Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs KKR; ಕೋಲ್ಕತ್ತಾ ಸ್ಪಿನ್ ಬೌಲಿಂಗ್‌ಗೆ ಲಾಕ್‌ ಆದ ಕ್ಯಾಪಿಟಲ್ಸ್‌

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 19ನೇ ಆವೃತ್ತಿಯ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಕೆಕೆಆರ್‌ ಮೊದಲು ಬೌಲಿಂಗ್ ಮಾಡಲು ಮುಂದಾಯಿತು.

ಡೆಲ್ಲಿ ತಂಡ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆರಂಭಿಕ ಪತುಮ್ ನಿಸ್ಸಂಕಾ (50 ರನ್‌, 5 ಬೌಂಡರಿ, 3 ಸಿಕ್ಸರ್) ಹಾಗೂ ಕೆಎಲ್ ರಾಹುಲ್ (23) ಮೊದಲ ವಿಕೆಟ್‌ಗೆ 49 ರನ್‌ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ಕೆಕೆಆರ್‌ ಸ್ಪಿನ್ ಬೌಲರ್‌ಗಳ ವಿರುದ್ಧ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಬಂದ ಆಶುತೋಷ್ ಶರ್ಮಾ (3 ಬೌಂಡರಿ, 3 ಸಿಕ್ಸರ್, 39 ರನ್) ತಂಡದ ಮೊತ್ತವನ್ನು ಹಿಗ್ಗಿಸಿದರು. ಡೆಲ್ಲಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 142 ರನ್‌ ಸೇರಿಸಿತು.

DC vs KKR

ಗುರಿಯನ್ನು ಹಿಂಬಾಲಿಸಿದ ಕೆಕೆಆರ್ ತಂಡಕ್ಕೆ ಅದೃಷ್ಟ ಕೈ ಹಿಡಿಯಲಿಲ್ಲ. ಅಜಿಂಕ್ಯಾ ರಹಾನೆ (13), ಅಂಗ್‌ಕ್ರಿಷ್‌ ರಘುವಂಶಿ (1) ದುರಾದೃಷ್ಟವಶಾತ್ ಔಟ್ ಆದರು. ಮೂರನೇ ವಿಕೆಟ್‌ಗೆ ಫಿನ್ ಅಲೇನ್‌ ಹಾಗೂ ಕ್ಯಾಮರೂನ್ ಗ್ರೀನ್‌ ಜೋಡಿ ಶತಕದ ಜೊತೆಯಾಟವನ್ನು ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಅಲ್ಲದೆ ರನ್‌ಗಳನ್ನು ಕೊಟ್ಟು ಕೈ ಸುಟ್ಟುಕೊಂಡವು. ಈ ಪಂದ್ಯದಲ್ಲಿ ಫಿನ್ ಅಲೆನ್ 47 ಎಸೆತಗಳಲ್ಲಿ 5 ಬೌಂಡರಿ, 10 ಸಿಕ್ಸರ್ ಸಹಿತ ಅಜೇಯ 100 ರನ್ ಬಾರಿಸಿದರು. ಕ್ಯಾಮರೂನ್ ಗ್ರೀನ್‌ ಅಜೇಯ 33 ರನ್‌ ಸಿಡಿಸಿದರು.

ಪಂದ್ಯ ಗೆಲ್ಲಲು ಪ್ರಮುಖ ಕಾರಣ ಏನು?

ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟರ್‌ಗಳ ವಿರುದ್ಧ ಕೆಕೆಆರ್‌ ಸ್ಪಿನ್ ಬೌಲರ್‌ಗಳ ಅಮೋಘ ಬೌಲಿಂಗ್ ನಡೆಸಿದರು. ಮೂವರು ಪ್ರಮುಖ ಸ್ಪಿನ್ ಬೌಲರ್‌ಗಳಾದ ಸುನಿಲ್ ನರೇನ್‌, ವರುಣ್‌ ಚಕ್ರವರ್ತಿ, ಅನುಕೂಲ್ ರಾಯ್‌ ಬಿಗುವಿನ ದಾಳಿ ನಡೆಸಿದರು. ಈ ವೇಳೆ ಮೂವರು ಸ್ಪಿನ್ ಬೌಲರ್‌ಗಳು ತಮ್ಮ 4 ಕೋಟಾ ಪೂರ್ಣ ಗೊಳಿಸಿದ್ದು, 12 ಓವರ್‌ಗಳಲ್ಲಿ ಈ ಬೌಲರ್‌ಗಳು 34 ಡಾಟ್‌ ಬೌಲ್ ಮಾಡಿದ್ದಾರೆ. ಸುನಿಲ್‌ ನರೇನ್‌ ರನ್‌ ನೀಡಲು ಜಿಪುಣತನ ಮಾಡಿದರೆ, ಇವರಿಗೆ ವರುಣ್‌, ಅನುಕೂಲ್ ಉತ್ತಮ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್:

ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 142; ಪತುಮ್ ನಿಸ್ಸಂಕಾ 50, ಆಶುತೋಷ್ ಶರ್ಮಾ 39, ಕೆಎಲ್ ರಾಹುಲ್ 23, ಕಾರ್ತಿಕ್ ತ್ಯಾಗಿ 25ಕ್ಕೆ 1 (ಕೆಕೆಆರ್‌), ಅನುಕೂಲ್ ರಾಯ್ 31ಕ್ಕೆ 2 (ಕೆಕೆಆರ್‌)

ಕೋಲ್ಕತ್ತಾ ನೈಟ್‌ ರೈಡರ್ಸ್‌ 14.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 147; ಫಿನ್‌ ಅಲೆನ್ ಅಜೇಯ 100, ಕ್ಯಾಮರೂನ್‌ ಗ್ರೀನ್ ಅಜೇಯ 33, ಅಕ್ಷರ್ ಪಟೇಲ್‌ 27ಕ್ಕೆ 1 (ಡಿಸಿ).

ಪಂದ್ಯದ ಫಲಿತಾಂಶ: 8 ವಿಕೆಟ್‌ಗಳಿಂದ ಪಂದ್ಯ ಗೆದ್ದ ಕೆಕೆಆರ್‌

Story first published: Saturday, May 9, 2026, 7:42 [IST]
Other articles published on May 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+