For Quick Alerts
ALLOW NOTIFICATIONS  
For Daily Alerts
 

IPL 2024: ತವರಿನಲ್ಲಿ ಡೆಲ್ಲಿ ಮಣಿಸುವುದೇ ಕೋಲ್ಕತ್ತಾ; ಹೇಗಿದೆ ಉಭಯ ತಂಡ ಬಲಾಬಲ

ಏಪ್ರಿಲ್‌ 29, ಸೋಮವಾರ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 47ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌) ಮುಖಾಮುಖಿಯಾಗಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಂಜೆ 7.30 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ರೋಚಕ ಹಣಾಹಣೆಯಲ್ಲಿ ಸೋತಿರುವ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೋಲ್ಕತ್ತಾ ತಂಡ ಇಂದು ಇನ್ನು ಬಲಿಷ್ಠವಾಗಿ ಕಣಕ್ಕೀಳಿಯಲಿದೆ. ಇನ್ನೊಂದೆಡೆ ರಿಷಬ್‌ ಪಂತ್‌ ಮುನ್ನೆಡೆಸುತ್ತಿರುವ ಡೆಲ್ಲಿ ತಂಡ ಸಹಾ ಕಳೆದ ಪಂದ್ಯ ಮುಂಬೈ ಇಂಡಿಯನ್ಸ್ ಎದುರು ಗೆಲುವು ಸಾಧಿಸಿದೆ.

Delhi Capitals vs Kolkata Knight Riders Preview IPL 2024 Match Report

ಎರಡು ತಂಡಗಳು ಕಳೆದ ಪಂದ್ಯಗಳಲ್ಲಿ 200 ಪ್ಲಸ್‌ ರನ್‌ ಗಳಿಸಿರುವುದು ಸಾಮಾನ್ಯವಾಗಿದ್ದು, ರಿಷಬ್‌ ಪಂತ್‌ ಪಡೆ ಗುರಿ ತಲುಪಲು ಮುಂಬೈಯನ್ನು ಬಿಡದೆ ಕಟ್ಟಿ ಹಾಕಿರುವುದು ಇಂದಿನ ಪಂದ್ಯ ಗೆಲ್ಲುವ ನಿರೀಕ್ಷೆ ಹೆಚ್ಚಿಸಿದೆ. ಇತ್ತ ಕೋಲ್ಕತ್ತಾ ಬೃಹತ್‌ ರನ್‌ ಕಲೆ ಹಾಕಿಯೂ ಪಂಜಾಬ್‌ ವಿರುದ್ಧ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ ಎರಡು ತಂಡಗಳನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಏಕಂದರೆ ಪಂದ್ಯವನ್ನು ಯಾವ ಹಂತದಲ್ಲಾದರೂ ಬದಲಾಯಿಸ ಬಲ್ಲ ಆಟಗಾರರು ಎರಡು ತಂಡದಲ್ಲಿ ಇರುವುದು ಸುಳ್ಳಲ್ಲ.

ಮಿಚೆಲ್‌ ಸ್ಟಾರ್ಕ್‌ ಆಡುವುದು ಅನುಮಾನು! :

ಡೆಲ್ಲಿ ಎದುರು ಕೆಕೆಆರ್‌ನ ಪ್ರಮುಖ ಅಸ್ತ್ರವಾಗಿರುವ 24.75 ಕೋಟಿಯ ದುಬಾರಿ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಆಡುವುದು ಅನುಮಾನವಾಗಿದೆ. ಬೆರಳಿನ ಗಾಯದ ಸಮಸ್ಯೆಯಿಂದ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಇನ್ನೂ ಫಿಟ್‌ ಆಗಿದ್ದಾರೆಯೇ ಎಂಬುದನ್ನು ಕೆಕೆಆರ್‌ ಫ್ರಾಂಚೈಸಿ ಇನ್ನು ತಿಳಿಸಿಲ್ಲ. ಒಂದು ವೇಳೆ ಮಿಚೆಲ್‌ ಸ್ಟಾರ್ಕ್ ಕಣಕ್ಕೀಳಿಯದಿದ್ದರೆ ಶ್ರೀಲಂಕಾ ಬೌಲರ್‌ ದುಷ್ಮಂತ ಚಮೀರ ಅವಕಾಶ ಪಡೆಯುವ ಸಾಧ್ಯತೆ ಇದೆ.

ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ ಉಭಯ ತಂಡಗಳು ಒಂದು ಬಾರಿ ಎದುರಾಗಿದ್ದು, ಈ ಪಂದ್ಯದಲ್ಲಿ ಕೋಲ್ಕತ್ತಾ ಎದುರು ಡೆಲ್ಲಿ ಸೋಲು ಕಂಡಿದೆ. ಹೀಗಾಗಿ ಕೋಲ್ಕತ್ತಾ ವಿರುದ್ಧ ಇಂದಿನ ಪಂದ್ಯ ಸೇಡಿನ ಸಮರವಾಗಿದೆ. ಕೆಕೆಆರ್‌ ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು, 3 ಸೋತಿದೆ. ಈ ಮೂಲಕ 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಡೆಲ್ಲಿ ಆಡಿರುವ 10 ಪಂದ್ಯಗಳಿಂದ 5 ಗೆಲುವು, 5 ಸೋಲು ಕಂಡಿದೆ. 10 ಅಂಕಗಳನ್ನು ಗಳಿಸಿರುವ ಡೆಲ್ಲಿ 6ನೇ ಸ್ಥಾನ ಪಡೆದೆ.

ಡಿಸಿ vs ಕೆಕೆಆರ್‌ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ :

ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವಿನ ಐಪಿಎಲ್ 2024ರ ರೋಚಕ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಡಿಸಿ vs ಕೆಕೆಆರ್‌ ಸಂಭ್ಯಾವ ಆಡುವ 11ರ ಬಳಗ :

ಡೆಲ್ಲಿ ಕ್ಯಾಪಿಟಲ್ಸ್‌ ಸಂಭ್ಯಾವ ತಂಡ : ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹಾಪ್, ರಿಷಭ್ ಪಂತ್ (ನಾಯಕ ಮತ್ತು ವಿ.ಕೀ), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಲಿಜಾದ್ ವಿಲಿಯಮ್ಸ್, ಮುಕೇಶ್ ಕುಮಾರ್, ಖಲೀಲ್ ಅಹ್ಮದ್.

ಕೋಲ್ಕತ್ತಾ ನೈಟ್‌ ರೈಡರ್ಸ್‌ ಸಂಭ್ಯಾವ ತಂಡ : ಫಿಲ್ ಸಾಲ್ಟ್ (ವಿ.ಕೀ), ಸುನಿಲ್ ನರೈನ್, ಆಂಗ್‌ಕೃಷ್‌ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರೆಸೆಲ್, ರಮಣದೀಪ್ ಸಿಂಗ್, ದುಷ್ಮಂತ ಚಮೀರಾ ಅಥವಾ ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

Story first published: Monday, April 29, 2024, 9:32 [IST]
Other articles published on Apr 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+