Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಬದಲು ಬಾಂಗ್ಲಾದೇಶ ಪ್ರವಾಸ ಆಯ್ಕೆ ಮಾಡಿಕೊಳ್ಳಿ: ದ. ಆಫ್ರಿಕಾ ಆಟಗಾರರಿಗೆ ನಾಯಕ ಎಲ್ಗರ್ ಒತ್ತಾಯ

Dean Elgar urged his South African cricketers to put the Bangladesh Test series ahead of the IPL

ಐಪಿಎಲ್ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಆಟಗಾರರ ಲಭ್ಯತೆಯ ವಿಚಾರ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರರು ಸಂಪೂರ್ಣ ಟೂರ್ನಿಯಲ್ಲಿ ಆಡಲಿದ್ದಾರೆ ಎಂಬುದಾಗಿ ಅಧಿಕೃತ ಮಾಹಿತಿ ಲಭ್ಯವಾಗಿದ್ದರೆ ಆಸ್ಟ್ರೇಲಿಯಾ ಆಟಗಾರರು ಆರಂಭದ ಕೆಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ಆಟಗಾರರ ಗೊಂದಲ ಇನ್ನೂ ಮುಂದುವರಿದಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲು ವೇಳಾಪಟ್ಟಿ ಸಿದ್ಧವಾಗಿದೆ. ಈ ಸರಣಿ ಮಾರ್ಚ್ 18ರಿಂದ ಆರಂಭವಾಗಲಿದ್ದು ಏಪ್ರಿಲ್ 18ರ ವರೆಗೆ ನಡೆಯಲಿದೆ. ಆದರೆ ಐಪಿಎಲ್ ಟೂರ್ನಿ ಮಾರ್ಚ್ 26ರಿಂದ ಮೇ 29ರವರೆಗೆ ಆಯೋಜನೆಯಾಗಲಿದೆ. ಹೀಗಾಗಿ ಐಪಿಎಲ್ ಒಪ್ಪಂದವನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ರಾಷ್ಟ್ರೀಯ ತಂಡದ ಪರವಾಗಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಇಎಸ್‌ಪಿಎನ್ ಕ್ರಿಕ್ ಇನ್ಫೋ ಮಾಹಿತಿಯ ಪ್ರಕಾರ ದಕ್ಷಿಣ ಆಪ್ರಿಕಾ ಕ್ರಿಕೆಟ್ ಮಂಡಳಿ ಈ ಸರಣಿಯಲ್ಲಿ ಭಾಗವಹಿಸಲು ಅಥವಾ ಐಪಿಎಲ್ ಆಯ್ಕೆ ಮಾಡಿಕೊಳ್ಳಲು ಆಟಗಾರರಿಗೆ ಸ್ವಾತಂತ್ಯವನ್ನು ನೀಡಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ಡೀನ್ ಎಲ್ಗರ್ ಆಟಗಾರರು ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಆದದಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ." ಆಟಗಾರರು ಐಪಿಎಲ್‌ಗೆ ಹೋಗಲು ಉತ್ಸುಕರಾಗಿದ್ದಾರೆಯೇ ಅಥವಾ ಟೆಸ್ಟ್ ತಂಡಕ್ಕಾಗಿ ಆಡಲು ಉತ್ಸುಕರಾಗಿದ್ದಾರೆಯೇ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಸೂಚನೆಯನ್ನು ನೀಡಬೇಕಾಗುತ್ತದೆ. ಇದನ್ನು ಆಯ್ಕ ಮಾಡಿಕೊಳ್ಳಲು ಆಟಗಾರರಿಗೆ ಆಯ್ಕೆ ನೀಡಿದರೆ ಕಷ್ಟವಾಗಲಿದೆ. ಆದರೆ ಈ ಸಂದರ್ಭದಲ್ಲಿ ಆಟಗಾರರ ನಿಷ್ಠೆ ಯಾವ ಕಡೆಗಿದೆ ಎಂಬುದು ಅರಿವಿಗೆ ಬರುತ್ತದೆ" ಎಂದು ಡೀನ್ ಎಲ್ಗರ್ ಹೇಳಿಕೆ ನೀಡಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 11 ದಕ್ಷಿಣ ಆಫ್ರಿಖಾದ ಆಟಗಾರರು ಒಪ್ಪಂದವನ್ನು ಹೊಂದಿದ್ದಾರೆ. ಇದರಲ್ಲಿ ಆರು ಆಟಗಾರರು ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದರೆ ಮೂವರು ಏಕದಿನ ತಂಡದ ಆಟಗಾರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ದಾಳಿಯ ಪ್ರಮುಖ ಅಸ್ತ್ರಗಳಾದ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ನಿಯಾ ಮತ್ತು ಮಾರ್ಕೊ ಜಾನ್ಸೆನ್ ಜೊತೆಗೆ ಅಗ್ರ ಬ್ಯಾಟರ್‌ಗಳಾದ ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡ್ಯುಸೆನ್, ಡೇವಿಡ್ ಮಿಲ್ಲರ್, ಆಲ್‌ರೌಂಡರ್ ಡ್ವೈನ್ ಪ್ರಿಟೋರಿಯಸ್ ಮತ್ತು ಸೀಮಿತ ಓವರ್‌ಗಳ ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ಈ ಎಲ್ಲರೂ ಐಪಿಎಲ್ ಒಪ್ಪಂದಗಳನ್ನು ಹೊಂದಿದ್ದಾರೆ.

ಅಗ್ರ ವೇಗಿಗಳು ಐಪಿಎಲ್ ಟೂರ್ನಿಯನ್ನು ಆಯ್ಕೆ ಮಾಡಿಕೊಂಡರೆ ನಾಯಕ ಡೀನ್ ಎಲ್ಗರ್ ವೇಗಿಗಳಾದ ಲುಥೋ ಸಿಪಾಮ್ಲಾ, ವಿಯಾನ್ ಮುಲ್ಡರ್ ಮತ್ತು ಗ್ಲೆಂಟನ್ ಸ್ಟೌರ್‌ಮನ್‌ರೊಂದಿಗೆ ದ್ವಿತೀಯ ದರ್ಜೆಯ ಬೌಲಿಂಗ್ ಪಡೆಯೊಂದಿಗೆ ದಾಳಿಗಿಳಿಯಬೇಕಾಗುತ್ತದೆ. ಹೀಗಾಗಿ ಬಾಂಗ್ಲಾದೇಶ ಸರಣಿಗೆ ಸಿದ್ಧರಾಗಲು ಪ್ರಮುಖ ಬೌಲರ್‌ಗಳ ಲಭ್ಯತೆಯ ಬಗ್ಗೆ ಮಾಹಿತಿ ಅಗತ್ಯ ಎಂದು ಪ್ರೋಟೀಸ್ ನಾಯಕ ಹೇಳಿಕೆ ನೀಡಿದ್ದಾರೆ.

Story first published: Tuesday, March 8, 2022, 9:58 [IST]
Other articles published on Mar 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+