ್ನರ್ ಮುಖ ಮಾಡಿದ್ದಾರೆ.

David Warner turns his attention to the Pakistan Super League

ಡೇವಿಡ್ ವಾರ್ನರ್ ಈಗ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್‌ಎಲ್) ಆಡಲು ಸಜ್ಜಾಗಿದ್ದಾರೆ. ವಾರ್ನರ್ ಅವರು ಪಾಕಿಸ್ತಾನ ಸೂಪರ್ ಲೀಗ್ ಸೀಸನ್ 10ರ ಡ್ರಾಫ್ಟ್‌ಗೆ ನೋಂದಾಯಿಸಿದ ಹೊಸ ಮಾರ್ಕ್ಯೂ ಆಟಗಾರರಾಗಿದ್ದಾರೆ. ಈ ಬಗ್ಗೆ ಪಿಸಿಎಲ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. ಆಸ್ಟ್ರೇಲಿಯಾದ ಪವರ್‌ಹೌಸ್ ಡೇವಿಡ್ ವಾರ್ನರ್ ಪಿಎಸ್‌ಎಲ್ ಡ್ರಾಫ್ಟ್‌ಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದೆ. ಮುಂಬರುವ ಪಿಎಸ್‌ಎಲ್ 10ರ ಆವೃತ್ತಿ ಡ್ರಾಫ್ಟ್ ಅನ್ನು ಜನವರಿ 11 ರಂದು ನಿಗದಿಪಡಿಸಲಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್ ಏಪ್ರಿಲ್ 8 ರಿಂದ ಮೇ 19 ರವರೆಗೆ ನಡೆಯಲಿದೆ. ಈ ಟೂರ್ನಿ ಐಪಿಎಲ್‌ಗೆ ಪೈಪೋಟಿ ನೀಡಲಿದೆ, ಆದರೆ ಐಪಿಎಲ್‌ ಟೂರ್ನಿಯ ಮುಂದೆ ಪಿಸಿಎಲ್ ಹೊಳಪು ಕಳೆಗುಂದಿದೆ. ಇದೀಗ ಡೇವಿಡ್ ವಾರ್ನರ್ ಸೇರ್ಪಡೆಯೊಂದಿಗೆ ಪಿಸಿಎಲ್ ಟೂರ್ನಿಯ ಚರ್ಚೆ ಮೊದಲಿಗಿಂತ ಸ್ವಲ್ಪ ಹೆಚ್ಚಾಗಿರಲಿದೆ.

ಈ ಟೂರ್ನಿ ವಾರ್ನರ್ ಮತ್ತು ನ್ಯೂಜಿಲೆಂಡ್ ವೇಗದ ಬೌಲರ್ ಟಿಮ್ ಸೌಥಿ ಅವರಂತಹ ಸ್ಟಾರ್‌ಗಳನ್ನು ಒಳಗೊಂಡಿರುತ್ತದೆ. ವಾರ್ನರ್ ಅವರು ತಮ್ಮ ವೃತ್ತಿಜೀವನದಲ್ಲಿ ಅನಿರೀಕ್ಷಿತ ತಿರುವಿನ ನಂತರ ಪಿಸಿಎಲ್ ಡ್ರಾಫ್ಟ್‌ಗೆ ಪ್ರವೇಶಿಸುವ ನಿರ್ಧಾರ ಬಂದಿದ್ದಾರೆ.

ವಾರ್ನರ್ ವೃತ್ತಿಜೀವನ

ಟಿ20 ವಿಶ್ವಕಪ್‌ 2024ರಲ್ಲಿ ಆಸ್ಟ್ರೇಲಿಯಾ ತಂಡ ಸೂಪರ್‌ -8 ರಿಂದ ನಿರ್ಗಮಿಸಿದ ಬಳಿಕ ಡೇವಿಡ್ ವಾರ್ನರ್‌ ನಿವೃತ್ತಿಯಾದರು. ಟೂರ್ನಿಯಲ್ಲಿ ಅವರು 7 ಪಂದ್ಯಗಳಲ್ಲಿ 178 ರನ್ ಗಳಿಸಿದ್ದರು. ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಭಾರತದ ವಿರುದ್ಧ ಆಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವಾರ್ನರ್ 112 ಪಂದ್ಯಗಳಲ್ಲಿ 44.59 ಸರಾಸರಿಯಲ್ಲಿ 8,786 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 26 ಶತಕಗಳನ್ನು ಗಳಿಸಿದರು. ವಾರ್ನರ್ ಅವರ ಗರಿಷ್ಠ ಸ್ಕೋರ್ 335 ರನ್.

ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು 161 ಪಂದ್ಯಗಳಲ್ಲಿ ಅವರು 22 ಶತಕಗಳನ್ನು ಒಳಗೊಂಡಂತೆ 45.30 ರ ಸರಾಸರಿಯಲ್ಲಿ 6932 ರನ್ ಕಲೆ ಹಾಕಿದ್ದಾರೆ. ಇನ್ನೂ 110 ಟಿ20 ಪಂದ್ಯಗಳಲ್ಲಿ ಅವರ 3277 ರನ್ ಬಾರಿಸಿದ್ದಾರೆ. ಸ್ಟ್ರೈಕ್ ರೇಟ್ 142.47 ಆಗಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ಬ್ಯಾಟರ್ ಎಂಬ ಹೆಗ್ಗಳಿಕೆ ವಾರ್ನರ್ ಪಾತ್ರರಾಗಿದ್ದಾರೆ. ಎರಡು ಐಸಿಸಿ ಏಕದಿನ ವಿಶ್ವಕಪ್‌ಗಳು, ಒಂದು ಟಿ20 ವಿಶ್ವಕಪ್ ಮತ್ತು ಒಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೇರಿದಂತೆ ಆಸ್ಟ್ರೇಲಿಯಾದ ಗೆಲುವುಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

Story first published: Wednesday, January 1, 2025, 20:35 [IST]
Other articles published on Jan 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+