ಡೆಲ್ಲಿ ಕ್ಯಾಪಿಟಲ್ಸ್‌ಗೆ ಬೌಲಿಂಗ್ ಕೋಚ್ ಆಗಿ ರಿಯಾನ್ ಹ್ಯಾರಿಸ್ ಆಯ್ಕೆ

ನವದೆಹಲಿ: ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ರಿಯಾನ್ ಹ್ಯಾರಿಸ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಹ್ಯಾರಿಸ್ ಮುನ್ನಡೆಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಬೌಲಿಂಗ್ ಕೋಚ್ ಆಗಿ ಅಸಲಿಗೆ ಆಸ್ಟ್ರೇಲಿಯಾದ ಜೇಮ್ಸ್ ಹೋಪ್ಸ್ ಅವರನ್ನು ಆರಿಸಲಾಗಿತ್ತು. ಆದರೆ ಹೋಪ್ಸ್ ವೈಯಕ್ತಿಕ ಕಾರಣದಿಂದ ಈ ಬಾರಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಹೋಪ್ಸ್ ಜಾಗವನ್ನು ಹ್ಯಾರಿಸ್ ಆವರಿಸಿಕೊಂಡಿದ್ದಾರೆ.
ಬ್ರಿಸ್ಬೇನ್‌ನಲ್ಲಿನ ನ್ಯಾಷನಲ್ ಕ್ರಿಕೆಟ್ ಸೆಂಟರ್‌ನಲ್ಲಿ ಕೋಚಿಂಗ್ ಜವಾಬ್ದಾರಿ ಹೊತ್ತಿದ್ದರಿಂದ 40ರ ಹರೆಯದ ರಿಯಾನ್ ಹ್ಯಾರಿಸ್ ಉತ್ತಮ ಅನುಭವ ಹೊಂದಿದ್ದಾರೆ. ಬ್ರಿಸ್ಬೇನ್‌ನಲ್ಲಿ ಕೋಚಿಂಗ್ ಜವಾಬ್ದಾರಿ ಬಳಿಕ ಹ್ಯಾರಿಸ್ ಸೀನಿಯರ್ ತಂಡಕ್ಕೂ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸಿದ್ದರು.
ಬ್ರಿಸ್ಬೇನ್ ಹೀಟ್‌ಗೆ ಬೌಲಿಂಗ್ ಕೋಚ್ ಆಗಿದ್ದ ಹ್ಯಾರಿಸ್ 2019ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲೂ ಜವಾಬ್ದಾರಿ ನಿರ್ವಹಿಸಿದ್ದರು. ಈಗ ಹ್ಯಾರಿಸ್ ಅವರು ಡೆಲ್ಲಿ ಮುಖ್ಯ ಕೋಚ್, ಮಾಜಿ ಸಹ ಆಟಗಾರ ರಿಕಿ ಪಾಂಟಿಂಗ್, ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ವೆಸ್ಟ್ ಇಂಡೀಸ್ ಕ್ರಿಕೆಟಿಗ ಸ್ಯಾಮ್ಯುಯೆಲ್ ಬದ್ರಿ ಮತ್ತು ವಿಜಯ್ ದಹಿಯಾ ಅವರಿರುವ ಕೋಚ್‌ಗಳ ತಂಡ ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications