For Quick Alerts
ALLOW NOTIFICATIONS  
For Daily Alerts
 

IPL 2024: ಸೋಲಿನ ಗಾಯದ ಮೇಲೆ ದಂಡದ ಬರೆ; ರಿಷಭ್ ಪಂತ್‌ಗೆ 24 ಲಕ್ಷ ರೂಪಾಯಿ ಫೈನ್!

ಬುಧವಾರ, ಏಪ್ರಿಲ್ 3ರಂದು ವಿಶಾಖಪಟ್ಟಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತ ನಂತರ, ಐಪಿಎಲ್ 2024ರಲ್ಲಿ ಸತತ ಎರಡನೇ ಬಾರಿಗೆ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ರಿಷಭ್ ಪಂತ್‌ಗೆ ಮಾತ್ರ ದಂಡ ವಿಧಿಸಲಿಲ್ಲ, ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ನ ಆಡುವ 11ರ ಬಳಗದ ಉಳಿದ ಆಟಗಾರರಿಗೂ ಅಪರಾಧಕ್ಕಾಗಿ ದಂಡ ವಿಧಿಸಲಾಗಿದೆ. ಈ ಪಂದ್ಯದ ಸೋಲಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪ್ರಸಕ್ತ ಆವೃತ್ತಿಯ ಮೂರನೇ ಸೋಲನ್ನು ಅನುಭವಿಸಿತು.

DC vs KKR IPL 2024 BCCI Penalizes Rishabh Pant for Violating IPL Code of Conduct

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಠಿಣ ಗುರಿಯನ್ನು ಸ್ಥಾಪಿಸಿತು.

ನಂತರ ಟ್ರಿಸ್ಟಾನ್ ಸ್ಟಬ್ಸ್ ಜೊತೆಗೂಡಿ ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಮಿಂಚಿದರೂ, ತಂಡದ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂತಿಮವಾಗಿ 16.4 ಓವರ್‌ಗಳಲ್ಲಿ 166 ರನ್‌ಗಳಿಗೆ ಸರ್ವಪತನ ಕಂಡಿದ್ದರಿಂದ, ಕೆಕೆಆರ್ ತಂಡ 106 ರನ್‌ಗಳ ಗೆಲುವು ಸಾಧಿಸಿತು.

DC vs KKR IPL 2024 BCCI Penalizes Rishabh Pant for Violating IPL Code of Conduct

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ನಾಯಕ ರಿಷಭ್ ಪಂತ್‌ಗೆ ದಂಡ ವಿಧಿಸಲಾಗಿದೆ ಎಂದು ಪಂದ್ಯದ ನಂತರ ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

ಇದಕ್ಕೂ ಮುನ್ನ ಸಿಎಸ್‌ಕೆ ತಂಡದ ವಿರುದ್ಧದ ಗೆಲುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದೇ ಅಪರಾಧಕ್ಕಾಗಿ ದಂಡನೆಗೆ ಒಳಗಾಗಿದ್ದ ಕಾರಣ, ರಿಷಭ್ ಪಂತ್ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು.

ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡದ ಉಳಿದವರಿಗೆ ತಲಾ 6 ಲಕ್ಷ ರೂಪಾಯಿ ಅಥವಾ ಅವರ ಪಂದ್ಯದ ಶುಲ್ಕದ 25 ಪ್ರತಿಶತವನ್ನು ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ.

"ಏಪ್ರಿಲ್‌ 3ರಂದು ವಿಶಾಖಪಟ್ಟಣದ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್ 2024ರ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ದಂಡ ವಿಧಿಸಲಾಗಿದೆ," ಎಂದು ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

"ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ದರದ ಅಪರಾಧಗಳಿಗೆ ಸಂಬಂಧಿಸಿದಂತೆ, ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎರಡನೇ ಅಪರಾಧವಾಗಿರುವುದರಿಂದ, ರಿಷಭತ್ ಪಂತ್‌ಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಆಡುವ 11ರ ಬಳಗದ ಉಳಿದ ಸದಸ್ಯರು ಪ್ರತ್ಯೇಕವಾಗಿ 6 ಲಕ್ಷ ರೂಪಾಯಿ ಅಥವಾ ಅವರ ಪಂದ್ಯದ ಶುಲ್ಕದ 25 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ," ಎಂದು ಹೇಳಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಂದಿನ ಪಂದ್ಯ

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆಕೆಆರ್ ವಿರುದ್ಧದ ಸೋಲಿನ ಬಗ್ಗೆ ಯೋಚಿಸಲು ಹೆಚ್ಚಿನ ಸಮಯ ಹೊಂದಿಲ್ಲ. ಏಕೆಂದರೆ ಭಾನುವಾರ, ಏಪ್ರಿಲ್ 7ರಂದು ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲು ಮುಂಬೈಗೆ ಪ್ರಯಾಣಿಸಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೂರು ಸೋಲು ಮತ್ತು ಒಂದು ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ಆಡಿದ ಮೂರು ಪಂದ್ಯಗಳನ್ನೂ ಸೋಲುವ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಸೊರಗುತ್ತಿದೆ.

Story first published: Thursday, April 4, 2024, 16:43 [IST]
Other articles published on Apr 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+