DC vs UP WPL 2025: ಯುಪಿಗೆ ಹ್ಯಾಟ್ರಿಕ್ ಸೋಲಿನ ಭೀತಿ: ಗೆಲುವಿನ ಕನಸಿನಲ್ಲಿ ದೀಪ್ತಿ ಶರ್ಮಾ
ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ನಡುವೆ ಫೈಟ್ ನಡೆಯಲಿದೆ. ಯುಪಿ ವಾರಿಯರ್ಸ್ ಹ್ಯಾಟ್ರಿಕ್ ಸೋಲಿನ ಭೀತಿ ಕಾಡುತ್ತಿದ್ದು, ಡೆಲ್ಲಿ ಈ ಆವೃತ್ತಿಯಲ್ಲಿ ಮೂರನೇ ಜಯ ದಾಖಲಿಸುವತ್ತ ಚಿತ್ತ ನೆಟ್ಟಿದೆ. ಈ ಎರಡೂ ತಂಡಗಳ ನಡುವೆ ಬುಧವಾರ ಮುಖಾಮುಖಿ ಆಗಿತ್ತು. ಆಗ ಡೆಲ್ಲಿ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ. ಯುಪಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ.
ಉಭಯ ತಂಡದಲ್ಲೂ ಸ್ಟಾರ್ ಆಟಗಾರ್ತಿಯರಿದ್ದು ರೋಚಕತೆ ಹುಟ್ಟಿಸಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಜಯದ ಖಾತೆ ಓಪನ್ ಮಾಡುವ ಪ್ಲ್ಯಾನ್ ಯುಪಿ ತಂಡದ್ದಾಗಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ಡೆಲ್ಲಿ ತಂಡದ ಸ್ಟಾರ್ ಆಟಗಾರ್ತಿಯರು ಫಾರ್ಮ್‌ಗೆ ಮರಳಿದ್ದು ವಿಶ್ವಾಸವನ್ನು ಇಮ್ಮಡಿ ಮಾಡಿದೆ.

ಮೆಗ್ ಲ್ಯಾನಿಂಗ್ ಅಕರ್ಷಣೆ
ಬುಧವಾರ ನಡೆದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರು 49 ಎಸೆತಗಳಲ್ಲಿ 69 ರನ್ ಸಿಡಿಸಿ ಅಬ್ಬರಿಸಿದ್ದರು. ಇನ್ನು ಈ ಪಂದ್ಯದಲ್ಲಿ ಶೆಫಾಲಿ ಸಹ ಫಾರ್ಮ್ ಕಂಡು ಕೊಂಡಿದ್ದರು. ಹೀಗಾಗಿ ಈ ಇಬ್ಬರೂ ಆಟಗಾರ್ತಿಯರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಪ್ರಸಕ್ತ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ಕೊಂಚ ಹಿಂದೆ ಬಿದ್ದಿರುವ ಜಿಮಿಮಾ ರೋಡ್ರಿಗಸ್ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ. ಇವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಲಯ ಕಂಡು ಕೊಂಡಿದ್ದು ತಂಡಕ್ಕೆ ಆನೆ ಬಲ ಬಂದಂತೆ ಆಗಿದೆ.
ಡೆಲ್ಲಿ ತಂಡದ ಬ್ಯಾಟಿಂಗ್ ಸಹ ಉತ್ತಮವಾಗಿದೆ. ತಂಡದ ಪರ ಮರಿಜಾನ್ನೆ ಕಪ್, ಶಿಖಾ ಪಾಂಡೆ ಭರವಸೆಯ ಹೆಚ್ಚಿಸಿರುವ ಬೌಲರ್‌ಗಳು. ಮಿಡ್ಲ್ ಓವರ್‌ಗಳಲ್ಲಿ ಜೆಸ್ ಜೊನಾಸೆನ್, ಅನ್ನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಮಿನ್ನು ಮಣಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ.

ಗೆಲುವೊಂದೆ ಟಾರ್ಗೆಟ್
ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಯುಪಿ ವಾರಿಯರ್ಸ್ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಭರವಸೆಯ ಆಟಗಾರ್ತಿಯರಾದ ಕಿರಣ್ ನವಗಿರೆ, ದಿನೇಶ್ ವೃಂದಾ, ನಾಯಕಿ ದೀಪ್ತಿ ಶರ್ಮಾ, ತಹ್ಲಿಯಾ ಮೆಕ್‌ಗ್ರಾತ್, ಶ್ವೇತಾ ಸೆಹ್ರಾವತ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟಿಂಗ್ ಮಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ದೀಪ್ತಿ ಶರ್ಮಾ ಪ್ರಸಕ್ತ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಯುಪಿ ತಂಡದ ಬೌಲರ್‌ಗಳು ಬಿಗುವಿನ ದಾಳಿಯನ್ನು ನಡೆಸಿ ವಿಕೆಟ್ ಬೇಟೆ ನಡೆಸಬೇಕಿದೆ. ಸೋಫಿ ಎಕ್ಲೆಸ್ಟೋನ್, ಕ್ರಾಂತಿ ಗೌಡ, ಚಿನ್ಲೆ ಹೆನ್ರಿ, ದೀಪ್ತಿ ಶರ್ಮಾ ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದು ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡಬೇಕಿದೆ. ಅಂದಾಗ ಗೆಲುವು ಸಾಧ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications