Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಹೈದರಾಬಾದ್‌-ಡೆಲ್ಲಿ ನಡುವೆ ಮೆಗಾ ಫೈಟ್‌; ಟಾಸ್‌, ಆಡುವ 11ರ ಬಳಗದ ವರದಿ

ಶನಿವಾರ, ಏಪ್ರಿಲ್‌ 20 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌)ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ಸೆಣಸಾಡುತ್ತಿವೆ.

ಈ ಪಂದ್ಯದಲ್ಲಿ ಮೊದಲು ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಂಗ್‌ ಕ್ಯಾಪ್ಟನ್‌ ರಿಷಬ್ ಪಂತ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ಯಾಟ್‌ ಕಮಿನ್ಸ್‌ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್‌ ತಂಡ ಬ್ಯಾಟಿಂಗ್‌ ಮಾಡಲಿದೆ.

DC vs SRH Match Delhi Capitals vs Sunrisers Hyderabad Toss Report and Playing 11

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆಡಿರುವ ಏಳು ಪಂದ್ಯಗಳ ಪೈಕಿ ಕೇವಲ 3 ರಲ್ಲಿ ಗೆಲುವಿನ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಬಲಿಷ್ಠ ಸನ್ ರೈಸರ್ಸ್ ಹೈದರಾಬಾದ್ ತಂಡ ಆರು ಪಂದ್ಯಗಳಲ್ಲಿ 4 ರಲ್ಲಿ ಭರ್ಜರಿ ಜಯಗಳಿಸಿ 4ನೇ ಸ್ಥಾನವನ್ನು ಅಲಂಕರಿಸಿದೆ.

ಡಿಸಿ vs ಎಸ್‌ಆರ್‌ಹೆಚ್‌ ಪಂದ್ಯದ ಟಿವಿ,ಲೈವ್‌ ಸ್ಟ್ರೀಮಿಂಗ್‌ ವಿವರ :

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್‌ 2024ರ ಹೈವೋಲ್ಟೇಜ್ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್‌ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದು, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಫ್ಲಿಕೇಶನ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಆಗಲಿದೆ.

ಡಿಸಿ vs ಎಸ್‌ಆರ್‌ಹೆಚ್‌ ಆಡುವ 11ರ ಬಳಗ:

ಡೆಲ್ಲಿ ಕ್ಯಾಪಿಟಲ್ಸ್‌ : ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ರಿಷಭ್ ಪಂತ್(ವಿ.ಕೀ ಮತ್ತು ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್

ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಐಡೆನ್ ಮರ್ಕ್ರಾಮ್, ಹೆನ್ರಿಚ್ ಕ್ಲಾಸೆನ್(ವಿ.ಕೀ), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್

Story first published: Saturday, April 20, 2024, 18:54 [IST]
Other articles published on Apr 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+