PBKS vs DC: ಪಂಜಾಬ್ ಅಗ್ರ ಸ್ಥಾನದ ಆಸೆಗೆ ತಣ್ಣೀರು ಹಾಕಿದ ಕ್ಯಾಪಿಟಲ್ಸ್
18ನೇ ಆವೃತ್ತಿಯ ಐಪಿಎಲ್‌ನ ಲೀಗ್ ಹಂತ ಕೊನೆಯ ಹಂತಕ್ಕೆ ಬಂದಿದ್ದು, ಗುಜರಾತ್ ಟೈಟಾನ್ಸ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡಗಳು ಕೊನೆಯ ಹಂತದಲ್ಲಿ ಸೋಲನ್ನು ಕಂಡಿವೆ. ಈ ಮೂಲಕ ಅಂಕ ಪಟ್ಟಿ ರೋಚಕತೆ ಹೆಚ್ಚಿಸಿದೆ. ಈ ಆವೃತ್ತಿಯ 66ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 206 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್ ಸೇರಿಸಿ ಜಯ ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ 15 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದೊಂದಿಗೆ ಟೂರ್ನಿಗೆ ಗುಡ್ ಬಾಯ್ ಹೇಳಿದೆ.

ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಕೆಎಲ್ ರಾಹುಲ್ ಹಾಗೂ ಫಾಫ್ ಡುಪ್ಲೇಸಿಸ್ ಜೋಡಿ ತಂಡಕ್ಕೆ ಪವರ್ ಫುಲ್ ಆರಂಭವನ್ನು ನೀಡಿತು. ಈ ಜೋಡಿ ಆಡಕ್ಕೆ ಆರಂಭದಲ್ಲಿ ಬ್ರೇಕ್ ಹಾಕುವಲ್ಲಿ ಪಂಜಾಬ್ ತಂಡ ವಿಫಲವಾಯಿತು. ಈ ಜೋಡಿ ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 55 ರನ್‌ಗಳ ಜೊತೆಯಾಟವನ್ನು ನೀಡಿತು. ಕೆಎಲ್ ರಾಹುಲ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್ ಸಿಡಿಸಿದರು. ಫಾಫ್ ಡುಪ್ಲೇಸಿಸ್ 23 ರನ್ ಸಿಡಿಸಿ ಪೆವಿಲಿಯನ್ ಹಾದಿ ಹಿಡಿದರು. ಸೆಡಿಕುಲ್ಲಾ ಅಟಲ್ (22) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಕರುಣ್, ಸಮೀರ್ ಜುಗಲ್ ಬಂಧಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರರಾದ ಕರುಣ್ ನಾಯರ್ ಹಾಗೂ ಸಮೀರ್ ರಿಜ್ವಿ ಜೋಡಿ ಉತ್ತಮ ಬ್ಯಾಟಿಂಗ್ ನಡೆಸಿತು. ಈ ಜೋಡಿ 30 ಎಸೆತಗಳಲ್ಲಿ 62 ರನ್ ಸೇರಿಸಿತು. ಉತ್ತಮವಾಗಿ ಆಡುತ್ತಿದ್ದ ಕರುಣ್ ನಾಯರ್ 44 ರನ್ ಬಾರಿಸಿ ಔಟ್ ಆದರು. ಆದರೆ ಸಮೀರ್ ರಿಜ್ವಿ ತಮ್ಮ ಕೆಲಸವನ್ನು ಕೊನೆಯವರೆಗೂ ಮಾಡಿದರು. ಇವರು 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 58 ರನ್ ಸಿಡಿಸಿದರು. ಟ್ರಿಸ್ಟಬ್ ಸ್ಟಬ್ಸ್ ಅಜೇಯ 18 ರನ್ ಸಿಡಿಸಿದರು.
ಶ್ರೇಯಸ್ ಅಯ್ಯರ್ ಅರ್ಧಶತಕ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರ ಪ್ರಿಯಾಂಶ್ ಆರ್ಯ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಪ್ರಭಸಿಮ್ರನ್ ಸಿಂಗ್ (28) ಹಾಗೂ ಜೋಶ್ ಇಂಗ್ಲಿಂಷ್ (32) ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಅರ್ಧಶತಕದತ್ತ ಮುನ್ನಡೆಯಿತು. ಈ ಜೋಡಿಯನ್ನು ವಿಪ್ರಜ್ ನಿಗಮ್ ಸಫಲರಾದರು.

ಮಧ್ಯಮ ಕ್ರಮಾಂಕದಲ್ಲಿ ನೇಹಲ್ ವಧೇರಾ, ಶಶಾಂಕ್ ಸಿಂಗ್ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ನಾಯಕ ಶ್ರೇಯಸ್ ಅಯ್ಯರ್ ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿದರು. ಇವರು 34 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿ ಅಬ್ಬರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮುಷ್ತಾಫಿಜುರ್ ರೆಹಮಾನ್ 3, ವಿಪ್ರಜ್ ನಿಗಮ್ ಹಾಗೂ ಕುಲ್‌ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications