IND vs SA ODI: ದೀಪಕ್ ಚಾಹರ್ ಗಾಯದ ಸಮಸ್ಯೆ: ಉಳಿದ ಎರಡು ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆ

ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ಮೊದಲು ತರಬೇತಿ ಅವಧಿಯಲ್ಲಿ ಪಾದದ ತಿರುಚಿದ ನೋವಿನ ಕಾರಣ ಹಿರಿಯ ವೇಗಿ ದೀಪಕ್ ಚಾಹರ್ ಉಳಿದ ಎರಡು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಮೊದಲನೇ ಪಂದ್ಯದ ವೇಳೆ ದೀಪಕ್ ಚಾಹರ್ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಅನುಭವಿ ವೇಗಿಯ ಅನುಪಸ್ಥಿತಿ ಭಾರತ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು. ಭಾರತ ತಂಡ 9 ರನ್‌ಗಳಿಂದ ಮೊದಲನೇ ಪಂದ್ಯದಲ್ಲಿ ಸೋಲುವ ಮೂಲಕ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ.
"ದೀಪಕ್ ಚಾಹರ್ ಪಾದ ತಿರುಚಿಕೊಂಡು ಗಾಯಗೊಂಡಿದ್ದಾರೆ. ಆದರೆ, ಅದು ತುಂಬಾ ಗಂಭೀರವಾಗಿಲ್ಲ. ಆದಗ್ಯೂ ಕೆಲವು ದಿನಗಳ ವಿಶ್ರಾಂತಿ ಸಲಹೆ ನೀಡಬಹುದು" ಎಂದು ಬಿಸಿಸಿಐನ ಕೆಲವು ಮೂಲಗಳು ತಿಳಿಸಿವೆ.
ದೀಪಕ್ ಚಾಹರ್ ಟಿ 20 ವಿಶ್ವಕಪ್ ಸ್ಟ್ಯಾಂಡ್-ಬೈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 15 ಸದಸ್ಯರ ತಂಡದಲ್ಲಿ ಯಾರಿಗಾದರೂ ಗಾಯಗಳಾದರೆ, ಅವರ ಸ್ಥಾನವನ್ನು ಚಾಹರ್ ತುಂಬುವ ಸಾಧ್ಯತೆ ಇದೆ. ಸದ್ಯ, ದೀಪಕ್ ಚಾಹರ್ ಹೆಚ್ಚಿನ ಗಾಯಕ್ಕೆ ಒಳಗಾಗದಿದ್ದರೆ ಸಾಕು ಎಂದು ಬಯಸುತ್ತಿದ್ದಾರೆ.

ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ
ಸದ್ಯಕ್ಕೆ, ಟಿ20 ವಿಶ್ವಕಪ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ, ನಿಧಾನವಾಗಿ ಮತ್ತು ಖಚಿತವಾಗಿ ಮ್ಯಾಚ್ ಫಿಟ್ ಆಗುತ್ತಿದ್ದಾರೆ ಮತ್ತು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಶಮಿ ಆಸ್ಟ್ರೇಲಿಯಾಕ್ಕೆ ಹಾರುವ ನಿರೀಕ್ಷೆಯಿದೆ.
"ಮೊಹಮ್ಮದ್ ಶಮಿ, ಫಿಟ್ ಆಗಿದ್ದರೆ, ಯಾವಾಗಲೂ ಮೊದಲ ಬದಲಿ ಆಟಗಾರನಾಗಿರುತ್ತಾರೆ. ಅವರ ಅನುಭವ ತಂಡಕ್ಕೆ ಅಗತ್ಯವಾಗಿದೆ. ಅಲ್ಲದೆ, ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಶಮಿ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶ ಹೊಂದಿದ್ದಾರೆ. ಅವರು ಮುಂದಿನ ವಾರದಲ್ಲಿ ಟೀಂ ಇಂಡಿಯಾವನ್ನು ಸೇರಿಕೊಳ್ಳುತ್ತಾರೆ" ಎಂದು ಮೂಲಗಳು ತಿಳಿಸಿವೆ.
ಮತ್ತೊಮ್ಮೆ ಎಡವಿದ ವಿಂಡೀಸ್: 2ನೇ ಟಿ20 ಪಂದ್ಯದಲ್ಲಿಯೂ ಗೆದ್ದು ಬೀಗಿದ ಆಸ್ಟ್ರೇಲಿಯಾ

