For Quick Alerts
ALLOW NOTIFICATIONS  
For Daily Alerts
 

IND vs SA: ದಕ್ಷಿಣ ಆಫ್ರಿಕಾಕ್ಕೆ 3 ವಿಕೆಟ್ ಜಯ: ಹರ್ಮನ್‌ ಪಡೆಗೆ ಮೊದಲ ಸೋಲು

ವಿಶಾಖಪಟ್ಟಣಂ: ಭರವಸೆಯ ಆಟಗಾರ್ತಿಯರಾದ ನಾಡಿನ್ ಡಿ ಕ್ಲರ್ಕ್ (ಅಜೇಯ 84 ರನ್‌) ಹಾಗೂ ನಾಯಕಿ ಲಾರಾ ವೋಲ್ವಾರ್ಡ್ (70 ರನ್‌) ಅವರ ಭರ್ಜರಿ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಭಾರತ ತಂಡವನ್ನು ಮಣಿಸಿತು. ಈ ಮೂಲಕ ಟೀಮ್ ಇಂಡಿಯಾದ ಅಜೇಯ ಓಟಕ್ಕೆ ಆಫ್ರಿಕಾ ಬ್ರೇಕ್‌ ಹಾಕಿದೆ.

ದಕ್ಷಿಣ ಆಫ್ರಿಕಾದ ಪರ ನಾಡಿನ್ ಡಿ ಕ್ಲರ್ಕ್ ಕ್ಲಾಸ್‌ ಇನಿಂಗ್ಸ್‌ ಕಟ್ಟಿದರು. ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ ಇವರು, ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಮೊದಲ ಸೋಲು ಕಾಣಲು ಕಾರಣರಾದರು. 142 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಇವರು ಆಧಾರವಾದರು. ಇವರ ಹಿಟ್ಟಿಂಗ್ ಕ್ಷಮತೆಯನ್ನು ಕಂಡು ಟೀಮ್ ಇಂಡಿಯಾ ಆಟಗಾರರು ಥಂಡಾ ಹೊಡೆದರು. ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಕನಸು ಕಾಣುತ್ತಿದ್ದ ಹರ್ಮನ್ ಪ್ರಿತ್‌ ಪಡೆಗೆ ಶಾಕ್‌ ನೀಡಿದ ನಾಡಿನ್ ಡಿ ಕ್ಲರ್ಕ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಈ ಗೆಲುವಿನ ಮೂಲಕ ಆಫ್ರಿಕಾ 4 ಅಂಕ ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋಲು ಕಂಡರೂ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

De Klerk s stunning 84 breaks India s winning streak South Africa win by 3 wickets

7ನೇ ವಿಕೆಟ್‌ಗೆ ಕ್ಲೋಯ್ ಟ್ರಯಾನ್ ಹಾಗೂ ನಾಡಿನ್ ಡಿ ಕ್ಲರ್ಕ್ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 60 ಎಸೆತಗಳಲ್ಲಿ 69 ರನ್‌ ಸೇರಿಸಿ ಅಬ್ಬರಿಸಿತು. ಕ್ಲೋಯ್ ಟ್ರಯಾನ್ 5 ಬೌಂಡರಿ ನೆರವಿನಿಂದ 49 ರನ್‌ ಬಾರಿಸಿ ಔಟ್ ಆದರು. ನಾಯಕಿ ಲಾರಾ ವೋಲ್ವಾರ್ಡ್ 8 ಬೌಂಡರಿ ನೆರವಿನಿಂದ 70 ರನ್‌ ಸಿಡಿಸಿ ಅಬ್ಬರಿಸಿದರು.

ನಾಡಿನ್ ಡಿ ಕ್ಲರ್ಕ್ ಅಬ್ಬರ

ದಕ್ಷಿಣ ಆಫ್ರಿಕಾದ ಪರ ಮಧ್ಯಮ ಕ್ರಮಾಂಕದ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿ ರನ್‌ ಗಳನ್ನು ಕಲೆ ಹಾಕಿದರು. ಅಲ್ಲದೆ ಭಾರತೀಯ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿ ನಿಂತರು. ಇವರು 54 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ ಅಜೇಯ 84 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.ಅಂತಿಮವಾಗಿ ದಕ್ಷಿಣ ಆಫ್ರಿಕಾ 48.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 252 ರನ್‌ ಸೇರಿಸಿತು.

De Klerk s stunning 84 breaks India s winning streak South Africa win by 3 wickets

ಭಾರತದ ಪರ ಆರಂಭಿಕ ಪ್ರತಿಕಾ ರಾವಲ್ (37) ಹಾಗೂ ಸ್ಮೃತಿ ಮಂಧಾನ (23) ತಂಡಕ್ಕೆ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಉಳಿದಂತೆ ವಿಕೆಟ್‌ ಕೀಪರ್ ಬ್ಯಾಟರ್ ರಿಚಾ ಘೋಷ್‌ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು 11 ಬೌಂಡರಿ, 4 ಸಿಕ್ಸರ್ ನೆರವಿನಿಂದ 94 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಕೆಳ ಕ್ರಮಾಂಕದಲ್ಲಿ ಸ್ನೇಹಾ ರಾಣಾ 33 ರನ್‌ ಸಿಡಿಸಿ ಮಿಂಚಿದರು. ಅಂತಿಮವಾಗಿ ಭಾರತ 49.5 ಓವರ್‌ಗಳಲ್ಲಿ 251 ರನ್‌ಗೆ ಆಲೌಟ್ ಅಯಿತು.

Story first published: Thursday, October 9, 2025, 23:36 [IST]
Other articles published on Oct 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+