Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024 : ಮುಂಬೈ-ಡೆಲ್ಲಿ ನಡುವೆ ಮೆಗಾ ಫೈಟ್‌: ಟಾಸ್‌ ವರದಿ

2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಶನಿವಾರ, ಏಪ್ರಿಲ್‌ 27ರಂದು 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ಮತ್ತು ಮುಂಬೈ ಇಂಡಿಯನ್ಸ್‌ (ಎಂಐ) ಮುಖಾಮುಖಿಯಾಗಿದ್ದು, ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಿದೆ.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಬ್ಯಾಟಿಂಗ್‌ ಮಾಡಲಿದೆ.

Delhi Capitals vs Mumbai Indians IPL 2024 Match Toss Report

ಈವರಗೆ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದು ಸದ್ಯ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಆರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್‌ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 8ನೇ ಸ್ಥಾನದಲ್ಲಿದೆ. ಡಿಸಿ ಮತ್ತು ಎಂಐ ಎರಡು ತಂಡಗಳಿಗೂ ಈ ಪಂದ್ಯ ಗೆಲ್ಲುವುದು ಮಹತ್ವದಾಗಿದೆ.

ಡಿಸಿ vs ಎಂಐ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ :

ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಐಪಿಎಲ್ 2024ರ ರೋಚಕ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಡಿಸಿ vs ಎಂಐ ಆಡುವ 11ರ ಬಳಗ :

ಡೆಲ್ಲಿ ಕ್ಯಾಪಿಟಲ್ಸ್‌ ತಂಡ: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕುಮಾರ್ ಕುಶಾಗ್ರಾ, ಶಾಯ್ ಹೋಪ್, ರಿಷಭ್ ಪಂತ್(ನಾಯಕ ಮತ್ತು ವಿ.ಕೀ), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಲಿಜಾದ್ ವಿಲಿಯಮ್ಸ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್

ಮುಂಬೈ ಇಂಡಿಯನ್ಸ್ ತಂಡ : ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿ.ಕೀ), ತಿಲಕ್ ವರ್ಮಾ, ನೆಹಾಲ್ ವಧೇರಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ಪಿಯೂಷ್ ಚಾವ್ಲಾ, ಲ್ಯೂಕ್ ವುಡ್, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ

Story first published: Saturday, April 27, 2024, 15:20 [IST]
Other articles published on Apr 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+