ಕನಸು ನನಸಾದಂತೆ ಆಗಿದೆ: ದೀಪ್ತಿ ಶರ್ಮಾ
ಮಹಿಳಾ ಏಕದಿನ ವಿಶ್ವಕಪ್ ಭಾರತ ಗೆದ್ದಿದೆ. ನಾಕೌಟ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿದ ಭಾರತ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ನವಿ ಮುಂಬೈನಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಟೀಮ್ ಇಂಡಿಯಾ ಹಬ್ಬದೂಟವನ್ನು ಉಣ ಬಡಿಸಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಈ ವೇಳೆ ಸ್ಟಾರ್ ಆಟಗಾರ್ತಿಯರು ಸಹ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಮಿಂಚಿದ್ದಾರೆ. ಈ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಆಟಗಾರ್ತಿ ಪ್ರದರ್ಶನವನ್ನು ಆಲ್‌ರೌಂಡರ್ ದೀಪ್ತಿ ಶರ್ಮಾ ಪಡೆದಿದ್ದಾರೆ.
ದೀಪ್ತಿ ಶರ್ಮಾ ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ದೀಪ್ತಿ ಶರ್ಮಾ ಅವರ ಶ್ರೇಷ್ಠ ಪ್ರದರ್ಶನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲೂ ಮುಂದುವರೆಯಿತು. ಈ ಪಂದ್ಯದಲ್ಲಿ ದೀಪ್ತಿ ಶರ್ಮಾ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 58 ರನ್ ಬಾರಿಸಿ ಅಬ್ಬರಿಸಿದರು. ಅಲ್ಲದೆ ಬೌಲಿಂಗ್‌ನಲ್ಲೂ 39 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇವರ ಈ ಶ್ರೇಷ್ಠ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಇದೇ ವೇಳೆ ದೀಪ್ತಿ ಮನ ಬಿಚ್ಚಿ ಮಾತನಾಡಿದ್ದಾರೆ.

ಇದು ನಿಜಕ್ಕೂ ಕನಸಿನಂತೆ ಭಾಸವಾಗುತ್ತದೆ. ಏಕೆಂದರೆ ನಾವು ಇನ್ನೂ ಸಹ ಈ ಗೆಲುವಿನ ಹುಮ್ಮಸ್ಸಿನಿಂದ ಹೊರ ಬಂದಿಲ್ಲ. ಫೈನಲ್ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದ್ದು ಖುಷಿ ನೀಡಿದೆ. ನಾವು ಪ್ರತಿ ಪಂದ್ಯದಲ್ಲೂ ಕಲಿತಿದ್ದೇವೆ. ಈ ಪ್ರಶಸ್ತಿ ತಂಡವಾಗಿ ನಮಗೆ ತುಂಬ ಖುಷಿ ನೀಡಿದೆ. ಈ ಟೂರ್ನಿಯಲ್ಲಿ ಆಲ್‌ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದು ತೃಪ್ತಿ ತಂದಿದೆ. ಇನ್ನು ಮುಂದೆ ಮಹಿಳಾ ಕ್ರಿಕೆಟ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಅವಕಾವನ್ನು ಮಾಡಬೇಕಾಗಿದೆ ಎಂದು ದೀಪ್ತಿ ಶರ್ಮಾ ತಿಳಿಸಿದ್ದಾರೆ.
ವಿಶ್ವಕಪ್‌ನಲ್ಲಿ ಪ್ರದರ್ಶನ
ದೀಪ್ತಿ ಶರ್ಮಾ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 215 ರನ್ ಗಳಿಸಿದ್ದಾರೆ. ಈ ವೇಳೆ ಇವರು 30.17ರ ಸರಾಸರಿಯಲ್ಲಿ 215 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸಹ ಸೇರಿವೆ. ಇನ್ನು ದೀಪ್ತಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಇವರು 20.40ರ ಸರಾಸರಿಯಲ್ಲಿ 22 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications