KKR vs DC IPL 2025: ಅಜಿಂಕ್ಯ ಪಡೆಯ ಪ್ಲೇ ಆಫ್ ಆಸೆ ಜೀವಂತವಾಗಿರಲು ಇದುವೇ ಮುಖ್ಯ ಕಾರಣ
ಡೆಲ್ಲಿ ಕ್ಯಾಪಿಟಲ್ಸ್ ತಂಡ ತವರಿನಲ್ಲಿ ಸತತ ಎರಡನೇ ಸೋಲು ಕಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮಹತ್ವದ ಪಂದ್ಯದಲ್ಲಿ 14 ರನ್ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಕೆಕೆಆರ್ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಡೆಲ್ಲಿ ಈ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 10 ಪಂದ್ಯಗಳಲ್ಲಿ 6ಜಯ, 4 ಸೋಲು ಕಂಡಿದ್ದು, ನಾಲ್ಕನೇ ಸ್ಥಾನದಲ್ಲಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪವರ್ ಫುಲ್ ಆರಂಭವನ್ನು ಪಡೆಯಿತು. ಆರಂಭಿಕರಾದ ರಹಮತುಲ್ಲಾ ಗುರ್ಬಾಜ್ (26) ಹಾಗೂ ಸುನಿಲ್ ನರೈನ್ (27) 48 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (26) ತಂಡಕ್ಕೆ ಕೊಂಚ ನೆರವಾದರು. ಮಧ್ಯಮ ಕ್ರಮಾಂಕದಲ್ಲಿ ಅಂಗ್‌ಕೃಷ್ ರಘುವಂಶಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ತಂಡಕ್ಕೆ ನೆರವಾದರು. ರಿಂಕು ಸಿಂಗ್ 36 ರನ್ ಸಿಡಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 204 ರನ್ ಸಿಡಿಸಿತು.

ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡದ ಆರಂಭ ಕಳಪೆಯಾಗಿತ್ತು. ಅಭಿಷೇಕ್ ಪೋರೆಲ್, ಕರುಣ್ ನಾಯರ್ ಬೇಗನೆ ವಿಕೆಟ್ ಒಪ್ಪಿಸಿದರು. ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡುವಲ್ಲಿ ವಿಫಲವಾದ ಡೆಲ್ಲಿ ಒತ್ತಡಕ್ಕೆ ಒಳಗಾಯಿತು. ರನ್‌ಗಳ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ಬ್ಯಾಟರ್‌ಗಳು ವಿಫಲರಾದರು. ಫಾಫ್ ಡುಪ್ಲೇಸಿಸ್ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿದರು. ಇನ್ನು ಗಾಯಕ್ಕೆ ತುತ್ತಾಗಿದ್ರೂ ಬ್ಯಾಟ್ ಮಾಡಿದ ಅಕ್ಷರ್ ಪಟೇಲ್ 4 ಬೌಂಡರಿ, 3 ಸಿಕ್ಸರ್ ಸೇರಿದಂತೆ 43 ರನ್ ಬಾರಿಸಿದರು. ಆಲ್‌ರೌಂಡರ್ ವಿಪ್ರಜ್ ನಿಗಮ್ (38) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆದರೆ ಈ ಪಂದ್ಯದ ಟರ್ನಿಂಗ್ ಪಾಯಿಂಟ್ ಯಾವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಈ ಪಂದ್ಯದಲ್ಲಿ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್ ಕಲೆ ಹಾಕಿ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ಎರಡನೇ ಸೋಲಿಗೆ ಆ ಒಂದು ಕಾರಣ ಪ್ರಮುಖವಾಗಿ ಕಾಣುತ್ತಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಇಲ್ಲದ ರನ್ ಕದಿಯಲು ಹೋಗಿ ಔಟ್ ಆಗಿದ್ದು ಪಂದ್ಯದ ಚಿತ್ರಣವನ್ನು ಬದಲಿಸಿತು.
ಆಗಿದ್ದೇನು?
ಕೆಎಲ್ ರಾಹುಲ್ ನಾನ್ ಸ್ಟ್ರೈಕರ್‌ನಲ್ಲಿ ಇದ್ದರು. ಫಾಫ್ ಡುಪ್ಲೇಸಿಸ್ 6.3 ಓವರ್‌ನಲ್ಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಚೆಂಡನ್ನು ತಳ್ಳಿ ಒಂದು ರನ್ ಪಡೆಯಲು ಮುಂದಾದರು. ಈ ವೇಳೆ ಇಬ್ಬರು ಆಟಗಾರರ ನಡುವೆ ಹೊಂದಾಣಿಕೆ ಮಿಸ್ ಆಗಿತ್ತು. ರಾಹುಲ್ ಆರಂಭದಲ್ಲಿ ಓಡಲು ಕೊಂಚ ಹಿಂದೇಟು ಹಾಕಿದ್ರೂ, ಫಾಫ್ ಓಡುತ್ತಿದ್ದಂತೆ, ರಾಹುಲ್ ರನ್ ಕದಿಯಲು ಆರಂಭಿಸಿದರು. ಆದರೆ ಅಲ್ಲಿ ಫೀಲ್ಡ್ ಮಾಡುತ್ತಿದ್ದ ಸುನಿಲ್ ನರೈನ್ ಅಮೋಘ ಥ್ರೋ ಮಾಡಿ ರಾಹುಲ್ ಅವರನ್ನು ಔಟ್ ಮಾಡಿದರು. ಸೆಂಟಿಮಿಟರ್ ಅಂತರದಲ್ಲಿ ರಾಹುಲ್ ಕ್ರೀಸ್‌ಗೆ ಬರುವಲ್ಲಿ ವಿಫಲರಾಗಿ ಪೆವಿಲಿಯನ್‌ಗೆ ಸೇರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications