The Hundred: ದೀಪ್ತಿ ಶರ್ಮಾ, ರಿಚಾ ಘೋಷ್‌ಗೆ ಹರಾಜಿನಲ್ಲಿ ಭರ್ಜರಿ ಮೊತ್ತ
ಇಂಗ್ಲೆಂಡ್‌ನ ಪ್ರಸಿದ್ಧ 100-ಬಾಲ್ ಲೀಗ್, ದಿ ಹಂಡ್ರೆಡ್‌ಗಾಗಿ ನಡೆದ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರ್ತಿಯರು ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿಕೊಂಡರು. ಭಾರತೀಯ ಆಟಗಾರ್ತಿಯರು ಸಹ ಈ ವೇಳೆ ಎಲ್ಲರ ಗಮನ ಸೆಳೆದರು. ಏಕದಿನ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರಿಗೆ ಸನ್‌ರೈಸರ್ಸ್ ಲೀಡ್ಸ್ ತಂಡ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಈ ಮೂಲಕ ಈ ಹರಾಜಿನಲ್ಲಿ ಮಾರಾಟವಾದ ಮೊದಲ ಭಾರತೀಯ ಆಟಗಾರ್ತಿ ಎಂಬ ಶ್ರೇಯ ಇವರದ್ದಾಯಿತು. ಈ ಹಿಂದೆಯೂ ಇವರು ಎರಡು ಋತುಗಳಲ್ಲಿ ಲಂಡನ್ ಸ್ಪಿರಿಟ್ ಪರ ಆಡಿದ್ದರು. ಈಗ ಇವರು ಹೊಸ ತಂಡದೊಂದಿಗೆ ತಮ್ಮ ಪ್ರಯಾಣ ಆರಂಭಿಸಲಿದ್ದಾರೆ.
ದೀಪ್ತಿ ಶರ್ಮಾ ಅವರಿಗೆ ಸನ್‌ರೈಸರ್ಸ್ ಲೀಡ್ಸ್ ಸುಮಾರು 34 ಲಕ್ಷ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಸಹ ಭಾರೀ ಮೊತ್ತವನ್ನು ತಮ್ಮ ಜೇಬಿಗೆ ಹಾಕಿಕೊಂಡರು. ಇವರಿಗೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡ ಸುಮಾರು 61 ಲಕ್ಷ ರೂಪಾಯಿ ನೀಡಿದೆ. ರಿಚಾ ಘೋಷ್ ಪ್ರಸ್ತುತ ಭಾರತೀಯ ತಾರೆ ಸ್ಮೃತಿ ಮಂಧಾನ ಅವರೊಂದಿಗೆ ಆಡಲಿದ್ದಾರೆ. ಸ್ಮೃತಿ ಅವರೊಂದಿಗೆ ತಂಡ ಈ ಮೊದಲೇ ಒಪ್ಪಂದವನ್ನು ಮಾಡಿಕೊಂಡಿತು.

ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಹರಾಜಿನಲ್ಲಿ ಭಾಗವಹಿಸಲಿಲ್ಲ. ಜೆಮಿಮಾ ರೊಡ್ರಿಗಸ್ ಈಗಾಗಲೇ ಸದರ್ನ್ ಬ್ರೇವ್ ತಂಡ ಸೇರಿದ್ದಾರೆ. ಹರಾಜಿನಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಯಾಸ್ತಿಕಾ ಭಾಟಿಯಾ ಮತ್ತು ಯುವ ಸ್ಪಿನ್ನರ್ ಶ್ರೀ ಚರಣಿ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಒಟ್ಟು 178 ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಿದ್ದರು, ಆದರೆ 28 ಆಟಗಾರ್ತಿಯರನ್ನು ಫ್ರಾಂಚೈಸಿ ರಿಟೇನ್ ಮಾಡಿದೆ.
ಇವರೇ ದುಬಾರಿ ಆಟಗಾರ್ತಿಯರು
ಆಸ್ಟ್ರೇಲಿಯಾದ ಭರವಸೆಯ ಆಟಗಾರ್ತಿ ಬೆತ್ ಮೂನಿ ಅವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸಿದರು. ಇವರಿಗೆ ಟ್ರೆಂಟ್ ರಾಕೆಟ್ಸ್ ತಂಡ ಸುಮಾರು 2.59 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಇವರನ್ನು ಅನುಭವಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಎಂದು ಪರಿಗಣಿಸಿ ಹಣವನ್ನು ಹೂಡಲಾಗಿದೆ. ಸುಮಾರು 2.59 ಕೋಟಿ ರೂ. ನೀಡಿ ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಸೋಫಿ ಡಿವೈನ್ ಅವರನ್ನು ಅದೇ ಮೊತ್ತಕ್ಕೆ ವೇಲ್ಸ್ ಫೈರ್ ತಂಡ ಖರೀದಿಸಿತು. ಇವರು ಭಾರತದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು. ಈ ಹರಾಜಿನಲ್ಲಿ ಇಂಗ್ಲೆಂಡ್‌ನ ಡ್ಯಾನಿ ಗಿಬ್ಸನ್‌ಗೆ ಮೂರನೇ ದುಬಾರಿ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ದಿ ಹಂಡ್ರೆಡ್ ಟೂರ್ನಿ ಆರಂಭವಾಗುವುದು ಯಾವಾಗ?
ಆರನೇ ಆವೃತ್ತಿಯ ದಿ ಹಂಡ್ರೆಡ್ ಜುಲೈ 21 ರಂದು ಪ್ರಾರಂಭವಾಗಿ ಆಗಸ್ಟ್ 16 ರವರೆಗೆ ನಡೆಯಲಿದೆ. ಪುರುಷರ ಆಟಗಾರರ ಹರಾಜು ಮಾರ್ಚ್ 12 ರ ಗುರುವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications