WPL 2026: ಯುಪಿ ವಾರಿಯರ್ಸ್ ವಿರುದ್ಧ ಅಬ್ಬರಿಸಿದ ಡೆಲ್ಲಿ ಪ್ಲೇ ಆಫ್‌ಗೆ
ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿತು. ಈ ಮೂಲಕ ಪ್ರಸಕ್ತ ಲೀಗ್‌ನಲ್ಲಿ 4ನೇ ಗೆಲುವು ದಾಖಲಿಸಿದ್ದು ಪ್ಲೇ ಆಫ್‌ಗೆ ಅರ್ಹತೆಯನ್ನು ಪಡೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ನಡುವಣ ಪಂದ್ಯವನ್ನು ನೋಡುತ್ತಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಿರಾಸೆ ಆಗಿದೆ. ಯುಪಿ ವಾರಿಯರ್ಸ್ ಲೀಗ್‌ನಲ್ಲಿ ಆರನೇ ಸೋಲನ್ನು ಕಂಡಿದೆ. ಅಲ್ಲದೆ ಲೀಗ್ ಹಂತದಲ್ಲಿ ಟೂರ್ನಿಗೆ ಗುಡ್ ಬಾಯ್ ಹೇಳಿದೆ. ಮಂಗಳವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಯುಪಿ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರ್ತಿ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಇನ್ನೋಬ್ಬ ಆರಂಭಿಕ ಆಟಗಾರ್ತಿ ದೀಪ್ತಿ ಶರ್ಮಾ ಆಟ 24 ರನ್‌ಗಳಿಗೆ ಕೊನೆಯಾಯಿತು. ಇವರ ಈ ಆಟದಲ್ಲಿ 4 ಬೌಂಡರಿ, 1 ಸಿಕ್ಸರ್‌ಗಳು ಸೇರಿವೆ.
ಕಾಪ್‌ಗೆ 3 ವಿಕೆಟ್
ಚಾರ್ಲಿ ನಾಟ್ 12, ಹರ್ಲಿನ್ ಡಿಯೋಲ್ 3, ಡಿಯಾಂಡ್ರಾ ಡಾಟಿನ್ 5 ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಸಿಮ್ರಾನ್ ಶೇಖ್ 22 ರನ್ ಬಾರಿಸಿದರೆ, ಕೆಳ ಕ್ರಮಾಂಕದಲ್ಲಿ ಶಿಖಾ ಪಾಂಡೆ 13 ಎಸೆತಗಳಲ್ಲಿ 23 ರನ್ ಸಿಡಿಸಿದರು. ಅಂತಿಮವಾಗಿ ಯುಪಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 122 ರನ್ ಸೇರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಮಾರಿಜಾನ್ ಕಾಪ್ 3, ಚಿನ್ಲೆ ಹೆನ್ರಿ ಹಾಗೂ ಶ್ರೀ ಚರಣಿ ತಲಾ 2 ವಿಕೆಟ್ ಉರುಳಿಸಿದರು.
ಲಾರಾ ವೋಲ್ವಾರ್ಡ್ ಜವಾಬ್ದಾರಿ ಆಟ
ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಲಿಜೇಲ್ ಲಿ ಮಹತ್ವದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಶಫಾಲಿ ವರ್ಮಾ ಹಾಗೂ ಲಾರಾ ವೋಲ್ವಾರ್ಡ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 64 ಎಸೆತಗಳಲ್ಲಿ 73 ರನ್ ಸೇರಿಸಿತು. ಈ ವೇಳೆ 7 ಬೌಂಡರಿ ನೆರವಿನಿಂದ 47 ರನ್ ಬಾರಿಸಿದ್ದ ಲಾರಾ ವೋಲ್ವಾರ್ಡ್ ಔಟ್ ಆದರು. ಶಫಾಲಿ ವರ್ಮಾ ಅವರ ಆಟ ಸಹ 29 ರನ್‌ಗಳಿಗೆ ಕೊನೆಯಾಯಿತು.

ನಾಯಕಿ ಜೆಮಿಮಾ ರೋಡ್ರಿಗಸ್ 5 ಬೌಂಡರಿ ನೆರವಿನಿಂದ ಅಜೇಯ 34 ರನ್ ಸಿಡಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 18.4 ಓವರ್‌ಗಳಲ್ಲಿ 5 ವಿಕೆಟ್‌ಗೆ 126 ರನ್ ಸಿಡಿಸಿ ಅಬ್ಬರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications