Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಶಸ್ತಿ ಗೆಲ್ಲಲು ಬೇಕಾದ ವಿಶೇಷ ಶಕ್ತಿ ಡೆಲ್ಲಿ ತಂಡದಲ್ಲಿದೆ: ಮೊಹಮ್ಮದ್ ಕೈಫ್

Delhi Capitals have the fire power to win IPL 2021, says assistant coach Mohammad Kaif

ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಫೈನಲ್ ಹಂತಕ್ಕೇರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವುದನ್ನೇ ತನ್ನ ಅಂತಿಮ ಗುರಿಯನ್ನಾಗಿಟ್ಟುಕೊಂಡಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಹೇಳಿದ್ದಾರೆ.

"ನಾವು ಕಳೆದ ಬಾರಿಗಿಂತ ಈ ಬಾರಿ ಒಂದು ಹೆಜ್ಜೆ ಮುಂದಿಡುವುದನ್ನು ಬಯಸುತ್ತೇವೆ. ಅದುವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಂತಿಮ ಗುರಿಯಾಗಿದೆ. ಟೂರ್ನಿಯನ್ನು ಗೆಲ್ಲಲು ಬೇಕಾದ ಪ್ರತಿಭಾನ್ವಿತ ಆಟಗಾರರನ್ನು ನಾವು ಹೊಂದಿದ್ದೇವೆ. ಕಳೆದ ಬಾರಿಯೇ ನಾವು ಅತ್ಯಂತ ಸನಿಹಕ್ಕೆ ತಲುಪಿದ್ದೆವು" ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಉತ್ತಮ ಲಯದೊಂದಿಗೆ ಐಪಿಎಲ್ ಕಣಕ್ಕೆ

ಉತ್ತಮ ಲಯದೊಂದಿಗೆ ಐಪಿಎಲ್ ಕಣಕ್ಕೆ

"ನಮ್ಮ ತಂಡದ ಸಕಾರಾತ್ಮಕ ಅಂಶವೆಂದರೆ ನಾಯಕ ರಿಷಭ್ ಪಂತ್ ಸೇರಿದಂತೆ ಬಹುತೇಕ ಕ್ರಿಕೆಟಿಗರು ಸತತವಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ತಮ್ಮ ಆಟದಲ್ಲಿ ಈ ಕ್ರಿಕೆಟಿಗರು ಅತ್ಯುತ್ತ, ಲಯದಲ್ಲಿದ್ದರು. ಇದೇ ಲಯದಲ್ಲಿಯೇ ಈ ಆಟಗಾರರು ಐಪಿಎಲ್‌ಗೆ ಕಾಲಿಡುತ್ತಿದ್ದಾರೆ" ಎಂದು ಮೊಹಮ್ಮದ್ ಕೈಫ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಅಭ್ಯಾಸದಲ್ಲಿ ನಿರತ ಡೆಲ್ಲಿ ಕ್ರಿಕೆಟರ್ಸ್

ಅಭ್ಯಾಸದಲ್ಲಿ ನಿರತ ಡೆಲ್ಲಿ ಕ್ರಿಕೆಟರ್ಸ್

"ಕಳೆದ ಕೆಲ ದಿನಗಳಿಂದ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್ ತಾಲೀಮಿನಲ್ಲಿ ನಿರತರಾಗಿದ್ದರು. ಆದರೆ ಇಂದಿನ ಅಬ್ಯಾಸದ ಸಂದರ್ಭದಲ್ಲಿ ಆಟಗಾರರು ಎಲ್ಲರೂ ಕೂಡ ಫೀಲ್ಡಿಂಗ್ ಕಡೆಗೆ ಗಮನ ನೀಡಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಆ ಬಗ್ಗೆ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ" ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಡೆಲ್ಲಿ ಕೊಚ್ ಪಾಂಟಿಂಗ್ ನೇತೃತ್ವದಲ್ಲಿ ಅಭ್ಯಾಸ

ಡೆಲ್ಲಿ ಕೊಚ್ ಪಾಂಟಿಂಗ್ ನೇತೃತ್ವದಲ್ಲಿ ಅಭ್ಯಾಸ

ತಮ್ಮ ಕ್ವಾರಂಟೈನ್ ಅವಧಿಯನ್ನು ಪೂರೈಸಿದ ತಕ್ಷಣವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ತಂಡದ ಮೊದಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ತಂಡದ ಆಟಗಾರರ ಅಭ್ಯಾಸದ ಬಗ್ಗೆ ರೂಪುರೇಶೆಗಳನ್ನು ಡೆಲ್ಲಿ ಕೋಚ್ ಪಾಂಟಿಂಗ್ ರೂಪಿಸಿದಲಿದ್ದಾರೆ ಎಂದು ಕೈಫ್ ವಿವರಿಸಿದ್ದಾರೆ.

Story first published: Sunday, April 4, 2021, 22:32 [IST]
Other articles published on Apr 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+