ಲಯಕ್ಕೆ ಮರಳಿದ ಇಶಾಂತ್, 5 ವಿಕೆಟ್ ಕಬಳಿಸಿದ ವೇಗಿ
ಕೊಲಂಬೋ, ಆಗಸ್ಟ್ 07: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಶ್ರೀಲಂಕಾ ಅಧ್ಯಕ್ಷೀಯ ಮಂಡಳಿ XI ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಲಯ ಕಂಡುಕೊಂಡಿರುವ ಇಶಾಂತ್ ಶರ್ಮ 5 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನವಾದ ಶುಕ್ರವಾದ ಭಾರತದ ವೇಗಿ ಇಶಾಂತ್ ಶರ್ಮ ಅವರು ಭೋಜನ ವಿರಾಮದ ವೇಳೆಗೆ 35ರನ್ನಿಗೆ 5 ವಿಕೆಟ್ ಕಿತ್ತು ಭರ್ಜರಿ ಪ್ರದರ್ಶನ ನೀಡಿದ್ದರು.
ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ (8 ರನ್), ರೋಹಿತ್ ಶರ್ಮ ವೈಫಲ್ಯದ ನಡುವೆ ಅಜಿಂಕ್ಯ ರಹಾನೆ ಶತಕ(109 ನಿವೃತ್ತಿ)ದ ನೆರವಿನಿಂದ 351ರನ್ ಸ್ಕೋರ್ ಮಾಡಿತ್ತು.

ಕೆಎಲ್ ರಾಹುಲ್ 43, ಶಿಖರ್ ಧವನ್ 62, ಚೇತೇಶ್ವರ್ ಪೂಜಾರಾ 42 ರನ್ ಗಳಿಸಿ ತಮ್ಮ ಕೊಡುಗೆ ನೀಡಿದ್ದರು. ಲಂಕಾ ತಂಡದ ಪರ ಮಧ್ಯಮ ವೇಗಿ ಕಸೂನ್ ರಂಜಿತಾ 68ರನ್ನಿತ್ತು 5 ವಿಕೆಟ್ ಪಡೆದುಕೊಂಡರು.
ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಧನಂಜಯ್ ಡಿ ಸಿಲ್ವಾ ಹಾಗೂ ಕೌಶಲ್ ಸಿಲ್ವಾ ಇಬ್ಬರು ಶೂನ್ಯಕ್ಕೆ ಔಟಾದರು. ಉಪುಲ್ ತರಂಗಾ ಕೂಡಾ ಶೂನ್ಯ ಸುತ್ತಿದ್ದಲ್ಲದೆ ಲಹಿರುತಿರುಮನ್ನೆ 5 ಹಾಗೂ ಕೌಶಲ್ ಪೆರೆರಾ 0 ಗಳಿಸಿ ಔಟಾದಾಗ ತಂಡದ ಮೊತ್ತ 10/5 ಆಗಿತ್ತು.
ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದ ಇಶಾಂತ್ ಶರ್ಮ ಎಸೆತವನ್ನು ಶೇಹಾನ್ ಜಯಸೂರ್ಯ ತಡೆ ಒಡ್ಡಿದ್ದಲ್ಲದೆ ಸಿರಿವರ್ಧನಾ ಜೊತೆ 25ರನ್ ಜೊತೆಯಾಟ ಕಾಯ್ದುಕೊಂಡರೂ ಪ್ರಯೋಜನವಾಗಲಿಲ್ಲ. ತಂಡ 121 ಸ್ಕೋರಿಗೆ ಆಲೌಟ್ ಆಗಿದೆ.
ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್ ಅನ್ನು ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರನ್ನು ಆರಂಭಿಕ ಆಟಗಾರರಾಗಿ ಕಣಕ್ಕಿಳಿಸಿದೆ.230ರನ್ ಗಳ ಲೀಡ್ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications