WPL 2025: ಡೆಲ್ಲಿ ತಂಡದ ಸವಾಲು ಎದುರಿಸಲಿದೆ ಗುಜರಾತ್
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಈಗಾಗಲೇ ಡೆಲ್ಲಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಗುಜರಾತ್ ಪ್ಲೇ ಆಫ್ ರೇಸ್‌ಗೆ ಒಂದು ಹೆಜ್ಜೆ ಹತ್ತಿರವಾಗಲು, ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಲಕ್ನೋನಲ್ಲಿ ನಡೆಯಲಿರುವ ಈ ಪಂದ್ಯದ ಎಲ್ಲರ ಚಿತ್ತ ಕದ್ದಿದೆ.
ಯುಪಿ ವಾರಿಯರ್ಸ್ ತಂಡವನ್ನು ತವರಿನಲ್ಲಿ 81 ರನ್‌ಗಳಿಂದ ಮಣಿಸಿರುವ ಗುಜರಾತ್ ಜೈಂಟ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರೀ ಏರಿಕೆ ಕಂಡಿತ್ತು. ಈ ಗೆಲುವಿನೊಂದಿಗೆ 6 ಅಂಕ ಕಲೆ ಹಾಕಿರುವ ಗುಜರಾತ್, ಈ ಪಂದ್ಯ ಗೆದ್ದು ಪ್ಲೇ ಆಫ್ ಹಂತಕ್ಕೆ ಹತ್ತಿರವಾಗುವ ಕನಸು ಕಾಣುತ್ತಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 10 ಅಂಕಗಳನ್ನು ಕಲೆ ಹಾಕಿದ್ದು, ಅಗ್ರ ಸ್ಥಾನವನ್ನು ಭಧ್ರ ಪಡಿಸಿಕೊಳ್ಳಲು ಹೋರಾಟ ನಡೆಸಲಿದೆ.

ಸ್ಟಾರ್ ಆಟಗಾರರೇ ಬಲ
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸ್ಟಾರ್ ಆಟಗಾರರೇ ಬಲ ತುಂಬಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುವ ಪ್ಲೇಯರ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡ್ತಾ ಇದ್ದಾರೆ. ಬ್ಯಾಟಿಂಗ್‌ನಲ್ಲಿ ಭಾರತದ ಭರವಸೆಯ ಬ್ಯಾಟರ್ ಶೆಫಾಲಿ ವರ್ಮಾ ಮಿಂಚಿದ್ದಾರೆ. ಇವರಿಗೆ ನಾಯಕಿ ಮೆಗ್ ಲ್ಯಾನಿಂಗ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಇವರಿಬ್ಬರೂ ಭರ್ಜರಿ ಜೊತೆಯಾಟದ ಕಾಣಿಕೆ ನೀಡುವ ಅವಶ್ಯಕತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೆಸ್ ಜೊನಾಸ್ಸೆನ್ ಹಾಗೂ ಭಾರತದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ತಮ್ಮ ನೈಜ್ಯ ಆಟವನ್ನು ಆಡಬೇಕಿದೆ. ಇನ್ನು ಅಂಡರ್ 19 ಟಿ20 ಮಹಿಳಾ ವಿಶ್ವಕಪ್ ಗೆದ್ದ ತಂಡದ ನಾಯಕಿ ಭಾರತ ನಿಕ್ಕಿ ಪ್ರಸಾದ್ ತಾವು ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ಮೆಟ್ಟಿ ನಿಲ್ಲಬೇಕಿದೆ.
ಡೆಲ್ಲಿ ತಂಡದಲ್ಲಿ ಅನುಭವಿ ಬೌಲರ್‌ಗಳು ಇದ್ದು ವಿಕೆಟ್ ಬೇಟೆ ನಡೆಸಬಲ್ಲರು. ಜೆಸ್ ಜೊನಾಸ್ಸೆನ್ ಹಾಗೂ ಶಿಖಾ ಪಾಂಡ್ಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಅನ್ನಾಬೆಲ್ ಸದರ್ಲ್ಯಾಂಡ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಮರಿಜಾನ್ನೆ ಕಪ್ಪ್ ಹಾಗೂ ಮಿನು ಮಣಿ ಬಿಗುವಿನ ದಾಳಿಯನ್ನು ನಡೆಸಬೇಕಿದೆ.
ಗುಜರಾತ್‌ಗೆ ಗೆಲುವಿನ ವಿಶ್ವಾಸ
ಗುಜರಾತ್ ಜೈಂಟ್ಸ್ ತಂಡದ ನಾಯಕಿ ಆಶ್ಲೀ ಗಾರ್ಡ್ನರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಇನ್ನು ಭರವಸೆಯ ಬ್ಯಾಟರ್‌ಗಳಾದ ಹರ್ಲಿನ್ ಡಯಲ್, ಡೆಂಟ್ರಾ ಡಾಟಿನ್, ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಅವಶ್ಯಕತೆ ಇದೆ.

ಗುಜರಾತ್ ತಂಡದಲ್ಲಿ ಅನುಭವಿ ಬೌಲರ್‌ಗಳ ಗೊಂಚಲೇ ಇದೆ. ಕಾಶ್ವೀ ಗೌತಮ್ ಬಿಗುವಿನ ದಾಳಿ ನಡೆಸಿ ಆರಂಭದಲ್ಲಿ ವಿಕೆಟ್ ಬೇಟೆ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಉಳಿದಂತೆ ತನುಜಾ ಕನ್ವರ್, ಗಾರ್ಡ್ನರ್, ಡೆಂಟ್ರಾ ಸಹ ಚೆಂಡಿನೊಂದಿಗೆ ಎದುರಾಳಿಗಳಿಗೆ ಕಾಡಬಲ್ಲರು. ಈ ಆಟಗಾರರು ಬಿಗುವಿನ ದಾಳಿ ನಡೆಸಿದಲ್ಲಿ ಗೆಲುವು ಸಾಧ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications