IPL 2025: ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್?; ಫ್ಯಾನ್ಸ್ ನಿದ್ದೆಗೆಡಿಸಿದ ರಿಷಭ್ ಪಂತ್ ಪೋಸ್ಟ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸುವುದಕ್ಕಾಗಿ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ಚರ್ಚೆ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಮೆಗಾ ಹರಾಜು ಯಾವಾಗ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ.
ಐಪಿಎಲ್ ಫ್ರಾಂಚೈಸಿಗಳು ಯಾವ ಅಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬುದರ ಕಡೆ ಸಂಪೂರ್ಣ ಗಮನ ಹರಿಸಿವೆ. ಅಲ್ಲದೆ, ಮೆಗಾ ಹರಾಜಿನಲ್ಲಿ ಯಾವ ಹೊಸ ಆಟಗಾರರನ್ನು ಕರೆತರಬೇಕೆಂದು ತಂಡಗಳು ಕಾರ್ಯತಂತ್ರ ರೂಪಿಸುತ್ತಿದೆ. ಇದರ ಮಧ್ಯೆ ಹೆಚ್ಚಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸದ್ದು ಮಾಡುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿದೆ. ಇದಕ್ಕಾಗಿ ಮುಂಬರುವ ಐಪಿಎಲ್ 2025ರ ಟೂರ್ನಿಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಕೆಲವು ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಿದೆ. ಅವರಲ್ಲಿ ನಾಯಕ ರಿಷಬ್ ಪಂತ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಫ್ರೇ0ಸರ್ ಮೆಕ್‌ಗುರ್ಕ್, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೇವಿಡ್ ವಾರ್ನರ್ ಪ್ರಮುಖರು. ಆದರೆ, ಈಗ ಡೆಲ್ಲಿ ಯಾರನ್ನು ತನ್ನೊಂದಿಗೆ ಇಟ್ಟುಕೊಳ್ಳುತ್ತದೆ ಎಂಬುದನ್ನು ಕುತೂಹಲ ಮೂಡಿಸಿದೆ.
ಹೊಸ ಕ್ಯಾಪ್ಟನ್ ಹುಡುಕಾಟ?
ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನನ್ನು ಹೊಂದಲು ಬಯಸಿದೆ. ಈ ನಡುವೆ ಎಲ್ಲರ ಕಣ್ಣು ರಿಷಬ್ ಪಂತ್ ಮೇಲೆ ನೆಟ್ಟಿದೆ. ಪ್ರಸ್ತುತ ರಿಷಬ್ ಪಂತ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 99 ರನ್‌ಗಳನ್ನು ಕಲೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇಂತಹ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ಅವರನ್ನು ನಾಯಕತ್ವದಿಂದ ತೆಗೆದುಹಾಕಲು ಬಯಸಿದೆ ಎಂಬ ವಿಷಯ ಮಾಧ್ಯಮ ವರದಿಗಳಲ್ಲಿ ಬೆಳಕಿಗೆ ಬಂದಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನನ್ನು ಹುಡುಕುತ್ತಿದೆ. ಪಂತ್ ಬದಲಿಗೆ ಅಕ್ಸರ್ ಪಟೇಲ್ ನಾಯಕರಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ವರದಿಗಳು ಬೆಳಕಿಗೆ ಬರುತ್ತಿದಂತೆ ರಿಷಬ್ ಪಂತ್ ಅವರು ಇನ್‌ಸ್ಟಾಗ್ರಾಮ್ ಸ್ಟೋರಿ ಭಾರೀ ವೈರಲ್ ಆಗಿದೆ. "ಕೆಲವೊಮ್ಮೆ ಮೌನವಾಗಿರುವುದು ಉತ್ತಮ. ದೇವರು ಜನರಿಗೆ ತೋರಿಸುತ್ತಾನೆ" ಎಂದು ಬರೆದಿರುವ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೆ, ಪಂತ್ ಇನ್‌ಸ್ಟಾಗ್ರಾಮ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಕೌಂಟ್ ಪೇಜ್ ಅನ್ನು ಅನ್‌ಫಾಲೋ ಮಾಡಿದ್ದಾರೆ. ಇದೀಗ ಪಂತ್ ಅವರ ಈ ನಡೆ ಅಭಿಮಾನಿಗಳಿಗೆ ನಿದ್ದೆಗೆಡಿಸಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ ರಿಷಬ್ ಪಂತ್ ಆಡುವುದಿಲ್ಲವೇ? ಅಥವಾ ಡೆಲ್ಲಿಯಿಂದ ಹೊರ ಬಂದರೆ ಯಾವ ತಂಡ ಸೇರಬಹುದು? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ.
ಹೊಸ ಕೋಚ್
ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಸ ಕೋಚ್ ಸಿಬ್ಬಂದಿ ನೇಮಕಗೊಂಡಿದ್ದರು. ಹೇಮಂಗ್ ಬದಾನಿ ಅವರನ್ನು ಹೆಡ್ ಕೋಚ್ ಆಗಿ ನೇಮಿಸಿದರೆ, ವೇಣುಗೋಪಾಲ್ ರಾವ್ ಅವರನ್ನು ಕ್ರಿಕೆಟ್ ನಿರ್ದೇಶಕರಾಗಿ ನೇಮಿಸಲಾಗಿತ್ತು. ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಅಕ್ಟೋಬರ್ 31ರವರೆಗೆ ಕಾಲಾವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications