Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs KKR: ಐಪಿಎಲ್‌ ಲೀಗ್ ಹಂತಕ್ಕೆ ತೆರೆ, ಕೆಕೆಆರ್‌ ಎದುರು ಅಬ್ಬರಿಸಿದ ಕ್ಯಾಪಿಟಲ್ಸ್‌

ಕೋಲ್ಕತ್ತಾ: ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್‌ ಲೀಗ್‌ನ 70ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 40 ರನ್‌ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿತು. ಈ ಮೂಲಕ ಅಕ್ಷರ್ ಪಟೇಲ್ ಪಡೆ ಗೆಲುವಿನೊಂದಿಗೆ ಲೀಗ್‌ಗೆ ಗುಡ್ ಬೈ ಹೇಳಿದೆ. ಅಲ್ಲದೆ ಆಡಿದ 14 ಪಂದ್ಯಗಳಲ್ಲಿ 7ನೇ ಜಯ ಸಾಧಿಸಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ ಈ ಲೀಗ್‌ಗೆ ವಿದಾಯ ಹೇಳಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಅಭಿಷೇಕ್‌ ಪೊರೆಲ್‌ (22) ಹಾಗೂ ಕನ್ನಡಿಗ ಕೆಎಲ್ ರಾಹುಲ್‌ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 40 ರನ್‌ ಸೇರಿಸಿತು. ಭರವಸೆಯ ಯುವ ಆಟಗಾರ ಸಾಹಿಲ್ ಪರಾಖ್‌ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್ ಬಾರಿಸಿ ಇಲ್ಲದ ರನ್‌ ಹೊಡೆಯಲು ಹೋಗಿ ಔಟ್ ಆದರು. ಇವರು ಔಟ್ ಆಗುವ ಮುನ್ನ ರಾಹುಲ್ ಜೊತೆಗೆ ಸಾಹಿಲ್ 47 ರನ್‌ ಸಿಡಿಸಿದರು.

DC vs KKR

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ 30 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 60 ರನ್‌ ಬಾರಿಸಿದರು. ನಾಯಕ ಅಕ್ಷರ್ ಪಟೇಲ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್‌ ಸಿಡಿಸಿದರು. ಡೇವಿಡ್ ಮಿಲ್ಲರ್ 28 ರನ್ ಬಾರಿಸಿದರೆ, ಆಶುತೋಷ್ ಶರ್ಮಾ ಅಜೇಯ 18 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 203 ರನ್‌ ಸೇರಿಸಿತು.

ಗೆಲುವಿನ ಅವಕಾಶ ಕೈ ಚೆಲ್ಲಿದ ಕೆಕೆಆರ್‌

ಗುರಿಯನ್ನು ಹಿಂಬಾಲಿಸಿದ ಕೆಕೆಆರ್‌ ತಂಡದ ಆರಂಭ ಸಹ ಸಾಧಾರಣವಾಗಿತ್ತು. ಆರಂಭಿಕರಾದ ಫಿನ್ ಅಲೆನ್ (20 ರನ್) ಹಾಗೂ ನಾಯಕ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 43 ರನ್‌ ಸೇರಿಸಿತು. ಕರ್ನಾಟಕದ ಆಟಗಾರ ಮನೀಷ್ ಪಾಂಡೆ ಸಹ ಉತ್ತಮ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದರು. ಆದರೆ ಇವರ ಆಟ 25 ರನ್‌ಗಳಿಗೆ ಕೊನೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಮರೂನ್ ಗ್ರೀನ್ (2) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ರೋವ್‌ಮನ್ ಪೋವೆಲ್ 29 ರನ್‌ ಬಾರಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು.

DC vs KKR

ನಾಯಕ ಅಜಿಂಕ್ಯ ರಹಾನೆ 39 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿದರು. ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೆಕೆಆರ್ ಕೈ ಚೆಲ್ಲಿತು. ಕೋಲ್ಕತ್ತಾ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಗಿದೆ. ಕೆಕೆಆರ್‌ ಸೋಲಿನ ಮೂಲಕ 19ನೇ ಆವೃತ್ತಿಯ ಐಪಿಎಲ್‌ಗೆ ವಿದಾಯ ಹೇಳಿತು. ಕೆಕೆಆರ್‌ ಆಡಿದ 14 ಪಂದ್ಯಗಳಲ್ಲಿ 6 ಜಯ, 7 ಸೋಲು, 1 ಪಂದ್ಯ ರದ್ದಾಗಿದ್ದರಿಂದ 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 7ನೇ ಸ್ಥಾನ ಹೊಂದಿದೆ.

Story first published: Sunday, May 24, 2026, 23:39 [IST]
Other articles published on May 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+