Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs KKR: ಪ್ಲೇ ಆಫ್‌ ಮೇಲೆ ಕೋಲ್ಕತ್ತಾ, ಡೆಲ್ಲಿ ಚಿತ್ತ

ನವದೆಹಲಿ: ಕಳೆದ ಮೂರು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್) ತಂಡದ ಸವಾಲನ್ನು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡ ಎದುರಿಸಲಿದೆ. ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದೆ. ಪ್ಲೇ ಆಫ್‌ ದೃಷ್ಟಿಯಿಂದ ಕೆಕೆಆರ್‌ ಹಾಗೂ ಡಿಸಿ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಎರಡೂ ತಂಡಗಳಲ್ಲಿ ಅಂತಾರಾಷ್ಟ್ರೀಯ ತಂಡಗಳನ್ನು ಆಡಿದ ಅನುಭವ ಹೊಂದಿರುವ ಆಟಗಾರರು ಇದ್ದು, ಎಲ್ಲರ ಚಿತ್ತವನ್ನು ಕದ್ದಿದೆ.

ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ 10 ಪಂದ್ಯಗಳಲ್ಲಿ 4 ಜಯ, 6 ಸೋಲು ಕಂಡಿದ್ದು, 8 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಇನ್ನು ಕೆಕೆಆರ್‌ ತಂಡ 9 ಪಂದ್ಯಗಳಲ್ಲಿ 3 ಜಯ, 5 ಸೋಲು, 1 ಪಂದ್ಯ ರದ್ದಾಗಿದ್ದರಿಂದ 7 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡದ ಪ್ಲೇ ಆಫ್‌ ಪ್ರವೇಶಿಸುವ ಕನಸು ಹಸಿರಾಗಿರುತ್ತದೆ.

DC vs KKR

ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 8 ವಿಕೆಟ್‌ ಸೋಲು ಕಂಡಿತ್ತು. ಹೀಗಾಗಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಲ್ಲುವ ಅನಿವಾರ್ಯತೆ ಇದೆ. ಆರಂಭಿಕರಾದ ಕೆಎಲ್ ರಾಹುಲ್ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿದ್ದು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರಿಗೆ ಪತುಮ್ ನಿಸ್ಸಂಕಾ ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ. ಕಳೆದ ಕೆಲವು ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ನಿತೀಶ್‌ ರಾಣಾ ನೆಲಕಚ್ಚಿ ಬ್ಯಾಟ್ ಮಾಡಬೇಕು. ಟ್ರಿಸ್ಟನ್‌ ಸ್ಟಬ್ಸ್‌, ಸಮೀರ್ ರಿಜ್ವಿ, ಆಶುತೋಷ್‌ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ.

ಡೆಲ್ಲಿ ತಂಡದ ಬೌಲಿಂಗ್ ಬಲಿಷ್ಠವಾಗಿದೆ. ವೇಗದ ಬೌಲರ್‌ಗಳಾಗಿ ಮಿಚೆಲ್ ಸ್ಟಾರ್ಕ್, ಲುಂಗಿ ಎನ್‌ಗಿಡಿ, ಟಿ ನಟರಾಜನ್‌ ಬಿಗುವಿನ ದಾಳಿ ನಡೆಸಿ ಅಬ್ಬರಿಸುವ ಅನಿವಾರ್ಯತೆ ಇದೆ. ಸ್ಪಿನ್ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್‌, ಕುಲ್‌ದೀಪ್‌ ಯಾದವ್ ಕಮಾಲ್‌ ನಡೆಸಬೇಕಿದೆ.

ಆತ್ಮವಿಶ್ವಾಸದ ಕನಸಿನಲ್ಲಿ ಕೆಕೆಆರ್‌

ಈ ಲೀಗ್‌ನ ಬಲಿಷ್ಠ ತಂಡಗಳಾದ ರಾಜಸ್ಥಾನ್ ರಾಯಲ್ಸ್‌, ಎಲ್‌ಎಸ್‌ಜಿ, ಎಸ್‌ಆರ್‌ಎಚ್‌ ತಂಡಗಳನ್ನು ಮಣಿಸಿ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ, ಫಿನ್ ಅಲೆನ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಅಂಗ್‌ಕ್ರಿಷ್‌ ರಘುವಂಶಿ, ರಿಂಕು ಸಿಂಗ್‌, ಕ್ಯಾಮರೂನ್‌ ಗ್ರೀನ್‌, ರೋವ್‌ಮನ್‌ ಪೊವೆಲ್‌, ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ವೇಗದ ಬೌಲಿಂಗ್‌ನಲ್ಲಿ ವೈಭವ್ ಆರೋರಾ, ಕಾರ್ತಿಕ್ ತ್ಯಾಗಿ ಸ್ಥಿರ ಪ್ರದರ್ಶನ ನೀಡಬೇಕಿದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸುನಿಲ್ ನರೈನ್, ವರುಣ್‌ ಚಕ್ರವರ್ತಿ ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಅಂದಾಗ 2 ಅಂಕದ ಕನಸು ನನಸಾಗುತ್ತದೆ.

ಪಂದ್ಯ ನಡೆಯುವ ಸಮಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ ವರ್ಕ್‌

Story first published: Thursday, May 7, 2026, 19:31 [IST]
Other articles published on May 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+