For Quick Alerts
ALLOW NOTIFICATIONS  
For Daily Alerts
 

DC vs GG WPL 2025: ಡೆಲ್ಲಿ, ಗುಜರಾತ್‌ ಮಧ್ಯೆ ಸ್ಟಾರ್ ವಾರ್‌

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ 10ನೇ ಪಂದ್ಯ ಮಂಗಳವಾರ ನಡೆಯಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಿದ್ಧವಾಗಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಗುಜರಾತ್‌ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳಲ್ಲೂ ಸ್ಟಾರ್‌ ಆಟಗಾರರ್ತಿಯರಿದ್ದರೂ ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವುದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ.

ಡೆಲ್ಲಿ ಪ್ಯಾಪಿಟಲ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 2 ಗೆಲುವು 2 ಸೋಲು ಕಂಡಿದ್ದು 4 ಅಂಕ ಕಲೆ ಹಾಕಿದೆ. ಇನ್ನು ಗುಜರಾತ್ ಜೈಂಟ್ಸ್‌ ಆಡಿರುವ 3 ಪಂದ್ಯಗಳಲ್ಲಿ 1 ಗೆಲುವು, 2 ಸೋಲು ಕಂಡಿದ್ದು, 2 ಅಂಕ ಸೇರಿಸಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಕನಸು ಉಭಯ ತಂಡಗಳದ್ದಾಗಿದೆ. ಉಭಯ ತಂಡಗಳು ತಾವಾಡಿದ ಹಿಂದಿನ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ರೋಚಕತೆ ಹೆಚ್ಚಿದೆ.

DC vs GG WPL 2025 Meg Lanning vs Ashleigh Gardner in a High-Stakes Clash at Chinnaswamy

ಲ್ಯಾನಿಂಗ್ ಆಧಾರ

ಡೆಲ್ಲಿ ಕ್ಯಾಪಿಟಲ್ಸ್ ಪ್ರಸಕ್ತ ಲೀಗ್‌ನಲ್ಲಿ ಸ್ಟಾರ್ ಆಟಗಾರ್ತಿ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್ ಅವರ ಮೇಲೆ ಬಹಳ ನಿಲಂಬಿತವಾಗಿದೆ. ಇವರು ದೊಡ್ಡ ಇನಿಂಗ್ಸ್‌ ಕಟ್ಟದೇ ಇದ್ದಲ್ಲಿ ಆ ಒತ್ತಡವನ್ನು ಬೇರೆ ಆಟಗಾರ್ತಿಯರು ಹೊರಲು ಆಗುತ್ತಿಲ್ಲ. ಟಾಪ್ ಆರ್ಡರ್‌ನಲ್ಲಿ ಕಾಣಿಸಿಕೊಳ್ಳುವ ಶೆಫಾಲಿ ವರ್ಮಾ ಹಾಗೂ ಜೆಮಿಮಾ ರೋಡ್ರಿಗಸ್‌ ಒಳ್ಳೆಯ ಟಚ್‌ನಲ್ಲಿದ್ದಾರೆ. ಆದರೆ ಸ್ಥಿರ ಪ್ರದರ್ಶನ ನೀಡದೆ ಇರುವುದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೇ ಆದರೆ ಈ ಆಟಗಾರ್ತಿಯರ ಪರಿಸ್ಥಿತಿಗೆ ಅನುಗುಣವಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಜೆಸ್ ಜೊನಾಸೆನ್, ಅನ್ನಾಬೆಲ್ ಸದರ್ಲ್ಯಾಂಡ್ ಉತ್ತಮ ಲಯವನ್ನು ಕಂಡುಕೊಂಡಿದ್ದು, ಇವರಿಗೆ ಉಳಿದ ಬೌಲರ್‌ಗಳು ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ.

DC vs GG WPL 2025 Meg Lanning vs Ashleigh Gardner in a High-Stakes Clash at Chinnaswamy

ಆಶ್ಲೀ ಗಾರ್ಡ್ನರ್ ಬಲ

ಗುಜರಾಟ್‌ ಜೈಂಟ್ಸ್ ತಂಡದ ನಾಯಕಿ ಆಶ್ಲೀ ಗಾರ್ಡ್ನರ್ ತಂಡದ ಸ್ಥೈರ್ಯ ಹಾಗೂ ಬಲವಾಗಿದ್ದಾರೆ. ಇವರು ಪ್ರಸಕ್ತ ಋತುವಿನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಇವರು ಆಡಿದ 3 ಪಂದ್ಯಗಳಲ್ಲಿ 70ರ ಸರಾಸರಿಯಲ್ಲಿ 141 ರನ್‌ ಸಿಡಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳು ಸಹ ಸೇರಿವೆ. ಬರೀ ಬ್ಯಾಟಿಂಗ್ ಅಷ್ಟೇ ಅಲ್ಲ ಇವರು ತಂಡಕ್ಕೆ ಬೌಲಿಂಗ್‌ನಲ್ಲೂ ನೆರವಾಗಬಲ್ಲ ಪ್ಲೇಯರ್. ಈಗಾಗಲೇ ಟೂರ್ನಿಯಲ್ಲಿ ಇವರು 4 ವಿಕೆಟ್‌ ಕಬಳಿಸಿದ್ದಾರೆ.

ಭಾರತದ ಅನುಭವಿ ಆಟಗಾರ್ತಿ ಹರ್ಲೀನ್ ಡಿಯೋಲ್, ವಿಂಡೀಸ್‌ನ ಡಿಯಾಂಡ್ರಾ ಡಾಟಿನ್, ಆರಂಭಿಕ ಬೆತ್ ಮೂನಿ ಸೊಗಸಾದ ಆಟವನ್ನು ಆಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ದೊಡ್ಡ ಗೆಲುವಿನ ಕನಸು ನನಸಾಗುತ್ತದೆ. ಈ ತಂಡದಲ್ಲಿರುವ 20 ವರ್ಷದ ಯುವ ಸ್ಪಿನ್ ಬೌಲರ್‌ ಪ್ರೀಯಾ ಮಿಶ್ರಾ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಉಳಿದ ಬೌಲರ್‌ಗಳು ತಂಡ ತಮಗೆ ನೀಡುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕಿದೆ.

Story first published: Tuesday, February 25, 2025, 8:10 [IST]
Other articles published on Feb 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+