Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿನ್‌ ಅಲೆನ್ ಬಿರುಗಾಳಿ ಬ್ಯಾಟಿಂಗ್‌, ಕೇವಲ 14.2 ಓವರ್‌ಗಳಲ್ಲಿ 143 ಟಾರ್ಗೆಟ್‌ ತಲುಪಿದ ಕೆಕೆಆರ್‌: ಡೆಲ್ಲಿಗೆ ಹೀನಾಯ ಸೋಲು

DC Vs KKR IPL 2026: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 8) ನಡೆದ ಐಪಿಎಲ್ ಪಂದ್ಯದಲ್ಲಿ ಫಿನ್ ಅಲೆನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸಂಪೂರ್ಣ ವರದಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್‌ ಗೆದ್ದ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 142 ರನ್‌ಗಳನ್ನು ಕಲೆಹಾಕಿ 143 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಗುರಿಯನ್ನು ಕೆಕೆಆರ್‌ ಕೇವಲ 14.2 ಓವರ್‌ಗಳಲ್ಲಿ ತಲುಪಿ ಭರ್ಜರಿ ಜಯ ದಾಖಲಿಸಿದೆ.

DC vs KKR IPL 2026 Finn Allen s Explosive Century Powers Kolkata Knight Riders to Big Win in Delhi

ಗೆಲುವಿನ 'ಶತಕ'ದೊಂದಿಗೆ ಮಿಂಚಿದ ಫಿನ್ ಅಲೆನ್

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 143 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಫಿನ್ ಅಲೆನ್ ಅವರ ಭರ್ಜರಿ ಶತಕದ ನೆರವಿನಿಂದ ಭಾರಿ ಜಯ ದಾಖಲಿಸಿತು. ಕೇವಲ 47 ಎಸೆತಗಳನ್ನು ಎದುರಿಸಿದ ಅಲೆನ್ 5 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ ಅಜೇಯ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕ್ಯಾಮರಾನ್ ಗ್ರೀನ್ 27 ಎಸೆತಗಳಲ್ಲಿ 2 ಸಿಕ್ಸರ್‌ಗಳ ಸಹಿತ ಅಜೇಯ 33 ರನ್‌ ಕಲೆಹಾಕಿದರು. ಉಳಿದಂತೆ ನಾಯಕ ಅಜಿಂಕ್ಯ ರಹಾನೆ 13 ರನ್‌ಗಳ ಕೊಡುಗೆ ನೀಡಿದರು.

ದುಬಾರಿಯಾದ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಸ್‌

ಡೆಲ್ಲಿ ತಂಡದ ಬೌಲರ್‌ಗಳು ಈ ಪಂದ್ಯದಲ್ಲಿ ಹೆಚ್ಚು ರನ್‌ಗಳನ್ನು ನೀಡಿ ದುಬಾರಿಯಾದರು. ಕುಲದೀಪ್‌ ಯಾದವ್ 3 ಓವರ್‌ ಬೌಲಿಂಗ್ ಎಸೆದು 41 ರನ್‌ ನೀಡಿದರೆ, ವಿಪ್ರಜ್ ನಿಗಮ್ 2 ಓವರ್‌ಗೆ 34, ಮಿಚೆಲ್ ಸ್ಟಾರ್ಕ್‌ 3 ಓವರ್‌ಗೆ 31 ರನ್‌ಗಳನ್ನು ನೀಡಿ ದುಬಾರಿ ಎನಿಸಿಕೊಂಡರು. ಉಳಿದಂತೆ ಲುಂಗಿ ಎನ್‌ಗ್ಡಿ 2 ಓವರ್‌ ಎಸೆದು ಕೇವಲ 7 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರೆ, ನಾಯಕ ಅಕ್ಷರ್ ಪಟೇಲ್ 4 ಓವರ್ ಎಸೆದು 27 ರನ್‌ ನೀಡಿ ಒಂದು ವಿಕೆಟ್‌ ಕಿತ್ತು ಗಮನ ಸೆಳೆದರು.

ಡೆಲ್ಲಿ ಪರ ಮಿಂಚಿದ ಪತುಮ್ ನಿಸ್ಸಾಂಕ

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಆರಂಭಿಕರಾದ ಕೆ.ಎಲ್.ರಾಹುಲ್ ಮತ್ತು ಪತುಮ್ ನಿಸ್ಸಾಂಕ ಮೊದಲ ವಿಕೆಟ್‌ಗೆ 49 ರನ್‌ಗಳ ವೇಗದ ಜೊತೆಯಾಟ ಆಡಿದರು. ರಾಹುಲ್‌ 23 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ನಿಸ್ಸಾಂಕ ಎದೆಗುಂದದೆ ಸ್ಫೋಟಕ ಇನ್ನಿಂಗ್ಸ್‌ ಆಡಿದರು.

ಪತುಮ್ ನಿಸ್ಸಾಂಕ 29 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ ಸಹಿತ 50 ರನ್ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅವರು ಔಟಾದ ನಂತರ ಡೆಲ್ಲಿ ತಂಡದ ರನ್‌ ವೇಗಕ್ಕೆ ಕೆಕೆಆರ್ ಬೌಲರ್‌ಗಳು ಕಡಿವಾಣ ಹಾಕಿದರು. ಕೊನೆಯಲ್ಲಿ ಅಶುತೋಷ್ ಶರ್ಮಾ 28 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 39 ರನ್ ಸಿಡಿಸಿ ತಂಡದ ಮೊತ್ತವನ್ನು 142ಕ್ಕೆ ತಲುಪಿಸಿದರು. ಉಳಿದವರು ಎರಡಂಕಿ ದಾಟಲಿಲ್ಲ. ಇದರಿಂದ ಡೆಲ್ಲಿ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.

ಒಟ್ಟಿನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ಪರ ಫಿನ್ ಅಲೆನ್ ಅವರ ಈ ಬಿರುಗಾಳಿಯಂತಹ ಬ್ಯಾಟಿಂಗ್ ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳು ಸಂಪೂರ್ಣವಾಗಿ ಮಂಕಾದರು. ಅಲೆನ್ ಅವರು ಅಜೇಯ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಮಿಂಚಿದ್ದು, ಇವರ ಈ ಆಕ್ರಮಣಕಾರಿ ಆಟಕ್ಕೆ ಮನಸೋತ ಕನ್ನಡಿಗ ಕೆಎಲ್‌ ರಾಹುಲ್‌ ಶ್ಲಾಘನೆ ವ್ಯಕ್ತಪಡಿದರು.

Story first published: Friday, May 8, 2026, 23:24 [IST]
Other articles published on May 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+