ಬುಧವಾರ, ಏಪ್ರಿಲ್ 3ರಂದು ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ್‌ರೆಡ್ಡಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ರೋಚಕ ಘರ್ಷಣೆಯು ಭರ್ಜರಿ ಬ್ಯಾಟಿಂಗ್‌ನಿಂದ ತುಂಬಿತ್ತು.
ಕೆಕೆಆರ್ ತಂಡದ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 263 ರನ್‌ಗಳ ದಾಖಲೆ ಹಿಂದೆ ಬಿದ್ದಿತು ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ಅತ್ಯಧಿಕ ಐಪಿಎಲ್ ಮೊತ್ತದ ದಾಖಲೆಯ ಸನಿಹಕ್ಕೆ ಬಂದಿತ್ತು.

ಆದರೆ, ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಬೌಲರ್ ಇಶಾಂತ್ ಶರ್ಮಾ ಅವರ ಕೊನೆಯ ಓವರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯೋಜನೆಗಳನ್ನು ವಿಫಲಗೊಳಿಸಿತು.
ಸನ್‌ರೈಸರ್ಸ್ ಹೈದರಾಬಾದ್‌ನ ಅತ್ಯಧಿಕ ಸ್ಕೋರ್‌ನ ಐಪಿಎಲ್ ದಾಖಲೆಯನ್ನು ಉಡೀಸ್ ಮಾಡಲು ಅಂತಿಮ ಓವರ್‌ನಲ್ಲಿ 14 ರನ್‌ಗಳ ಅವಶ್ಯಕತೆ ಇತ್ತು. ಇನ್ನಿಂಗ್ಸ್‌ನ ಕೊನೆಯ ಓವರ್ ಎಸೆಯಲು ಇಶಾಂತ್ ಶರ್ಮಾ ಬಂದರು ಮತ್ತು ಸ್ಫೋಟಕ ಬ್ಯಾಟರ್ ಆಂಡ್ರೆ ರಸೆಲ್ ಎದುರಿಸಿದರು. ಒತ್ತಡದ ಹೊರತಾಗಿಯೂ, ಭಾರತೀಯ ಅನುಭವಿ ವೇಗಿ ಧೈರ್ಯದಿಂದ ಚೆಂಡು ಎಸೆದರು.

ಇಶಾಂತ್ ಶರ್ಮಾ ಅವರ ಉತ್ಕೃಷ್ಟ ಗುಣಮಟ್ಟದ ಯಾರ್ಕರ್ ಎಸೆದರು, ಯಾರೂ ನಿರೀಕ್ಷಿಸದ ರೀತಿಯಲ್ಲಿ ಇದು ಆಂಡ್ರೆ ರಸೆಲ್ ಅವರ ಬ್ಯಾಟ್ ವಂಚಿಸಿ ಸ್ಟಂಪ್‌ಗಳು ಛಿದ್ರಗೊಂಡಿದ್ದರಿಂದ ದಿಗ್ಭ್ರಮೆಗೊಂಡರು. ಅಲ್ಲದೆ ಯಾರ್ಕರ್ ತಪ್ಪಿಸಲು ಹೋಗಿ ಆಂಡ್ರೆ ರಸೆಲ್ ನೆಲಕ್ಕೆ ಬಿದ್ದರು.
ನಂತರ ಈ ಎಸೆತಕ್ಕಾಗಿ ಜಮೈಕಾದ ಪವರ್-ಹಿಟ್ಟರ್‌ನಿಂದಲೂ ಇಶಾಂತ್ ಶರ್ಮಾ ಮೆಚ್ಚುಗೆ ಗಳಿಸುವ ಮೂಲಕ ಋತುವಿನ ಅತ್ಯುತ್ತಮ ಎಸೆತಗಳಲ್ಲಿ ಒಂದನ್ನು ಎಸೆದರು.
ಸುನಿಲ್ ನರೈನ್ ಅವರ ವಿಧ್ವಂಸಕ ಬ್ಯಾಟಿಂಗ್, ಆಂಗ್‌ಕ್ರಿಶ್ ರಘುವಂಶಿ ಮತ್ತು ಆಂಡ್ರೆ ರಸೆಲ್ ಅವರ ಆಕ್ರಮಣಕಾರಿ ಆಟವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 7 ವಿಕೆಟ್‌ಗೆ 272 ರನ್ ಕಲೆಹಾಕಲು ಸಹಾಯ ಮಾಡಿತು.
ಸುನಿಲ್ ನರೈನ್ 85 ರನ್, ಆಂಗ್‌ಕ್ರಿಶ್ ರಘುವಂಶಿ 54 ರನ್, ಆಂಡ್ರೆ ರಸೆಲ್ 41 ರನ್ ಮತ್ತು ರಿಂಕು ಸಿಂಗ್ ಅವರ ತ್ವರಿತ 26 ರನ್‌ಗಳು ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳಿಗೆ 120 ನಿಮಿಷಗಳ ಚಿತ್ರಹಿಂಸೆಗೆ ಸಾಕ್ಷಿಯಾಯಿತು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್‌ನಲ್ಲಿ ಇದುವರೆಗೆ ಎರಡನೇ ಅತ್ಯಧಿಕ ಮೊತ್ತವನ್ನು ಗಳಿಸಿತು.
273 ರನ್‌ಗಳ ಬೃಹತ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಅರ್ಧಶತಕಗಳ ಹೊರತಾಗಿಯೂ 17.2 ಓವರ್‌ಗಳಲ್ಲಿ 166 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಕೆಕೆಆರ್ ತಂಡದ ವಿರುದ್ಧ 106 ರನ್‌ಗಳ ಸೋಲು ಅನುಭವಿಸಿತು.