For Quick Alerts
ALLOW NOTIFICATIONS  
For Daily Alerts
 

IND-W vs ENG-W: ದೀಪ್ತಿ ಶರ್ಮಾ ಸೊಗಸಾದ ಆಟ: ಭಾರತಕ್ಕೆ ಸರಣಿಯಲ್ಲಿ ಮುನ್ನಡೆ

ದೀಪ್ತಿ ಶರ್ಮಾ ಅವರ ಸೊಗಸಾದ ಆಟದ ನೆರವಿನಿಂದ ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ 4 ವಿಕೆಟ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಟ್ಯಾಮಿ ಬ್ಯೂಮಾಂಟ್ (5), ಆಮಿ ಜೋನ್ಸ್ (1) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ ಎಮ್ಮಾ ಲ್ಯಾಂಬ್ ಹಾಗೂ ನ್ಯಾಟ್ ಸ್ಕಿವರ್-ಬ್ರಂಟ್ ಜೋಡಿ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ಜೋಡಿಯ ಆಟಕ್ಕೆ ತಡೆ ಹಾಕುವಲ್ಲಿ ಭಾರತ ವಿಫಲರಾದರು. ಈ ಜೋಡಿ 87 ಎಸೆತಗಳಲ್ಲಿ 71 ರನ್‌ ಸೇರಿಸಿತು. ಎಮ್ಮಾ ಲ್ಯಾಂಬ್ 39 ರನ್‌ಗಳಿಸಿ ಜಯ ಸಾಧಿಸಿದರು. ಇನ್ನು ಭರವಸೆಯ ಆಟಗಾರ್ತಿ ನ್ಯಾಟ್ ಸ್ಕಿವರ್-ಬ್ರಂಟ್ 5 ಬೌಂಡರಿ ಸಹಾಯದಿಂದ 41 ರನ್‌ ಸಿಡಿಸಿ ಔಟ್ ಆದರು.

Deepti Sharma Shines as India Beat England by 4 Wickets in 1st ODI at Southampton

ಇಂಗ್ಲೆಂಡ್‌ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮಧ್ಯಮ ಕ್ರಮಾಂಕದ ಸೋಫಿಯಾ ಡಂಕ್ಲಿ ಹಾಗೂ ಆಲಿಸ್ ಡೇವಿಡ್ಸನ್-ರಿಚರ್ಡ್ಸ್ ಆಧಾರವಾದರು. ಈ ಜೋಡಿ ಐದನೇ ವಿಕೆಟ್‌ಗೆ 142 ಎಸೆತಗಳಲ್ಲಿ 106 ರನ್‌ ಸೇರಿಸಿತು. ಸೋಫಿಯಾ ಡಂಕ್ಲಿ 92 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 83 ರನ್‌ ಸಿಡಿಸಿದರು. ಆಲಿಸ್ ಡೇವಿಡ್ಸನ್-ರಿಚರ್ಡ್ಸ್ 73 ಎಸೆತಗಳಲ್ಲಿ 53 ರನ್‌ ಗಳಿಸಿದರು. ಸೋಫಿ ಎಕ್ಲೆಸ್ಟೋನ್ ಅಜೇಯ 23 ರನ್‌ ಸಿಡಿಸಿದರು.

ಅಂತಿಮವಾಗಿ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 258 ರನ್‌ ಸೇರಿಸಿತು. ಭಾರತದ ಪರ ಕ್ರಾಂತಿ ಗೌಡ್ ಹಾಗೂ ಸ್ನೇಹಾ ರಾಣ ತಲಾ ಎರಡು ವಿಕೆಟ್‌ ಕಬಳಿಸಿದರು.

ಉತ್ತಮ ಜೊತೆಯಾಟ

ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಪ್ರತಿಕ್‌ ರಾವಲ್‌ (36) ಹಾಗೂ ಸ್ಮೃತಿ ಮಂಧನಾ (28) ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿದರು. ಈ ಜೋಡಿ 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದ ಸ್ಟಾರ್‌ ಆಟಗಾರ್ತಿ ಹರ್ಲಿನ್ ಡಯೊಲ್‌ (27) ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (17) ಜೋಡಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು.

5ನೇ ವಿಕೆಟ್‌ಗೆ 90 ರನ್

ಟೀಮ್ ಇಂಡಿಯಾ ಪರ ಐದನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಜೇಮಿಮಾ ರೋಡ್ರಿಗಸ್‌ ಅವರು ಸೊಗಸಾದ ಜೊತೆಯಾಟ ನೀಡಿದರು. ಈ ಜೋಡಿ 86 ಎಸೆತಗಳಲ್ಲಿ 90 ರನ್‌ ಸೇರಿಸಿತು. ಜೇಮಿಮಾ ರೋಡ್ರಿಗಸ್‌ 54 ಎಸೆತಗಳಲ್ಲಿ 48 ರನ್‌ ಸಿಡಿಸಿದರು. ದೀಪ್ತಿ ಶರ್ಮಾ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 62 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಕೆಳ ಕ್ರಮಾಂಕದಲ್ಲಿ ಅಮನ್ಜೋತ್‌ ಕೌರ್‌ ಅಜೇಯ 20 ರನ್‌ ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಭಾರತ ವನಿತೆಯರು 48.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 262 ರನ್‌ ಸೇರಿಸಿತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.

Story first published: Thursday, July 17, 2025, 8:45 [IST]
Other articles published on Jul 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+