Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಮುಂಬೈ ಬೌಲರ್ಸ್‌ಗೆ ಅಡ್ಡಾದಿಡ್ಡಿ ಹೊಡೆದ ಜೇಕ್ ಫ್ರೇಸರ್; ಬೃಹತ್‌ ಮೊತ್ತ ಕಲೆಹಾಕಿದ ಡೆಲ್ಲಿ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 43ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (ಎಂಐ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ತಂಡದ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ , ಶಾಯ್ ಹೋ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಬ್ಯಾಟಿಂಗ್‌ ಬಲದಿಂದ ಮುಂಬೈಗೆ 258 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿದೆ. ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಡೆಲ್ಲಿ 257 ರನ್‌ ಗಳಿಸಿತು.

Delhi Capitals vs Mumbai Indians Live IPL 2024 Match Report

ಮುಂಬೈ ನಾಯಕ ಹಾರ್ದಿಕ್‌ ಪಾಂಡ್ಯ ಆಹ್ವಾನದ ಮೇರೆಗೆ ಟಾಸ್‌ ಸೋತು ಡೆಲ್ಲಿ ಬ್ಯಾಟಿಂಗ್‌ ಆರಂಭಿಸಿತು. ಡೆಲ್ಲಿ ಪರ ಅಭಿಷೇಕ್ ಪೊರೆಲ್ ಮತ್ತು ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಇನ್ನಿಂಗ್ಸ್‌ ಶುರು ಮಾಡಿದರು. ಆದರೆ ಹಾರ್ದಿಕ್‌ ಪಾಂಡ್ಯ ಅವರ ಲೆಕ್ಕಚಾರ ಉಲ್ಟಾ ಮಾಡಿದ ಡೆಲ್ಲಿ ಯುವ ಬ್ಯಾಟರ್‌ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಜಬರ್ದಸ್ತ್ ಬ್ಯಾಟಿಂಗ್‌ ಮಾಡಿದರು.

ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಎದುರಿಸಿದ ಕೇವಲ 27 ಎಸೆತಗಳಲ್ಲಿ ಆರ್ಕಷಕ 6 ಸಿಕ್ಸರ್‌ ಹಾಗು 11 ಬೌಂಡರಿ ಬಾರಿಸುವ ಮೂಲಕ 84 ರನ್‌ಗಳನ್ನು ಗಳಿಸಿ ಸಿಡಿದೆದರು. ಈ ವೇಳೆ ಅನುಭವಿ ಸ್ಪಿನ್ನರ್‌ ಪಿಯೂಷ್ ಚಾವ್ಲಾ ಅವರು ಮುಂಬೈಗೆ ಅಪಾಯಕಾರಿಯಾಗಿ ಕಾಣುತ್ತಿದ್ದ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಔಟ್‌ ಮಾಡಿದರು.

ಬಳಿಕ ಕ್ರೀಸ್‌ಗೆ ಬಂದ ಶಾಯ್ ಹೋಪ್, ಅಭಿಷೇಕ್‌ ಜೊತೆಗೂಡಿ ಉತ್ತಮ ರನ್‌ ಗಳಿಸುವುದಕ್ಕೆ ಮುಂದಾದರು. ಆದರೆ ಅಭಿಷೇಕ್‌ (36) ಮೊಹಮ್ಮದ್‌ ನಬಿ ಅವರಿಗೆ ವಿಕೆಟ್‌ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದ ನಾಯಕ ರಿಷಬ್ ಪಂತ್‌ ನಿಧನವಾಗಿ ಶಾಯ್ ಹೋಪ್ ನೊಂದಿಗೆ ಆಟವಾಡಿದರು. ಬಳಿಕ ಅಬ್ಬರಿಸಿದ ಈ ಇಬ್ಬರು ಆಟಗಾರರು ಮುಂಬೈ ಬೌಲರ್ಸ್‌ ಬೆವರಿಳಿಸಿದರು.

ಐದು ಸಿಕ್ಸರ್ ಸಿಡಿಸಿದ ಶಾಯ್ ಹೋಪ್ ಕೇವಲ 17 ಎಸೆತಗಳಲ್ಲಿ 41 ರನ್‌ ಬಾರಿಸಿ ಲ್ಯೂಕ್ ವುಡ್ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಆದರೆ ರಿಷಬ್‌ ಪಂತ್‌ ಮಾತ್ರ ತನ್ನ ಹಳೆ ಖದರ್‌ ಅನ್ನು ಮುಂದುವರೆಸುವ ಬರದಲ್ಲಿ 29 ರನ್‌ ಗಳಿಸಿದಾಗ ಜಸ್ಪ್ರೀತ್ ಬುಮ್ರಾ ಅವರಿಗೆ ವಿಕೆಟ್‌ ನೀಡಿ ಆಟ ನಿಲ್ಲಿಸಿದರು.

ಈ ಹಂತದ ಟ್ರಿಸ್ಟಾನ್ ಸ್ಟಬ್ಸ್ ಮಾತ್ರ ತನ್ನ ಆಕ್ರಮಣಕಾರಿ ಆಟವಾಡಿದರು. ಟ್ರಿಸ್ಟಾನ್ ಸ್ಟಬ್ಸ್ ಎದುರಿಸಿದ 25 ಎಸೆತಗಳಲ್ಲಿ 6 ಬೌಂಡರಿ ಹಾಗು 2 ಸಿಕ್ಸರ್‌ ಹೊಡೆಯುವ ಮೂಲಕ ಅಜೇಯ 48 ರನ್‌ ಗಳಿಸಿ ಡೆಲ್ಲಿ ಬೃಹತ್‌ ಮೊತ್ತ ಕಲೆ ಹಾಕಲು ನೆರವಾದರು. ಮತ್ತೊಂದೆಡೆ ಅಕ್ಷರ್ ಪಟೇಲ್ ಅಜೇಯ 11 ರನ್‌ ಕೊಡುಗೆ ನೀಡಿದರು.

ವೀಕ್ ಆದ ಮುಂಬೈ ಬೌಲರ್ಸ್‌ :

ಮುಂಬೈ ಪರ ಬೌಲರ್ಸ್‌ ಡೆಲ್ಲಿ ರನ್‌ ವೇಗಕ್ಕೆ ಬ್ರೇಕ್‌ ಹಾಕುವುದಲ್ಲಿ ವಿಫಲವಾದರು. ಹೀಗಾಗಿ ಮುಂಬೈ ದುರ್ಬಲ ಬೌಲಿಂಗ್‌ ಲಾಭ ಪಡೆದ ಡೆಲ್ಲಿ ಬ್ಯಾಟರ್ಸ್‌ ಹೆಚ್ಚು ರನ್‌ ಗಳಿಸಿದರು. ಮೊಹಮ್ಮದ್ ನಬಿ, ಪಿಯೂಷ್ ಚಾವ್ಲಾ, ಲ್ಯೂಕ್ ವುಡ್ ಮತ್ತು ಜಸ್ಪ್ರೀತ್ ಬುಮ್ರಾ ಕೇವಲ ಒಂದು ವಿಕೆಟ್‌ ಪಡೆದರು.

Story first published: Saturday, April 27, 2024, 17:29 [IST]
Other articles published on Apr 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+