For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022 ಹರಾಜು: ಮತ್ತೊಮ್ಮೆ ಬಲಿಷ್ಠ ತಂಡ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್: ಸಂಪೂರ್ಣ ಸ್ಕ್ವಾಡ್ ಮಾಹಿತಿ

DC Team 2022 Players List: Full List of Delhi Capitals With Price in Kannada

ಐಪಿಎಲ್‌ನಲ್ಲಿ ಈವರೆಗೆ ಟ್ರೋಫಿ ಗೆಲ್ಲಲು ಸಫಲವಾಗದ ತಂಡವಾಗಿದ್ದರೂ ಕಳೆದ ಎರಡ್ಮೂರು ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ತಂಡ ಡೆಲ್ಲಿ ಕ್ಯಾಪಿಟಲ್ಸ್. ಈ ಬಾರಿ ಮತ್ತೊಮ್ಮೆ ಅಂತಾದ್ದೇ ಪ್ರದರ್ಶನಕ್ಕೆ ತಂಡವನ್ನು ಸಿದ್ಧಪಡಿಸಿದೆ. ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅತ್ಯುತ್ತಮ ಆಟಗಾರರನ್ನು ತೆಕ್ಕೆಗೆ ಹಾಕಿಕೊಳ್ಳಲು ಯಶಸ್ವಿಯಾಗಿದೆ. ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಟಲ್ಸ್ ತಮಡ ಈ ಬಾರಿಯ ಹರಾಜಿನ ನಂತರ ಅತ್ಯುತ್ತಮ ತಂಡದಂತೆ ಕಾಣಿಸುತ್ತಿದೆ.

ಹರಾಜಿನಲ್ಲಿ ಡೆಲ್ಲಿ ಕ್ಯಾಪಿಡಲ್ಸ್ ತಂಡ ಖರೀದಿಸಿದ ಆಟಗಾರರ ಪಟ್ಟಿ: ಡೇವಿಡ್ ವಾರ್ನರ್ (6.25 ಕೋಟಿ), ಮಿಚೆಲ್ ಮಾರ್ಷ್ (6.5 ಕೋಟಿ), ಶಾರ್ದೂಲ್ ಠಾಕೂರ್ (10.75 ಕೋಟಿ), ಮುಸ್ತಾಫಿಜುರ್ ರೆಹಮಾನ್ (2 ಕೋಟಿ), ಕುಲ್ದೀಪ್ ಯಾದವ್ (2 ಕೋಟಿ), ಅಶ್ವಿನ್ ಹೆಬ್ಬಾರ್ (20 ಲಕ್ಷ), ಸರ್ಫರಾಜ್ ಖಾನ್ (20 ಲಕ್ಷ), ಕಮಲೇಶ್ ನಾಗರಕೋಟಿ (1.1 ಕೋಟಿ), ಕೆಎಸ್ ಭರತ್ (2 ಕೋಟಿ), ಮನ್ದೀಪ್ ಸಿಂಗ್ (1.1 ಕೋಟಿ), ಸೈಯದ್ ಖಲೀಲ್ ಅಹ್ಮದ್ (5.25 ಕೋಟಿ), ಚೇತನ್ ಸಕರಿಯಾ (4.2 ಕೋಟಿ), ಲಲಿತ್ ಯಾದವ್ ( 65 ಲಕ್ಷ), ರಿಪಾಲ್ ಪಟೇಲ್ (20 ಲಕ್ಷ), ಯಶ್ ಧುಲ್ (50 ಲಕ್ಷ), ರೋವ್ಮನ್ ಪೊವೆಲ್ (2.8 ಕೋಟಿ), ಪ್ರವೀಣ್ ದುಬೆ (50 ಲಕ್ಷ)

ಇನ್ನು ಈ ಹರಾಜಿಗೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು. ನಾಯಕ ರಿಷಭ್ ಪಂತ್ ಅವರನ್ನು 16 ಕೋಟಿ ನೀಡಿ ರೀಟೈನ್ ಮಾಡಿಕೊಂಡಿದ್ದ ಡಿಸಿ ಅಕ್ಷರ್ ಪಟೇಲ್ ಅವರನ್ನು 9 ಕೋಟಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಪೃಥ್ವಿ ಶಾಗೆ 7.5 ಕೋಟಿ ನೀಡಿ ಉಳಿಸಿಕೊಂಡಿದ್ದರೆ ವೇಗಿ ಅನ್ರಿಕ್ ನಾರ್ಕಿಯಾಗೆ 6.5 ಕೋಟಿ ನೀಡಿ ಉಳಿಸಿಕೊಂಡಿತ್ತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೊಸ ನಾಯಕನನ್ನು ಆಯ್ಕೆ ಮಾಡುವ ಅವಶ್ಯಕತೆಯಿಲ್ಲ. ಅನುಭವಿ ಆಟಗಾರ ಡೇವಿಡ್ ವಾರ್ನರ್ ತಂಡಕ್ಕೆ ಸೇರ್ಪಡೆಯಾಗಿರುವುದು ಸಾಕಷ್ಟು ಬಲ ನೀಡಲಿದೆ. ಮಿಚೆಲ್ ಮಾರ್ಶ್, ಶಾರ್ದೂಲ್ ಠಾಕೂರ್, ಚೇತನ್ ಸಕಾರಿಯಾ ಕೂಡ ಈ ಆವೃತ್ತಿಯಲ್ಲಿ ಡಿಸಿ ಪಡೆಯ ವಿಶ್ವಾಸ ಹೆಚ್ಚಿಸಲಿದ್ದಾರೆ.

IPL 2022 ಆಡಲಿರುವ ಕನ್ನಡಿಗ ಆಟಗಾರರು ಇವರೇ | Oneindia Kannada

Story first published: Monday, February 14, 2022, 9:28 [IST]
Other articles published on Feb 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+