For Quick Alerts
ALLOW NOTIFICATIONS  
For Daily Alerts
 

DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ

ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಐಪಿಎಲ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಶನಿವಾರ ದೆಹಲಿಯ ಅರುಣ್ ಜೇಟ್ಲಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 267 ರನ್‌ಗಳ ಬೃಹತ್ ಗುರಿ ನೀಡಿದೆ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳನ್ನು ಮೊದಲ ಓವರ್ ನಿಂದಲೇ ಮನಬಂದಂತೆ ದಂಡಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮತ್ತೊಮ್ಮೆ ಸ್ಫೋಟಕ ಆರಂಭ ನೀಡಿದರು.

SunRisers Hyderabad gives 272 Runs Massive Target To Delhi Capitals

2.4 ಓವರ್ ಗಳಲ್ಲೇ ಸನ್‌ರೈಸರ್ಸ್ ಹೈದರಾಬಾದ್ 50 ರನ್‌ಗಳನ್ನು ಪೂರೈಸಿತು. ಟ್ರಾವಿಸ್ ಹೆಡ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕೇವಲ 5 ಓವರ್ ಗಳಲ್ಲಿ 100 ರನ್‌ ಗಡಿ ದಾಟಿದ ಸನ್‌ರೈಸರ್ಸ್ ಹೈದರಾಬಾದ್ ಹೊಸ ದಾಖಲೆ ಬರೆಯಿತು.

6 ಓವರ್ ಗಳಲ್ಲಿ 125 ರನ್‌ ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎನ್ನುವ ದಾಖಲೆ ಮಾಡಿತು. 2017ರಲ್ಲಿ ಕೆಕೆಆರ್ ತಂಡವು ಆರ್ ಸಿಬಿ ವಿರುದ್ಧ 105 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಪವರ್‍ ಪ್ಲೇ ಬಳಿಕ ಕುಲದೀಪ್ ಯಾದವ್ ಒಂದೇ ಓವರ್ ನಲ್ಲಿ ಅಭಿಷೇಕ್ ಶರ್ಮಾ ಮತ್ತು ಐಡೆನ್ ಮಾರ್ಕ್ರಾಮ್ ವಿಕೆಟ್ ಪಡೆಯುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಓಟಕ್ಕೆ ಬ್ರೇಕ್ ಹಾಕಿದರು.

ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರೆ, ಮಾರ್ಕ್ರಂ ಕೇವಲ 1 ರನ್ ಗಳಿಸಿ ಔಟಾದರು. ಹೆನ್ರಿಚ್ ಕ್ಲಾಸೆನ್ 15 ರನ್ ಗಳಿಸಿ ಔಟಾದರು. ಟ್ರಾವಿಸ್ ಹೆಡ್ 32 ಎಸೆತಗಳಲ್ಲಿ 11 ಬೌಂಡರಿ 6 ಸಿಕ್ಸರ್ ಸಹಿತ 89 ರನ್ ಗಳಿಸಿದರು.

ನಿತೀಶ್ ರೆಡ್ಡಿ 27 ಎಸೆತಗಳಲ್ಲಿ 37 ರನ್ ಗಳಿಸಿದರೆ, ಶಹಬಾಜ್ ಅಹ್ಮದ್ 25 ಎಸೆತಗಳಲ್ಲಿ 44 ರನ್ ಗಳಿಸಿದರು. ಅಬ್ದುಲ್ ಸಮದ್ 8 ಎಸೆತಗಳಲ್ಲಿ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಹಬಾಜ್ ಅಹ್ಮದ್ 29 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿ ಮಿಂಚಿದರು.

ಸನ್‌ರೈಸರ್ಸ್ ಹೈದರಾಬಾದ್ ಆರಂಭ ನೋಡಿದರೆ 300 ಕ್ಕಿಂತ ಹೆಚ್ಚು ರನ್ ಗಳಿಸುತ್ತಾರೆ ಎನ್ನುವ ವಿಶ್ವಾಸ ಇತ್ತು. ಆದರೆ ಸತತವಾಗಿ ವಿಕೆಟ್ ತೆಗೆದ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳು ಅದಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು. ಗೆಲುವು ಸಾಧಿಸಲು ಡೆಲ್ಲಿ ಕ್ಯಾಪಿಟಲ್ಸ್ 267 ರನ್ ಗಳಿಸಬೇಕಿದೆ.

Story first published: Saturday, April 20, 2024, 21:22 [IST]
Other articles published on Apr 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+