Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಸ್ವತಂತ್ರವಾಗಿ ಆಡೋದನ್ನು ಡೆಲ್ಲಿ ಕ್ಯಾಪಿಟಲ್ಸ್ ಮುಂದುವರೆಸಬೇಕು'

Delhi Capitals must continue to play with freedom, says Harsha Bhogle

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ವತಂತ್ರವಾಗಿ ಆಡೋದನ್ನು ಮುಂದುವರೆಸಬೇಕು ಎಂದು ಭಾರತದ ಕಾಮೆಂಟೇಟರ್ ಹರ್ಷ ಭೋಗ್ಲೆ ಹೇಳಿದ್ದಾರೆ. ಮಂಗಳವಾರ (ನವೆಂಬರ್ 10) ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ಭೋಗ್ಲೆ ಡೆಲ್ಲಿಗೆ ಈ ಸಲಹೆ ನೀಡಿದ್ದಾರೆ.

ಈ ಸೀಸನ್‌ ಆರಂಭದಿಂದಲೂ ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಲೀಗ್‌ ಹಂತದ ಕೊನೇ ಕ್ಷಣಗಳಲ್ಲಿ ಸತತ ನಾಲ್ಕು ಸೋಲಿನ ಮುಖಭಂಗ ಅನುಭವಿಸಿತ್ತು. ಗೆಲುವಿನ ಹಾದಿಯಲ್ಲಿದ್ದಾಗ ಹುಮ್ಮಸ್ಸಿನಲ್ಲಿದ್ದ ಡೆಲ್ಲಿ ಒಂದೆರಡು ಸೋಲಿನ ಬಳಿಕ ಇನ್ನಷ್ಟು ಕುಗ್ಗಿ ಸಾಲು ಸಾಲಾಗಿ ಸೋತಿತ್ತು.

ಸ್ವತಂತ್ರವಾಗಿ, ಆತ್ಮ ವಿಶ್ವಾಸದ ಆಟ ನೀಡುವಾಗ ಡೆಲ್ಲಿ ಎಷ್ಟು ಬಲಿಷ್ಠ ತಂಡವಾಗಲಿದೆ ಅನ್ನೋದನ್ನು ಮನಗಂಡಿರುವ ಭೋಗ್ಲೆ, ಟೂರ್ನಿಯ ಆರಂಭದಲ್ಲಿ ಆಡಿದಂತೆ ಫೈನಲ್‌ನಲ್ಲೂ ಸ್ವತಂತ್ರವಾಗಿ ಆಡುವಂತೆ ಡೆಲ್ಲಿಗೆ ಸಲಹೆ ನೀಡಿದ್ದಾರೆ. ಅಂದ್ಹಾಗೆ ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಫೈನಲ್‌ಗೆ ಪ್ರವೇಶಿಸುತ್ತಿರುವುದು ಇದೇ ಮೊದಲು.

ಟೈಮ್ಸ್ ಆಫ್ ಇಂಡಿಯಾದಲ್ಲಿ ಅಂಕಣ ಬರೆಯುವ ಭೋಗ್ಲೆ ಅದರಲ್ಲಿ, 'ಫಾರ್ಮ್‌ನಲ್ಲಿ ಇದ್ದ ಕಾರಣಕ್ಕೇ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ವರೆಗೂ ಬಂದಿದೆ. ಮುಂಬೈ 5ನೇ ಬಾರಿಗೆ ಟ್ರೋಫಿ ಗೆಲ್ಲುವ ಫೇವರಿಟ್ ತಂಡವೇ. ಆದರೆ ಡೆಲ್ಲಿ ತನ್ನ ಹಿಂದಿನ ಚಿತ್ರವನ್ನು ಮತ್ತೆ ತಂದುಕೊಳ್ಳಬೇಕು. ಸ್ವತಂತ್ರವಾಗಿ ಆಡಬೇಕಿದೆ,' ಎಂದು ಹೇಳಿದ್ದಾರೆ.

Story first published: Tuesday, November 10, 2020, 11:47 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+