ನೆಟ್ ಬೌಲರ್‌ಗಳಾಗಿ ಮುಖೇಶ್, ಚೇತನ್ ಪ್ರಯಾಣ
ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್, ಮಹಾರಾಷ್ಟ್ರದ ಎಡಗೈ ವೇಗದ ಬೌಲರ್ ಮುಖೇಶ್ ಚೌಧರಿ ಮತ್ತು ಸೌರಾಷ್ಟ್ರದ ಚೇತನ್ ಸಕರಿಯಾ ಅವರು ಈಗಾಗಲೇ ಟಿ 20 ವಿಶ್ವಕಪ್‌ಗೆ ನೆಟ್ ಬೌಲರ್‌ಗಳಾಗಿ ತಂಡವನ್ನು ಸೇರಿಕೊಂಡಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಹೆಚ್ಚಿನ ತಂಡಗಳು ಪ್ರಮುಖವಾಗಿ ಎಡಗೈ ವೇಗದ ಬೌಲರ್ ಗಳನ್ನು ಹೊಂದಿರುವ ಕಾರಣ, ಭಾರತದ ಅರ್ಷ್‌ದೀಪ್ ಸಿಂಗ್ ಪಂದ್ಯಗಳ ನಡುವೆ ವಿಶ್ರಾಂತಿ ಪಡೆಯಬೇಕಾಗಿರುವುದರಿಂದ. ಮುಖೇಶ್ ಮತ್ತು ಚೇತನ್ ತಂಡದ ಜೊತೆ ಆಸ್ಟ್ರೇಲಿಯಾಗೆ ಪ್ರಯಾಣ ಮಾಡಿದ್ದಾರೆ ಎಂದು ಹೇಳಲಾಗಿದೆ.

ತರಬೇತಿ ನಂತರ ಅಭ್ಯಾಸ ಪಂದ್ಯ
ಪರ್ತ್‌ನಲ್ಲಿ ಭಾರತದ ತರಬೇತಿ ವೇಳಾಪಟ್ಟಿಯ ಪ್ರಕಾರ, ಅವರು ಅಕ್ಟೋಬರ್ 8, 9 ಮತ್ತು 12 ರಂದು ಬೆಳಿಗ್ಗೆ11 ರಿಂದ ಸಂಜೆ 4 ರ ನಡುವೆ ಐದು ಗಂಟೆಗಳ ಕಾಲ ಮೂರು ದಿನಗಳ ಕಠಿಣ ತರಬೇತಿ ಹೊಂದಿರುತ್ತಾರೆ, ಅಕ್ಟೋಬರ್ 10 ಮತ್ತು 13 ರಂದು ಎರಡು ಟಿ20 ಅಭ್ಯಾಸ ಪಂದ್ಯಗಳು ನಡೆಯಲಿವೆ.
ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ ಅಕ್ಟೋಬರ್ 17 ಮತ್ತು 19 ರಂದು ಆಡಲಿದೆ. ಅಕ್ಟೋಬರ್ 23ರಂದು ಭಾರತ ಟಿ20 ವಿಶ್ವಕಪ್‌ನ ತನ್ನ ಮೊದಲನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
ನೆಟ್ ಬೌಲರ್‌ಗಳು: ಉಮ್ರಾನ್ ಮಲಿಕ್, ಚೇತನ್ ಸಕರಿಯಾ, ಕುಲದೀಪ್ ಸೇನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications