DC vs RR IPL 2024: ಡೆಲ್ಲಿ ಪರ ಅಬ್ಬರಿಸಿದ ಜೇಕ್ ಫ್ರೇಸರ್, ಪೊರೆಲ್; ರಾಜಸ್ತಾನಕ್ಕೆ ಬೃಹತ್ ಗುರಿ
ಮೇ 7 ಮಂಗಳವಾರ, ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 56ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಬೃಹತ್ ಮೊತ್ತ ಕಲೆ ಹಾಕಿದೆ.
ರಾಜಸ್ತಾನ ಎದುರು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಅಭಿಷೇಕ್ ಪೊರೆಲ್ ಅಬ್ಬರಿಸಿ ಅರ್ಧಶತಕ ಬಾರಿಸಿದರು. ನಿಗದಿತ 20 ಓವರ್‌ಗಳಲ್ಲಿ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್‌ಗಳನ್ನು ಪೇರಿಸಿದೆ. ಹೀಗಾಗಿ ರಾಜಸ್ತಾನ ಗೆಲುವಿಗೆ 222 ರನ್ ಅವಶ್ಯಕತೆ ಇದೆ.

ಟಾಸ್ ಸೋತ ಇನ್ನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಅಭಿಷೇಕ್ ಪೊರೆಲ್ ಜೋಡಿ ಅಬ್ಬರದ ಆಟವಾಡಿತು. ಮೊದಲ ವಿಕೆಟ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 3 ಬೌಂಡರಿ ಮತ್ತು 7 ಸಿಕ್ಸರ್ ಮೂಲಕ 50 ರನ್‌ಗಳನ್ನು ಗಳಿಸಿ ಆರ್. ಆಶ್ವಿನ್ ಬೌಲಿಂಗ್‌ನಲ್ಲಿ ಔಟ್ ಆದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಶಾಯ್ ಹೋಪ್ ಕೇವಲ 1 ರನ್ ಗೆ ದುರದೃಷ್ಟಕರ ರನ್ ಔಟ್‌ಗೆ ಬಲಿಯಾದರು. ನಂತರ ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ಅಕ್ಸರ್ ಪಟೇಲ್ ಮತ್ತು ಅಭಿಷೇಕ್ ಪೊರೆಲ್ ನಿಧಾನವಾಗಿ ಬ್ಯಾಟ್ ಬೀಸುವ ಮೂಲಕ ತಂಡಕ್ಕೆ ರನ್ ಗಳಿಸಿದರು. ಆದದರೆ 10 ಎಸೆತಗಳಲ್ಲಿ 1 ಸಿಕ್ಸರ್ ಮತ್ತು ಬೌಂಡರಿ ಹೊಡೆದು 15 ರನ್ ಗಳಿಸಿದ ಅಕ್ಸರ್ ಪಟೇಲ್ ಆರ್.ಆಶ್ವಿನ್ ಬೌಲಿಂಗ್‌ನಲ್ಲಿ ರಿಯಾನ್ ಪರಾಗ್ ಅವರಿಗೆ ಕ್ಯಾಚ್ ಕೊಟ್ಟು ತಮ್ಮ ಆಟ ನಿಲ್ಲಿಸಿದರು.
ಇನ್ನೊಂದೆಡೆ ಸ್ಪೋಟಕ ಬ್ಯಾಟಿಂಗ್ ಮಾಡಿದ ಅಭಿಷೇಕ್ ಪೊರೆಲ್ ಕೂಡ ಅರ್ಧಶತಕ ಹೊಡೆದು ಮಿಂಚಿದರು. ಕೇವಲ 36 ಎಸೆತಗಳಲ್ಲಿ 3 ಸಿಕ್ಸರ್ ಹಾಗು 7 ಬೌಂಡರಿ ನೆರವಿನಿಂದ 65 ರನ್‌ಗಳನ್ನು ಹೊಡೆದು ಆರ್.ಆಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ರಿಷಬ್ ಪಂತ್ ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಕೇವಲ 15 ರನ್‌ಗೆ ಯುಜ್ವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಪಂತ್ ವಿಕೆಟ್ ಕಳೆದುಕೊಂಡರು.
ಬಳಿಕ ಬಂದ ಟ್ರಿಸ್ಟಾನ್ ಸ್ಟಬ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 20 ಎಸೆತಗಳಲ್ಲಿ 3 ಬೌಂಡರಿ ಮತ್ತು ಸಿಕ್ಸರ್ ಮೂಲಕ 41 ರನ್ ಗಳಿಸಿದ ಸ್ಟಬ್ಸ್, ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ಔಟ್ ಆದರು. ಗುಲ್ಬದಿನ್ ನೈಬ್ ಕೂಡ 19 ರನ್‌ಗೆ ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ನೀಡಿದರು. ಕೊನೆಯಲ್ಲಿ ರಾಸಿಖ್ ದಾರ್ ಸಲಾಂ (9) ರನ್ ಔಟ್ ಆದರು. ಕುಲದೀಪ್ ಸಹಾ ಅಜೇಯ 5 ರನ್ ಗಳಿಸಿದರು.
ರಾಜಸ್ತಾನ ರಾಯಲ್ ಪರ ಸ್ಪಿನ್ನರ್ ಅತಿ ಹೆಚ್ಚು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆರ್.ಆಶ್ವಿನ್ 3 ವಿಕೆಟ್ ಉರಳಿಸಿದರೆ, ಯುಜ್ವೇಂದ್ರ ಚಹಾಲ್, ಸಂದೀಪ್ ಶರ್ಮಾ ಮತ್ತು ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications