Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ವೈರಸ್: 2021 ಮಹಿಳಾ ವಿಶ್ವಕಪ್ ಭವಿಷ್ಯ ಎರಡು ವಾರಗಳಲ್ಲಿ ನಿರ್ಧಾರ

Decision On 2021 Womens World Cup In 2 Weeks, Says New Zealand Cricket

ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2021ರ ಮಹಿಳಾ ಏಕದಿನ ವಿಶ್ವಕಪ್‌ನ ಭವಿಷ್ಯವನ್ನು ಮುಂದಿನ ಎರಡು ವಾರಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಗ್ರೇಗ್ ಬಾರ್ಕ್ಲೇ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೊಮವಾರ ಮಹಿಳಾ ವಿಶ್ವಕಪ್‌ ಬಗ್ಗೆ ಪ್ರತಿಕ್ರಿಯಿಸಿ 2021ರ ವಿಶ್ವಕಪ್‌ ಸದ್ಯ ವೇಳಾಪಟ್ಟಿಯಲ್ಲಿರುವಂತೆಯೇ ನಡೆಯಲಿದೆ ಎಂದಿತ್ತು.

ವಿಶ್ವಕಪ್ ಬಗ್ಗೆ ಐಸಿಸಿ ಈ ರೀತಿಯ ಹೇಳಿಕೆಯನ್ನು ನಿಡಿದ ನಂತರ ಅತಿಥ್ಯ ವಹಿಸಿರುವ ನ್ಯೂಜಿಲೆಂಡ್ ಪ್ರತಿಕ್ರಿಯಿಸಿದೆ. ಕೊರೊನಾ ವೈರಸ್‌ನ ಆತಂಕದಲ್ಲಿ ಈ ಟೂರ್ನಿಯನ್ನು ಆಯೋಜನೆ ಮಾಡುವ ಬಗ್ಗೆ ಇನ್ನಷ್ಟೇ ನಿರ್ದಾರವನ್ನು ತೆಗೆದುಕೊಳ್ಳಬೇಕಿದೆ. ಮುಂದಿನ ಎರಡು ವಾರಗಳಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಸೋಮವಾರ ಸಭೆ ವರ್ಚುವಲ್ ಸಭೆ ಸೇರಿದ್ದ ಐಸಿಸಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ವರ್ಷ ನಡೆಯಬೇಕಿದ್ದ ಪುರುಷರ ಟಿ20 ಲೀಗ್ ಮುಂದೂಡುವ ನಿರ್ಣಯವನ್ನು ತೆಗೆದುಕೊಂಡಿದ್ದರು. ಆದರೆ ಮುಂದಿನ ವರ್ಷ ಫೆಬ್ರವರಿ 6 ರಿಂದ ಮಾರ್ಚ್ 7ರವರೆಗೆ ನಿಗದಿಯಾಗಿರುವ ಮಹಿಳಾ ವಿಶ್ವಕಪ್ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದಿದ್ದರು.

ವಿಶ್ವಕಪ್ ಆಯಜನೆ ಮಾಡುವ ಬಗ್ಗೆ ನಾವು ನಿರ್ಧಾರವನ್ನು ಮುಂದಿನ ಎರಡು ವಾರಗಳಲ್ಲಿ ತೆಗೆದುಕೊಳ್ಳಲಿದ್ದೇವೆ. ಯಾಕೆಂದರೆ ಟೂರ್ನಿಯನ್ನು ಮುಂದೂಡಬೇಕಾದ ಅನಿವಾರ್ಯತೆಯಿದ್ದರೆ ನಾವು ಅದರ ಬಗ್ಗೆ ಖಂಡಿತವಾಗಿಯೂ ಯೋಚಿಸಕಾಗುತ್ತದೆ. ನಡೆಸಲು ಸಾಧ್ಯವಿದೆ ಎಂದಾದರೆ ದೇಶಿಯ ಟೂರ್ನಿಯನ್ನು ಫೆಬ್ರವರಿ ತಿಂಗಳಲ್ಲಿ ಆರಂಭಿಸಬೇಕಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಗ್ರೇಗ್ ಬಾರ್ಕ್ಲೆ ಹೇಳಿದ್ದಾರೆ.

ನ್ಯೂಜಿಲೆಂಡ್ ಕೊರೊನಾ ವೈರಸ್‌ಗೆ ಅತ್ಯಂತ ಕಡಿಮೆ ಪರಿಣಾಮಕ್ಕೊಳಗಾದ ದೇಶವಾಗಿದೆ. ಇತ್ತೀಚೆಗಷ್ಟೇ ನ್ಯೂಜಿಲೆಂಡ್ ತನ್ನನ್ನು ಕೊರೊನಾ ವೈರಸ್ ಮುಕ್ತ ದೇಶ ಎಂದು ಘೋಷಿಸಿಕೊಂಡಿತ್ತು. ಅದರೆ ಕೊರೊನಾ ವೈರಸ್‌ ಇರುವ ದೇಶಗಳಿಂದ ಆಟಗಾರರು ಬಂದಂತಾ ಸಂದರ್ಭದಲ್ಲಿ ದೇಶ ಮತ್ತೆ ಅಪಾಯಕ್ಕೆ ಸಿಲುಕುವ ಆತಂಕವಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ವ್ಯಕ್ತಪಡಿಸಿದೆ.

Story first published: Tuesday, July 21, 2020, 15:43 [IST]
Other articles published on Jul 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+