Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021ರಲ್ಲಿ ಚೊಚ್ಚಲ ವಿಕೆಟ್ ಪಡೆದ ಇಶಾಂತ್ ಶರ್ಮಾ

Delhi Capitals Ishant Sharma taken maiden wicket in IPL 2021

ಅಹ್ಮದಾಬಾದ್: ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಗೆ ವಾಪಸ್ ಆಗಿದ್ದಾರೆ. ಮಂಗಳವಾರ (ಏಪ್ರಿಲ್ 27) ನಡೆದ ಐಪಿಎಲ್ 22ನೇ ಪಂದ್ಯದಲ್ಲಿ ಶರ್ಮಾ ಈ ಸೀಸನ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ವಿಕೆಟ್‌ ಪಡೆದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಆರಂಭಿಕರಾಗಿ ಬಂದಿದ್ದ ದೇವದತ್ ಪಡಿಕ್ಕಲ್ ವಿಕೆಟ್, ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಇಶಾಂತ್ ಶರ್ಮಾಗೆ ಲಭಿಸಿತು. 4.1ನೇ ಓವರ್‌ನಲ್ಲಿ ಪಡಿಕ್ಕಲ್ ಅವರು ಶರ್ಮಾಗೆ ಬೌಲ್ಡ್ ಆಗಿ 17 ರನ್‌ಗೆ ನಿರ್ಗಮಿಸಿದರು.

ಗಾಯಕ್ಕೀಡಾಗಿದ್ದರಿಂದ ಇಶಾಂತ್ ತಡವಾಗಿ ಐಪಿಎಲ್‌ಗೆ ವಾಪಸ್ಸಾಗಿದ್ದಾರೆ. ವಿಶೇಷವೆಂದರೆ ಐಪಿಎಲ್‌ 14ನೇ ಆವೃತ್ತಿಯಲ್ಲಿ ಆಡಿದ ಮೊದಲನೇ ಪಂದ್ಯದಲ್ಲೇ ಇಶಾಂತ್ ಒಂದು ಮೇಡ್‌ ಇನ್ ಓವರ್‌ ಕೂಡ ಎಸೆದು ಗಮನ ಸೆಳೆದಿದ್ದಾರೆ. 4 ಓವರ್‌ ಎಸೆದಿದ್ದ ಇಶಾಂತ್ 26 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

ಟೀಮ್ ಇಂಡಿಯಾ ಪರ 101 ಟೆಸ್ಟ್ ಪಂದ್ಯಗಳಲ್ಲಿ 303 ವಿಕೆಟ್, 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್, 14 ಟಿ20ಐ ಪಂದ್ಯಗಳಲ್ಲಿ 8 ವಿಕೆಟ್, 91 ಐಪಿಎಲ್ ಪಂದ್ಯಗಳಲ್ಲಿ 72 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Tuesday, April 27, 2021, 21:05 [IST]
Other articles published on Apr 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+