Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಡೆಲ್ಲಿ ಎದುರು ಮಂಡಿಯೂರಿದ ಮುಂಬೈ: ರಿಷಬ್‌ ಪಡೆಗೆ ಮತ್ತೊಂದು ಜಯ

ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲೂ ಬಿಗಿ ದಾಳಿ ಮುಂದುವರೆಸಿದ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ಮುಂಬೈ ಇಂಡಿಯನ್ಸ್‌ (ಎಂಐ) ತಂಡವನ್ನು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಗ್ಗು ಬಡಿದೆ.

ಕೊನೆವರೆಗೂ ಹೋರಾಟ ನಡೆಸಿದ ಮುಂಬೈ ಇಂಡಿಯನ್ಸ್‌ ಡೆಲ್ಲಿ ಎದುರು ಸೋಲು ಕಂಡಿದೆ. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಮುಂಬೈ 247 ರನ್‌ ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ ಡೆಲ್ಲಿ 10 ರನ್‌ಗಳ ಗೆಲುವು ಸಾಧಿಸಿತು.

DC vs MI IPL 2024 Delhi Capitals win by 10 Runs against Mumbai Indians

ಡೆಲ್ಲಿ ನೀಡಿದ 257 ರನ್‌ ಗುರಿ ಬೆನ್ನತ್ತಿ ಬ್ಯಾಟಿಂಗ್ ಇಳಿದ ಮುಂಬೈ ಅನ್ನು ಉತ್ತಮ ಆರಂಭ ಪಡೆಯುವಲ್ಲಿ ಎಡುವಿತು. ರೋಹಿತ್‌ ಶರ್ಮಾ ಅವರಿಂದ ಅದ್ಭುತ ಇನ್ನಿಂಗ್ಸ್‌ ನಿರೀಕ್ಷಿಸಲಾಗಿತ್ತು. ಆದರೆ ರೋಹಿತ್‌ ಕೇವಲ 8 ರನ್‌ಗಳಿಗೆ ಖಲೀಲ್‌ ಅಹ್ಮದ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ರೋಹಿತ್‌ ಜೊತೆ ಕಣಕ್ಕೀಳಿದಿದ್ದ ಇಶಾನ್‌ ಕಿಶಾನ್‌ ಕೂಡ ಮುಂಬೈಗೆ ಆಸರೆಯಾಗಲಿಲ್ಲ. ನಾಲ್ಕು ಬೌಂಡರಿ ಹೊಡೆದು ಇಶಾನ್‌ (20) ಮುಖೇಶ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ಸೂರ್ಯಕುಮಾರ್‌ ಯಾದವ್‌ 13 ಎಸೆತಗಳಲ್ಲಿ 26 ರನ್‌ಗಳಿಸಿ ಉತ್ತಮ ಲಯದಲ್ಲಿದರು. ಆದರೆ ಖಲೀಲ್‌ ಅಹ್ಮದ್‌ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸೂರ್ಯಕುಮಾರ್‌ ಯಾದವ್‌ ಕ್ಯಾಚ್‌ ಕೊಟ್ಟ ಆಟ ನಿಲ್ಲಿಸಿದರು. ಸೂರ್ಯಕುಮಾರ್‌ ಗೆ ಸಾಥ್‌ ನೀಡಿದ ತಿಲಕ್ ವರ್ಮಾ ತಾಳ್ಮೆ ಆಟವಾಡುವ ಮೂಲಕ ನಂತರ ಬಂದ ಹಾರ್ದಿಕ್‌ ಪಾಂಡ್ಯ ಅವರೊಂದಿಗೆ ಜೊತೆಗೂಡಿ ಬ್ಯಾಟ್‌ ಬೀಸಿದರು.

DC vs MI IPL 2024 Delhi Capitals win by 10 Runs against Mumbai Indians

ಕಳೆದ ಪಂದ್ಯಗಳಿಂದ ಮಂಕಾಗಿದ್ದ ಹಾರ್ದಿಕ್‌ ಪಾಂಡ್ಯ ಡೆಲ್ಲಿ ವಿರುದ್ಧ ಅಬ್ಬರದ ಬ್ಯಾಟಿಂಗ್‌ ಮಾಡಿದರು. 24 ಎಸೆತಗಳನ್ನು ಎದುರಿಸಿದ ಪಾಂಡ್ಯ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ ಮೂಲಕ 46 ರನ್‌ ಕಲೆ ಹಾಕಿ ರಾಸಿಖ್ ದಾರ್ ಸಲಾಂ ಬೌಲಿಂಗ್‌ನಲ್ಲಿ ಔಟ್‌ ಆದರು. ಬಳಿಕ ಬಂದ ನೆಹಾಲ್ ವಧೇರಾ ಕೇವಲ 4 ರನ್‌ಗೆ ಸೀಮಿತವಾಗಿ ಕ್ರೀಸ್‌ನಿಂದ ಹೊರ ನಡೆದರು.

ಆದರೆ ಮುಂಬೈ ವಿಕೆಟ್‌ ಬೀಳುತ್ತಿದರು, ಗಟ್ಟಿಯಾಗಿ ಕ್ರೀಸ್‌ಗೆ ಕಚ್ಚಿ ನಿಂತ ತಿಲಕ್‌ ವರ್ಮಾ ಭರ್ಜರಿ ಅರ್ಧಶತಕ ಹೊಡೆದು ಸಂಭ್ರಮಿಸಿದರು. ತಿಲಕ್‌ ಎದುರಿಸಿದ 31 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಹಾಗು ಬೌಂಡರಿಗಳಿಂದ 63 ರನ್‌ ಗಳಿಸಿ ರನ್‌ ಔಟ್‌ಗೆ ಬಲಿಯಾದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್‌ ಮಾಡುತ್ತಿದ್ದ ಟಿಮ್‌ ಡೇವಿಟ್‌ 37 ರನ್‌ಗಳಿಗೆ ತಮ್ಮ ಆಟವನ್ನು ಮುಖೇಶ್‌ ಬೌಲಿಂಗ್‌ನಲ್ಲಿ ಅಂತ್ಯಗೊಳಿಸಿದರು.

ನಂತರ ಬಂದ ಮೊಹಮ್ಮದ್ ನಬಿ 7 ರನ್‌ಗಳಿಗೆ ವಿಕೆಟ್‌ ಕಳೆದುಕೊಂಡರೆ, ಪಿಯೂಷ್‌ ಚಾವ್ಲಾ 10 ರನ್‌ಗಳಿಸಿ ಔಟ್‌ ಆದರು. ಲುಕಿ ವುಡ್‌ ಅಜೇಯ 9 ರನ್‌ ಗಳಿಸಿದರು.

ಡೆಲ್ಲಿ ಪರ ಸಂಘಟಿತ ಬೌಲಿಂಗ್‌ ಕಂಡು ಬಂದರು ಕೂಡ ಬೌಲರ್ಸ್‌ ಹೆಚ್ಚು ರನ್‌ ಬಿಟ್ಟು ಕೊಟ್ಟರು. ಆದರೆ ಡೆಲ್ಲಿ ಗೆಲುವಿಗೆ ಶ್ರಮಿಸಿದರು. ರಾಸಿಖ್ ದಾರ್ ಸಲಾಂ ಮತ್ತು ಮುಖೇಶ್‌ ಕುಮಾರ್‌ 3 ವಿಕೆಟ್‌ ಪಡೆದರೆ, ಖಲೀಲ್‌ ಅಹ್ಮದ್‌ ಎರಡು ವಿಕೆಟ್‌ ಕಬಳಿಸಿದರು.

Story first published: Saturday, April 27, 2024, 19:52 [IST]
Other articles published on Apr 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+