For Quick Alerts
ALLOW NOTIFICATIONS  
For Daily Alerts
 

ದೀಪ್ತಿ ಶರ್ಮಾ ಚಾಣಾಕ್ಷತನದ ರನೌಟ್: ಮತ್ತೆ ಸ್ಪಿರಿಟ್ ಆಫ್ ಗೇಮ್ ಎಂದು ಗೋಳಿಡುತ್ತಿರುವ ಇಂಗ್ಲೆಂಡ್ ಕ್ರಿಕೆಟಿಗರು!

Deepti Sharma Brilliant Run-out: Stuart Broad, Jimmy Anderson lead outcry, Harsha Bhogle tweet gone Viral

ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ರೋಮಾಂಚನಕಾರಿ ಗೆಲುವು ಸಾಧಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸವಾಲಿನ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗದಿದ್ದರೂ ಬೌಲಿಂಗ್ ವಿಭಾಗದ ಅಮೋಘ ಪ್ರದರ್ಶನ ಭಾರತ ತಂಡಕ್ಕೆ ಗೆಲುವು ತಂದಿತ್ತಿದೆ. ಈ ಮೂಲಕ ಇಂಗ್ಲೆಂಡ್ ವನಿತೆಯರ ವಿರುದ್ಧ ಭಾರತ ಅವರದ್ದೇ ನೆಲದಲ್ಲಿ ಐತಿಹಾಸಿಕವಾಗಿ ವೈಟ್‌ವಾಶ್ ಮಾಡಿ ಸರಣಿ ಗೆದ್ದುಕೊಂಡಿದೆ.

ಆದರೆ ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ಎದುರಾಳಿ ತಂಡದ ಆಟಗಾರ್ತಿ ಚಾರ್ಲೋಟ್ ಡೀನ್ ಅವರನ್ನು ನಾನ್ ಸ್ಟ್ರೈಕರ್ ತುದಿಯಲ್ಲಿ ಮಂಕಡಿಂಗ್ ಮೂಲಕ ಔಟ್ ರನೌಟ್ ಮಾಡಿದರು. ಈ ಮೂಲಕ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದ ಭಾರತ ಪಂದ್ಯವನ್ನು ಕ್ಲೀನ್ ಸ್ವೀಪ್ ಮೂಲಕ ಗೆದ್ದುಕೊಂಡಿದೆ. ಆದರೆ ಅಂತಿಮ ವಿಕೆಟ್‌ಅನ್ನು ಈ ರೀತಿಯಾಗಿ ಕಳೆದುಕೊಂಡ ಬಳಿಕ ಇಂಗ್ಲೆಂಡ್ ತಂಡದ ಪುರುಷ ಕ್ರಿಕೆಟಿಗರು ಸೇರಿದಂತೆ ಹಲವರು ಈ ವಿಚಾರವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಡಿದ ಸ್ಪೂರ್ತಿಗೆ ವಿರುದ್ಧ ಇದು ಎಂದು ಗೋಳಾಟ ಆರಂಭಿಸಿದ್ದಾರೆ!

ಆಂಡರ್ಸನ್, ಬ್ರಾಡ್ ಪ್ರತಿಕ್ರಿಯೆ

ಇಂಗ್ಲೆಂಡ್ ತಂಡದ ಹಿರಿಯ ವೇಗಿಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ದೀಪ್ತಿ ಶರ್ಮಾ ಮಾಡಿದ ರನೌಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಈ ರೀತಿ ವಿಕೆಟ್ ಪಡೆಯುವುದು ಸರಿಯಲ್ಲ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ಜೇಮ್ಸ್ ಆಂಡರ್ಸನ್ "ಈ ರೀತಿ ಔಟ್ ಮಾಡುವ ಅಗತ್ಯವೇನಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆಕೆಯೇನಾದರೂ ಮೈದಾನವನ್ನು ಕದಿಯುತ್ತಿದ್ದಳೇ?" ಎಂದು ವಿಚಿತ್ರವಾಗಿ ಪ್ರತಿಕ್ರಿಯಿಸಿದರೆ ಬ್ರಾಡ್ "ನನಗೂ ಕೂಡ ಈ ರೀತಿಯಾಗಿ ಪಂದ್ಯವನ್ನು ಗೆಲ್ಲುವುದು ಇಷ್ಟವಿಲ್ಲ" ಎಂದಿದ್ದಾರೆ.

ಮುಟ್ಟಿ ನೋಡುವಂತಾ ತಿರುಗೇಟು ನೀಡಿದ ಹರ್ಷ ಬೋಗ್ಲೆ

ಇನ್ನು ದೀಪ್ತಿ ಶರ್ಮಾ ಮಾಡಿದ ರನೌಟ್ ವಿವಾದದ ಸ್ವರೂಪ್ ಪಡೆಯುತ್ತಿದ್ದಂತೆಯೇ ಭಾರತೀಯ ಆಟಗಾರ್ತಿಗೆ ಸಾಕಷ್ಟು ಬೆಂಬಲಗಳು ಕೂಡ ವ್ಯಕ್ತವಾಗಿದೆ. ಅದರಲ್ಲೂ ಖ್ಯಾತ ಕಾಮೆಂಟೇಟರ್ ಹರ್ಷ ಬೋಗ್ಲೆ ಇಂಗ್ಲೆಂಡ್ ತಂಡಕ್ಕೆ ಮುಟ್ಟಿನೋಡಿಕೊಳ್ಳುವಂತಾ ಪ್ರತಿಕ್ರಿಯೆ ನೀಡಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಗೆದ್ದ ರೀತಿಯನ್ನು ಉಲ್ಲೇಖಿಸಿರುವ ಹರ್ಷ ಬೋಗ್ಲೆ 'ಸ್ಪಿರಿಟ್ ಆಫ್ ಗೇಮ್' ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ಆಟಗಾರರಿಗೆ ಕುಟುಕಿದ್ದಾರೆ. ಅಲ್ಲದೆ ಜೊತೆಗೆ ರನೌಟ್ ಮಾಡುವ ಬದಲಿಗೆ ಬೌಲಿಂಗ್ ನಡೆಸುವುದಕ್ಕೂ ಮುನ್ನವೇ ಓಡಿ ಕ್ರೀಸ್ ಬಿಟ್ಟು ಆ ಮೂಲಕ ರನ್‌ಗಳಿಸಿಕೊಂಡಿದ್ದರೆ ಅದು ಸ್ಪಿರಿಟ್ ಆಫ್‌ ದಿ ಗೇಮ್ ಆಗಿರುತ್ತಿತ್ತಾ" ಎಂದು ಪ್ರಶ್ನಿಸಿದ್ದಾರೆ.

ರನೌಟ್ ಬಗ್ಗೆ ಪ್ರಶ್ನಿಸಿದ ನಿರೂಪಕನಿಗೆ ತಿರುಗೇಟು ನೀಡಿದ ಹರ್ಮನ್

ಇನ್ನು ಒಂದ್ಯದ ಮುಕ್ತಾಯದ ಬಳಿಕ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಪ್ರಶ್ನೆ ಮಾಡಿದಾಗ ದೀಪ್ತಿ ಶರ್ಮಾ ಮಾಡಿದ ರನೌಟ್‌ಅನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ ಆ ರನೌಟ್ ಬಗ್ಗೆ ಪ್ರಶ್ನೆ ಕೇಳಿದ ಕಾಮೆಂಟೇಟರ್‌ಗೆ ತಮ್ಮದೇ ದಾಟಿಯಲ್ಲಿ ಚಾಟಿ ಬೀಸಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಪಡೆದುಕೊಂಡ ಎಲ್ಲಾ 10 ವಿಕೆಟ್‌ಗಳ ಬಗ್ಗೆಯೂ ನೀವು ಪ್ರಶ್ನೆ ಕೇಳುತ್ತೀರಿ ಎಂದು ಭಾವಿಸಿದ್ದೆ ಯಾಕೆಂದರೆ ಅದ್ಯಾವುದೂ ಸುಲಭದ್ದಾಗಿರಲಿಲ್ಲ. ಇದು ಆಟದ ಒಂದು ಭಾಗವಾಗಿದ್ದು ನಾವು ವಿಭಿನ್ನವಾಗಿ ಏನೂ ಮಾಡಿದ್ದೇವೆ ಎನಿಸುತ್ತಿಲ್ಲ. ಇದು ಬ್ಯಾಟರ್‌ಗಳು ಏನು ಮಾಡುತ್ತಿದ್ದಾರೆ ಎಂದು ನಮ್ಮಲ್ಲಿರುವ ಅರಿವನ್ನು ತೋರಿಸುತ್ತದೆ. ನಾನು ನನ್ನ ಆಟಗಾರ್ತಿಯರನ್ನು ಬೆಂಬಲಿಸುತ್ತೇನೆ. ಆಟದ ನಿಯಮಗಳಿಗೆ ವಿರುದ್ಧವಾಗಿ ನಾವು ಏನೂ ಮಾಡಿಲ್ಲ. ಇದು ಆಟದ ನಿಯಮದಲ್ಲಿಯೇ ಇದೆ. ಅಗತ್ಯ ಬಂದಾಗ ನಾವು ಇದನ್ನು ಮುಂದೆಯೂ ಮಾಡುತ್ತೇವೆ" ಎಂದಿದ್ದಾರೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್.

Story first published: Sunday, September 25, 2022, 10:47 [IST]
Other articles published on Sep 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+