ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲಿ
ಇಂಗ್ಲೆಂಡ್ ಕ್ರಿಕೆಟ್ ತಮಡದ ಆಟಗಾರ ಡೇವಿಡ್ ವಿಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ವಿಲ್ಲಿ ಇದು ತನ್ನ ಅಂತಿಮ ಅಂತಾರಾಷ್ಟ್ರೀಯ ಭಾರತದಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಕ್ರೀಡಾಕೂಟದ ಮೂಲಕ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಘೋಷಣೆ ಮಾಡಿದ್ದಾರೆ.
ಡೇವಿಡ್ ವಿಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿಯ ಕುರಿತು ಘೋಷಣೆ ಮಾಡಿದ್ದಾರೆ. ಸುದೀರ್ಘ ಪೋಸ್ಟ್ ಮಾಡಿರುವ ಅವರು ತನ್ನ ನಿವೃತ್ತಿಯ ಸಮಯ ಬಂದಿದೆ ಎಂದು ತನಗೆ ಅನಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ವಿಶ್ವಕಪ್ ಮುಗಿಯುತ್ತಿದ್ದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೂ ತಾನು ನಿವೃತ್ತನಾಗಲಿದ್ದೇನೆ ಎಂದಿದ್ದಾರೆ ಇಂಗ್ಲೆಂಡ್ ವೇಗಿ.

"ಈ ದಿನವನ್ನು ನಾನು ಯಾವತ್ತೂ ಬಯಸಿರಲಿಲ್ಲ. ಸಣ್ಣ ವಯಸ್ಸಿನಿಂದಲೂ ನನ್ನಲ್ಲಿದ್ದ ಏಕೈಕ ಕನಸೆಂದರೆ ಅದು ಇಂಗ್ಲೆಂಡ್ ಪರವಾಗಿ ಕ್ರಿಕೆಟ್ ಆಡುವುದು. ಹಾಗಾಗಿ ಎಚ್ಚರಿಕೆಯಿಂದ ಯೋಚಿಸಿದ್ದು ವಿಶ್ವಕಪ್‌ನ ಅಂತ್ಯದಲ್ಲಿ ನಾನು ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ"
"ನಾನು ಬಹಳ ಹೆಮ್ಮೆಯಿಂದ ಜರ್ಸಿಯನ್ನು ಧರಿಸಿದ್ದೇನೆ ಮತ್ತು ಎದೆಯಲ್ಲಿರುವ ಲಾಂಚನಕ್ಕಾಗಿ ತನ್ನ ಸರ್ವ ಪ್ರಯತ್ನವನ್ನೂ ನಡೆಸಿದ್ದೇನೆ. ಬಹಳ ಅದ್ಭುತವಾದ ತಂಡದ, ಆಟಗಾರರ ಜೊತೆಗೆ ಆಡುವ ಅವಕಾಶ ದೊರೆತಿದ್ದಾಗ ನಾನು ಬಹಳ ಅದೃಷ್ಟವಂತ ಎಂದು ಭಾವಿಸುತ್ತೇನೆ. ಈ ಅವಧಿಯಲ್ಲಿ ನಾನು ಸಾಕಷ್ಟು ಅದ್ಭುತವಾದ ನೆನಪುಗಳನ್ನು ಹೊಂದಿದ್ದು ಶ್ರೇಷ್ಠ ಸ್ನೇಹಿತರನ್ನು ಪಡೆದುಕೊಂಡಿದ್ದೇನೆ ಹಾಗೂ ಕೆಲ ಕಷ್ಟದ ಸಮಯಗಳನ್ನು ಕೂಡ ಎದುರಿಸಿದ್ದೇನೆ" ಎಂದಿ ಡೇವಿಡ್ ವಿಲ್ಲಿ ನಿವೃತ್ತಿಯ ಬಗ್ಗೆ ಬರೆದುಕೊಂಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಇಂಗ್ಲೆಂಡ್‌ನ 33ರ ಹರೆಯದ ವೇಗದ ಬೌಲರ್ ತನ್ನ ಕುಟುಂಬಕ್ಕೂ ಧನ್ಯವಾದ ಹೇಳಿದ್ದಾರೆ. ವಿಲ್ಲಿ 2015ರಲ್ಲಿ ಇಂಗ್ಲೆಂಡ್ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ವೈಟ್‌ಬಾಲ್ ತಂಡದ ಪ್ರಮುಖ ಆಟಗಾರನಾಗಿ ಗುರಿತಿಸಿಕೊಂಡಿದ್ದಾರೆ. 70 ಏಕದಿನ ಪಂದ್ಯಗಳನ್ನು ಆಡಿರುವ ಅವರು 43 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications