Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಮುಂಬೈ ಎದುರು ಸೇಡಿನ ಸಮರ ಸಾರಿದ ಡೆಲ್ಲಿ; ಉಭಯ ತಂಡಗಳ ಬಲಾಬಲ ಹೀಗಿದೆ

ಶನಿವಾರ, ಏಪ್ರಿಲ್‌ 27ರಂದು 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ಮತ್ತು ಮುಂಬೈ ಇಂಡಿಯನ್ಸ್‌ (ಎಂಐ) ಮುಖಾಮುಖಿಯಾಗಲಿವೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಹಾರ್ದಿಕ್‌ ಪಾಂಡ್ಯ ಮನ್ನೆಡೆಸುತ್ತಿರುವ ಮುಂಬೈ ಇಂಡಿಯನ್ಸ್‌ ವಿರುದ್ಧ ಈ ಪಂದ್ಯ ಡೆಲ್ಲಿ ಪಾಲಿಗೆ ಸೇಡಿನ ಸಮರವಾಗಿದೆ. ಟೂರ್ನಿಯಲ್ಲಿ ಈಗಾಗಲೇ ಉಭಯ ಎರಡು ತಂಡಗಳು ಒಂದು ಬಾರಿ ಎದುರಾಗಿದ್ದು, ಅದರಲ್ಲಿ ಮುಂಬೈ ಭರ್ಜರಿ ಗೆಲುವು ಕಂಡಿದೆ. ಹೀಗಾಗಿ ಮುಂಬೈ ಎದುರು ಸೇಡು ತಿರಿಸಿಕೊಳ್ಳಲು ರಿಷಬ್‌ ಪಂತ್‌ ಬಳಗ ಸಜ್ಜಾಗಿದೆ. ಇತ್ತ ಡೆಲ್ಲಿ ವಿರುದ್ಧ ಎರಡಕ್ಕೆ ಎರಡೂ ಪಂದ್ಯ ಗೆಲ್ಲಲ್ಲು ಹಾರ್ದಿಕ್‌ ಪಾಂಡ್ಯ ಪಡೆ ಹೊಸ ತಂತ್ರ ರೂಪಪಿಸಿದೆ.

Delhi Capitals vs Mumbai Indians IPL 2024 Match Report

ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ ಈವರಗೆ ಡೆಲ್ಲಿ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದು ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಮುಂಬೈ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 8ನೇ ಸ್ಥಾನದಲ್ಲಿದೆ. ಐದು ಬಾರಿ ಚಾಂಪಿಯನ್‌ ಆಗಿರುವ ಮುಂಬೈ ಮತ್ತು ಪ್ರಸಸ್ತಿ ಗೆಲ್ಲಲು ದಿಟ್ಟ ಹೋರಾಟ ನಡೆಸುತ್ತಿರುವ ಡೆಲ್ಲಿ ಈ ಬಾರಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿವೆ.

ಐಪಿಎಲ್‌ 17 ಆವೃತ್ತಿಗಳಲ್ಲಿ ಈವರೆಗೆ ಒಟ್ಟು 34 ಬಾರಿ ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್‌ ಎದುರಾಗಿವೆ. ಇದರಲ್ಲಿ ಡೆಲ್ಲಿ 15 ರಲ್ಲಿ ಗೆದ್ದೆರೆ, ಮುಂಬೈ 19 ಪಂದ್ಯಗಳಲ್ಲಿ ಜಯ ಕಂಡಿದೆ. ಇದಕ್ಕೂ ಮೊದಲು ಪ್ರಸ್ತಕ ಆವೃತ್ತಿಯಲ್ಲಿ ಏಪ್ರಿಲ್‌ 7 ರಂದು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಡೆಲ್ಲಿ 205 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲು ಅನುಭವಿಸಿತ್ತು.

Delhi Capitals vs Mumbai Indians IPL 2024 Match Report

ಡಿಸಿ vs ಎಂಐ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ :

ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಐಪಿಎಲ್ 2024ರ ರೋಚಕ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಡಿಸಿ vs ಎಂಐ ಸಂಭ್ಯಾವ ಆಡುವ 11ರ ಬಳಗ :

ಡೆಲ್ಲಿ ಕ್ಯಾಪಿಟಲ್ಸ್‌ ತಂಡ: ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ ಮತ್ತು ವಿ. ಕೀ), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಆನ್ರಿಚ್ ನಾರ್ಟ್ಜೆ / ಜೇ ರಿಚರ್ಡ್‌ಸನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ರಸಿಖ್ ಸಲಾಂ (ಇಂಪ್ಯಾಕ್ಟ್‌ ಆಟಗಾರ)

ಮುಂಬೈ ಇಂಡಿಯನ್ಸ್ ತಂಡ : ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿ.‌ ಕೀ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ನೆಹಾಲ್ ವಧೇರಾ, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ / ರೊಮಾರಿಯೋ ಶೆಫರ್ಡ್ (ಇಂಪ್ಯಾಕ್ಟ್‌ ಆಟಗಾರ)

Story first published: Saturday, April 27, 2024, 12:26 [IST]
Other articles published on Apr 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+