2 ವಿಕೆಟ್ ಪಡೆಯುತ್ತಲೇ ಇತಿಹಾಸ ನಿರ್ಮಿಸಲಿರುವ ಟೀಮ್ ಇಂಡಿಯಾ ಆಲ್‌ರೌಂಡರ್
ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಅಂಗಳಕ್ಕೆ ಇಳಿದಿತ್ತು. ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು. ಈಗ ಬುಧವಾರ ಉಭಯ ದೇಶಗಳ ನಡುವಣ ಎರಡನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು ದೊಡ್ಡ ದಾಖಲೆಯನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ.
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದಲ್ಲಿ ದೀಪ್ತಿ ಶರ್ಮಾ, ದೊಡ್ಡ ಪಾತ್ರವನ್ನು ವಹಿಸಿದ್ದರು. ಇವರ ಅಮೋಘ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಗರು ಸಹ ಸಂದಿತ್ತು. ಈಗ ಇವರು ಎರಡನೇ ಪಂದ್ಯದಲ್ಲಿ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ದೀಪ್ತಿ ಶರ್ಮಾ ದೊಡ್ಡ ದಾಖಲೆ ಬರೆಯುವ ಕನಸಿನಲ್ಲಿದ್ದಾರೆ. ಎರಡನೇ ಪಂದ್ಯದಲ್ಲಿ 2 ವಿಕೆಟ್‌ಗಳನ್ನು ದೀಪ್ತಿ ಪಡೆಯುವಲ್ಲಿ ಯಶಸ್ವಿಯಾದರೆ, ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಪಡೆದ ಸಾಧನೆಯನ್ನು ಮಾಡಲಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಇವರಿಗಿಂತಲೂ ಮೊದಲು ಆಸ್ಟ್ರೇಲಿಯಾದ ಮೇಗನ್ ಶುಟ್ ಅವರು ಈ ಸಾಧನೆ ಮಾಡಿದ್ದರು. ಇವರು ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ 151 ವಿಕೆಟ್ ಕಬಳಿಸಿದ ಹಿರಿಮೆ ಹೊಂದಿದ್ದಾರೆ.
ದೀಪ್ತಿ ಶರ್ಮಾ ಈ ವರೆಗೆ ಭಾರತದ ಪರ 130 ಪಂದ್ಯಗಳ 127 ಇನಿಂಗ್ಸ್‌ಗಳಲ್ಲಿ 18.99ರ ಸರಾಸರಿಯಲ್ಲಿ 148 ವಿಕೆಟ್ ಪಡೆದಿದ್ದಾರೆ. ಇವರು ಎರಡನೇ ಟಿ20 ಪಂದ್ಯದಲ್ಲಿ ದೊಡ್ಡ ದಾಖಲೆ ಪಡೆಯುವ ಕನಸಿನಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಮೇಗನ್ ಶುಟ್, ಆಸ್ಟ್ರೇಲಿಯಾ, 151
ದೀಪ್ತಿ ಶರ್ಮಾ, ಭಾರತ, 148
ಹೆನ್ರಿಯೆಟ್ ಇಶಿಮ್ವೆ, ರುವಾಂಡಾ, 144
ನಿದಾ ದಾರ್, ಪಾಕಿಸ್ತಾನ, 144
ಸೋಫಿ ಎಕ್ಲೆಸ್ಟೋನ್, ಇಂಗ್ಲೆಂಡ್, 142
ಮತ್ತೊಂದು ದಾಖಲೆ
ದೀಪ್ತಿ ಶರ್ಮಾ ಎರಡನೇ ಟಿ20 ಪಂದ್ಯದಲ್ಲಿ ಎರಡು ವಿಕೆಟ್ ಪಡೆದಲ್ಲಿ ಈ ಸ್ವರೂಪದಲ್ಲಿ 150 ವಿಕೆಟ್ ಪಡೆದ ದಾಖಲೆ ನಿರ್ಮಿಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಆಗಲಿದ್ದಾರೆ. ಇಷ್ಟೇ ಅಲ್ಲದೆ 1000 ರನ್ ಬಾರಿಸಿದ ಹಾಗೂ 150 ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಪ್ಲೇಯರ್ ಎಂಬ ಹೆಗ್ಗಳಿಕೆ ಸಹ ತಮ್ಮದಾಗಿಸಿಕೊಳ್ಳಲಿದ್ದಾರೆ.
ದೀಪ್ತಿ ಶರ್ಮಾ ಅವರು ಆಸ್ಟ್ರೇಲಿಯಾದ ಮೇಗನ್ ಶುಟ್ ಅವರ ದಾಖಲೆಯನ್ನು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಳಿಸಿ ಹಾಕಬಹುದು. ಈ ಸರಣಿಯಲ್ಲಿ ಇವರು ಇನ್ನು 4 ವಿಕೆಟ್ ಪಡೆದಿದ್ದೇ ಆದಲ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications