For Quick Alerts
ALLOW NOTIFICATIONS  
For Daily Alerts
 

ತಂದೆಗೆ ಬೆಸ್ಟ್ ಉಡುಗೊರೆ ನೀಡಿದ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್‌ ನಟಿ ದೀಪಿಕಾ ಪಡಕೋಣೆ ಅವರು ತಮ್ಮ ತಂದೆಯ ಬರ್ತಡೆಗೆ ಗಿಫ್ಟ್‌ ನೀಡಿದ್ದಾರೆ. ದೀಪಿಕಾ ತಂದೆ ಪ್ರಕಾಶ್ ಅವರಿಗೆ ಮಂಗಳವಾರ (ಜೂನ್ 10) ಹುಟ್ಟು ಹಬ್ಬದ ಸಂಭ್ರಮ. ತಂದೆಯ 70ನೇ ವರ್ಷದ ಹುಟ್ಟುಹಬ್ಬಕ್ಕಾಗಿ ದೀಪಿಕಾ ವಿಶೇಷ ಉಡುಗೊರೆ ನೀಡಿದ್ದಾರೆ. ಈ ಉಡುಗೊರೆ ನಿಜಕ್ಕೂ ಪ್ರಕಾಶ್ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹಾಗಿದ್ದರೆ ದೀಪಿಕಾ ಉಡುಗೊರೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ದೀಪಿಕಾ ಪಡುಕೋಣೆ ಅವರು ತಮ್ಮ ತಂದೆಯ ಹೆಸರಿನಲ್ಲಿ ಬ್ಯಾಡ್ಮಿಂಟನ್ ಶಾಲೆಯನ್ನು ತೆರೆಯುವ ಬಗ್ಗೆ ಬಹಿರಂಗವ ಪಡಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ದೀಪಿಕಾ, ಬ್ಯಾಡ್ಮಿಂಟನ್‌ ಆಡುತ್ತಾ ಬೆಳೆದಿದ್ದೇನೆ. ಈ ಕ್ರೀಡೆ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ರೂಪಿಸುವಲ್ಲಿ ನೆರವಾಗುತ್ತದೆ ಎಂದು ನಂಬಿದ್ದೇನೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಮೂಲಕ ಇನ್ನು ಹೆಚ್ಚಿನ ಜನರ ಮುಖದಲ್ಲಿ ಸಂತೋಷ, ಶಿಸ್ತು, ಆರೋಗ್ಯವನ್ನು ವೃದ್ಧಿಸಲು ಶ್ರಮಿಸುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Deepika Padukone gifted her father Prakash a nationwide badminton academy for his 70th birthday

ಈ ಬಗ್ಗೆ ನಟಿ ದೀಪಿಕಾ ಪಡುಕೋಣೆ ಪತ್ರಿಕಾ ಮಾಹಿತಿಯನ್ನು ನೀಡಿದ್ದಾರೆ. ಪಡುಕೋಣೆ ಸ್ಕೂಲ್ ಆಫ್‌ ಬ್ಯಾಡ್ಮಿಂಟನ್‌ ಈ ವರ್ಷದ ಅಂತ್ಯದಲ್ಲಿ 75 ಕೇಂದ್ರಗಳನ್ನು ತೆರೆಯುವ ಇರಾದೆಯನ್ನು ಹೊಂದಿದೆ. ಇನ್ನು 2027ರ ಒಳಗೆ ಸಂಸ್ಥೆ 250ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಈ ಶಾಲೆಗಳನ್ನು ಬೆಂಗಳೂರು, ಎನ್‌ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹ್ರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ ಮತ್ತು ಸೂರತ್ ನಲ್ಲಿ ಸ್ಥಾಪಿಸಲಾಗಿದೆ. ಭಾರತದ 18 ನಗರಗಳಲ್ಲಿ 75ಕ್ಕೂ ಗ್ರಾಸ್‌ ರೂಟ್‌ ಕೋಚಿಂಗ್‌ ಸೆಂಟರ್‌ಗಳಿದ್ದು, ಇವುಗಳನ್ನು ಬೆಳೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ದೇಶದಲ್ಲಿ ಕ್ರೀಡಾ ಉತ್ಸಾಹವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೀಪಿಕಾ ತಿಳಿಸಿದ್ದಾರೆ. ದೀಪಿಕಾ ಅವರ ತಂದೆ ಪ್ರಕಾಶ್‌, ವಿಶ್ವದ ಮಾಜಿ ನಂಬರ್‌ 1 ಬ್ಯಾಡ್ಮಿಂಟನ್ ಆಟಗಾರ. ಇವರು ಪಿಎಸ್‌ಬಿಗೆ ಮಾರ್ಗದರ್ಶಕ ಮತ್ತು ಸಲಹೆಗಾರರಾಗಿ ಸೇರಿಕೊಂಡಿದ್ದಾರೆ.

Deepika Padukone gifted her father Prakash a nationwide badminton academy for his 70th birthday

ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಕ್ರೀಡೆ ಗೆಲುವಿನ ಮನಸ್ಥಿತಿಯನ್ನು ಹುಟುಹಾಕುತ್ತದೆ. ಗುಣಮಟ್ಟದ ತರಬೇತಿಯನ್ನು ಕೈಗೆಟಕುವ ದರದಲ್ಲಿ ನೀಡುವುದೇ ನಮ್ಮ ಉದ್ದೇಶ. ಕೆಳ ಹಂತದಲ್ಲಿ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ದೇಶದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಗೆ ಭದ್ರ ಬುನಾದಿ ಹಾಕಿಕೊಡುವುದು ಗುರಿಯಾಗಿದೆ ಎಂದು ದೀಪಿಕಾ ತಿಳಿಸಿದ್ದಾರೆ. ಪಿಎಸ್‌ಬಿ ಶಾಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನುರಿತ ತರಬೇತುದಾರರನ್ನು ಸೇರಿಸಿಕೊಳ್ಳುವ ಇರಾದೆ ಹೊಂದಿದೆ.

ಪ್ರಕಾಶ್‌ ಪಡುಕೋಣೆ ಸಾಧನೆ

ಪ್ರಕಾಶ್ ಪಡುಕೋಣೆ ಅವರು ವಿಶ್ವ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರರಲ್ಲಿ ಒಬ್ಬರು. ಇವರು 1983ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು, 1981ರ ವಿಶ್ವಕಪ್‌ನಲ್ಲಿ ಬಂಗಾರ, 1980ರ ವಿಶ್ವಕಪ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಅಲ್ಲದೆ ಇವರು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ, ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

Story first published: Tuesday, June 10, 2025, 16:33 [IST]
Other articles published on Jun 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+