IPL 2024: ಗ್ರೌಂಡ್ ಬಿಟ್ಟು ಅಡಿಗೆ ಮನೆ ಸೇರಿದ ಡೇವಿಡ್ ವಾರ್ನರ್: ಏನ್ ಮಾಡಿದ್ರೂ ಗೊತ್ತಾ?
IPL 2024 ಇಂದಿನಿಂದ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಡೇವಿಡ್ ವಾರ್ನರ್ ಡಿಫ್ರೆಂಟ್ ಗೆಟ್‌ಅಪ್‌ನಲ್ಲಿ ಕಾಣಿಸಿಕೊಂಡರು. ಸಾಮಾನ್ಯವಾಗಿ ಡೇವಿಡ್ ವಾರ್ನರ್ ತಮ್ಮ ಬ್ಯಾಟಿಂಗ್‌ನಿಂದಲೇ ಎದುರಾಳಿ ಬೌಲರ್‌ಗಳ ಸದ್ದು ಅಡುಗಿಸುವ ಪ್ಲೇಯರ್. ಈ ಬಾರಿ ಅವರ ಡಿಫ್ರೆಂಟ್ ಲುಕ್ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ ಅವರ ಹೊಸ ಅವತಾರದ ವಿಡಿಯೋವನ್ನು ಹಂಚಿಕೊಂಡಿದೆ. ಸಾಮಾನ್ಯಾಗಿ ಡೇವಿಡ್ ವಾರ್ನರ್ ಟ್ರೆಂಡಿಗ್ ಆಟಗಾರ. ಕಳೆದ ಬಾರಿ ಪುಷ್ಪಾ ಡೈಲಾಗ್ ಸ್ಟೈಲ್ ಮಾಡಿ ಗಮನ ಸೆಳೆದಿದ್ರು. ಅಲ್ಲದೆ ಪುಷ್ಟಾ ಹಾಡಿನ ಸ್ಟೆಪ್ಸ್ ಹಾಕಿ ಸೈ ಎನಿಸಿಕೊಂಡಿದ್ದರು. ಈಗ ಡೇವಿಡ್ ವಾರ್ನರ್ ಅವರ ಹೊಸ ರೂಪ ಭಾರತೀಯ ಅಭಿಮಾನಿಗಳಿಗೆ ನಿಜಕ್ಕೂ ಮುದ ನೀಡಲಿದೆ.

ವಾರ್ನರ್ ಅಡುಗೆ ಮನೆಯಲ್ಲಿ ಏನನ್ನೋ ತಯಾರಿ ಮಾಡುತ್ತಿರುವ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ವಾರ್ನರ್ ತಮ್ಮ ಪ್ರದರ್ಶನದಿಂದಲೇ ಸುದ್ದಿಯಲ್ಲಿರುತ್ತಾರೆ. ಈಗ ಮೈದಾನದ ಹೊರಗೂ ಮನರಂಜನೆ ನೀಡುತ್ತಿದ್ದಾರೆ.
ವಾಸ್ತವವಾಗಿ ದೆಹಲಿ ಕ್ಯಾಪಿಟಲ್ಸ್ ವಾರ್ನರ್ ಅವರ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಅಡುಗೆ ಮನೆಯಲ್ಲಿ ಏನನ್ನೋ ಮಾಡುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೋವನ್ನು ಶೇರ್ ಮಾಡುವುದರ ಜೊತೆಗೆ ಡೆಲ್ಲಿ ಉತ್ತಮವಾದ ಶೀರ್ಷಿಕೆಯನ್ನೂ ನೀಡಿದೆ. ವಾರ್ನರ್ ಈ ಹಿಂದೆ ಹಲವು ಬಾರಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್ ವಿಡಿಯೋಗಳನ್ನೂ ಶೇರ್ ಮಾಡಿದ್ದಾರೆ. ಅವರ ಈ ವಿಡಿಯೋಗೆ ಅಭಿಮಾನಿಗಳಿಂದ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದುವರೆಗೆ ಐಪಿಎಲ್‌ನಲ್ಲಿ ವಾರ್ನರ್ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು 176 ಪಂದ್ಯಗಳಲ್ಲಿ 6397 ರನ್ ಗಳಿಸಿದ್ದು, ಒಟ್ಟಾರೆ 4 ಶತಕ ಹಾಗೂ 61 ಅರ್ಧ ಶತಕ ಸಿಡಿಸಿದ್ದಾರೆ. ವಾರ್ನರ್ ಕಳೆದ ಋತುವಿನಲ್ಲಿ 14 ಪಂದ್ಯಗಳಲ್ಲಿ 516 ರನ್ ಗಳಿಸಿದ್ದರು.
ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ. ಈ ಪಂದ್ಯ ಮಾರ್ಚ್ 23 ರಂದು ಚಂಡೀಗಢದಲ್ಲಿ ನಡೆಯಲಿದೆ. ಇದಾದ ಬಳಿಕ ಡೆಲ್ಲಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಮಾರ್ಚ್ 28 ರಂದು ಜೈಪುರದಲ್ಲಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಮೂರನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 31 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಏಪ್ರಿಲ್ 3 ರಂದು ಕೆಕೆಆರ್ ವಿರುದ್ಧ, ಏಪ್ರಿಲ್ 7 ರಂದು ಮುಂಬೈ ವಿರುದ್ಧ ಕಾದಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications