Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಬಿ ಡಿವಿಲಿಯರ್ಸ್‌ಗೆ ದ.ಆಫ್ರಿಕಾ ಕೋಚ್ ಬೌಷರ್ ಕೊಟ್ರು ಡೆಡ್‌ಲೈನ್ !

Deadline Set For AB De Villiers Return, Reveals Mark Boucher

ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿದ ನಿವೃತ್ತಿಯನ್ನು ಅದಾಗಲೇ ವಾಪಾಸ್ ಪಡೆಯುವ ನಿರ್ಧಾರವನ್ನು ಮಾಡಿದ್ದಾರೆ. ಹೀಗಾಗಿ ಎಬಿ ಡಿ ವಿಲಿಯರ್ಸ್ ಯಾವಾಗ ದ.ಆಫ್ರಿಕಾ ತಂಡಕ್ಕೆ ಮರಳಲಿದ್ದಾರೆ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ.

ಈ ಮಧ್ಯೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳುವ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ಕೋಚ್ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ಡಿವಿಲಿಯರ್ಸ್ ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳುತ್ತಾರ ಅನ್ನುವ ಗೊಂದಲ ಮೂಡುವಂತೆ ಮಾಡಿದೆ.

ದಕ್ಷಿಣ ಆಫ್ರಿಕಾದ ಕೋಚ್ ಮಾರ್ಕ್ ಬೌಷರ್ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳುವ ಬಗ್ಗೆ ಡೆಡ್‌ಲೈನ್ ಕೊಟ್ಟಿದ್ದಾರೆ.

ಶೀಘ್ರ ಖಚಿತಪಡಿಸಿ

ಶೀಘ್ರ ಖಚಿತಪಡಿಸಿ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಆಗಿರುವ ಮಾರ್ಕ್ ಬೌಷರ್ ಎಬಿ ಡಿವಿಲಿಯರ್ಸ್‌ಗೆ ಡೆಡ್‌ಲೈನ್ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳುವ ಬಗ್ಗೆ ಎಬಿ ಡಿ ವಿಲಿಯರ್ಸ್ ಜೂನ್ 1ನೇ ತಾರೀಕಿನ ಒಳಗೆ ಖಚಿತಪಡಿಸಬೇಕೆಂದು ಮಾರ್ಕ್ ಬೌಷರ್ ಹೇಳಿದ್ದಾರೆ.

ನಿವೃತ್ತಿಯನ್ನು ವಾಪಾಸ್ ಪಡೆದಿದ್ದ ವಿಲಿಯರ್ಸ್

ನಿವೃತ್ತಿಯನ್ನು ವಾಪಾಸ್ ಪಡೆದಿದ್ದ ವಿಲಿಯರ್ಸ್

ಇತ್ತೀಚೆಗಷ್ಟೇ ದ.ಆಫ್ರಿಕಾದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಟಿ20 ತಂಡಕ್ಕೆ ಮರಳುವ ಬಗ್ಗೆ ಹೇಳಿಕೊಂಡಿದ್ದರು. ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸುವ ಹಿನ್ನೆಲೆಯಲ್ಲಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ನಿವೃತ್ತಿಯನ್ನು ವಾಪಾಸ್ ಪಡೆಯುವ ನಿರ್ಧಾರವನ್ನು ಮಾಡಿದ್ದರು.

ಐಪಿಎಲ್ ಮುಗಿಸಿ ತಿಳಿಸಿ

ಐಪಿಎಲ್ ಮುಗಿಸಿ ತಿಳಿಸಿ

ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಐಪಿಎಲ್ ಆವೃತ್ತಿಯ ಬಳಿಕ ಎಬಿ ಡಿವಿಲಿಯರ್ಸ್ ತಮ್ಮ ಲಭ್ಯತೆಯ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಮಾರ್ಕ್ ಬೌಷರ್ ಹೇಳಿಕೆಯನ್ನು ನೀಡಿದ್ದಾರೆ.

ಶ್ರೀಲಂಕಾ ಸರಣಿ ಕಮ್‌ಬ್ಯಾಕ್ ವೇದಿಕೆ ?

ಶ್ರೀಲಂಕಾ ಸರಣಿ ಕಮ್‌ಬ್ಯಾಕ್ ವೇದಿಕೆ ?

ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ತಂಡವನ್ನು ಟಿ20 ಸರಣಿಯಲ್ಲಿ ಎದುರಿಸಲಿದೆ. ಈ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಈ ಮೂಲಕ 36 ವರ್ಷದ ದ.ಆಫ್ರಿಕಾ ಲೆಜೆಂಡ್ ವಿಶ್ವಕಪ್‌ಗೆ ಮುನ್ನ ವೇದಿಕೆಯನ್ನು ಸಿದ್ದಪಡಿಸಿಕೊಳ್ಳುವ ನಿರೀಕ್ಷೆಯಿದೆ.

ಸುಳಿವು ನೀಡಿದ್ದೇ ಬೌಷರ್

ಸುಳಿವು ನೀಡಿದ್ದೇ ಬೌಷರ್

ಕಳೆದ ವರ್ಷಾಂತ್ಯದಲ್ಲಿ ನೇಮಕವಾಗಿರುವ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಷರ್ ಎಬಿಡಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳ ಬೇಕು ಎಂದು ಬಯಸಿದ್ದರು.ಸ್ವತಃ ಬೌಷರ್ ಈ ಬಗ್ಗೆ ಮಾತುಕತೆ ನಡೆಸಿದ್ದರು. ಇದಕ್ಕೆ ದಕ್ಷಿಣ ಆಫ್ರಿಕಾದ ಹಿಂದಿನ ನಾಯಕ ಫಾಪ್ ಡು ಪ್ಲೆಸಿಸ್ ಕೂಡ ಧ್ವನಿಗೂಡಿಸಿದ್ದರು.

ಎರಡು ವರ್ಷದ ಹಿಂದೆ ಎಬಿಡಿ ನಿವೃತ್ತಿ

ಎರಡು ವರ್ಷದ ಹಿಂದೆ ಎಬಿಡಿ ನಿವೃತ್ತಿ

36 ವರ್ಷದ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕನೂ ಆಗಿರುವ ಡಿವಿಲಿಯರ್ಸ್ ದಕ್ಷಿಣ ಅಫ್ರಿಕಾದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಪ್ರಮುಖರಾಗಿದ್ದಾರೆ. 2018ರ ಮಾರ್ಚ್‌ ತಿಂಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಡಿವಿಲಿಯರ್ಸ್ ವಿದಾಯವನ್ನು ಹೇಳಿದ್ದಾರೆ.

ಲೀಗ್‌ಗಳತ್ತ ಗಮನ ಹರಿಸಿದ್ದ ಎಬಿಡಿ

ಲೀಗ್‌ಗಳತ್ತ ಗಮನ ಹರಿಸಿದ್ದ ಎಬಿಡಿ

ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾದ ಬಳಿಕ ಎಬಿಡಿ ಲೀಗ್ ಟೂರ್ನಿಗಳತ್ತ ಗಮನ ಹರಿಸಿದ್ದಾರೆ. ಐಪಿಎಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಕಣಕ್ಕಳಿಯುತ್ತಿರುವ ಡಿವಿಲಿಯರ್ಸ್ ಕೆರೆಬಿಯನ್ ಕ್ರಿಕೆಟ್ ಲೀಗ್, ಬಿಗ್‌ ಬ್ಯಾಷ್‌ನಲ್ಲೂ ಆಡುತ್ತಿದ್ದಾರೆ ಈ ಮೂಲಕ ವಿಶ್ವದ ಮೂಲೆ ಮೂಲೆಗಳಲ್ಲೂ ತಮ್ಮ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡದಲ್ಲೂ ಎಬಿಡಿ ಕಾಣಲು ಅಭಿಮಾನಿಗಳು ತವಕಿಸುತ್ತಿದ್ದಾರೆ.

Story first published: Friday, March 6, 2020, 11:57 [IST]
Other articles published on Mar 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+