Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಡೆಲ್ಲಿ ತಂಡಕ್ಕೆ ರಾಜಸ್ಥಾನ ರಾಯಲ್ಸ್ ಸವಾಲು; ಸ್ಯಾಮ್ಸನ್ ಸಿಡಿದೇಳುತ್ತಾರಾ?

ಐಪಿಎಲ್ 2025 ರ 32ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂದು ಅಂದರೆ, ಬುಧವಾರದಂದು ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಟಪಿಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಐಪಿಎಲ್‌ 2025ರ ಸ್ಥಿರ ಪ್ರದರ್ಶನ ನೀಡುತ್ತಿವೆ. ಉಭಯ ತಂಡಗಳ ಸ್ಟಾರ್ ಆಟಗಾರರು ಲೀಗ್‌ನಲ್ಲಿ ಮಿಂಚುತ್ತಿದ್ದಾರೆ. ಇಂದಿನ ಪಂದ್ಯವನ್ನು ಗೆಲ್ಲುವುದು ಉಭಯ ತಂಡಗಳಿಗೆ ಬಹಳ ಮುಖ್ಯವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೋಲನ್ನು ಎದುರಿಸಿತು. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಮುಂಬೈ ಇಂಡಿಯನ್ಸ್ ಎದುರು ಸೋಲು ಕಂಡಿತ್ತು. ಕಳೆದ ಪಂದ್ಯಗಳಲ್ಲಿ ಉಭಯ ತಂಡಗಳು ಸೋತಿರುವುದರಿಂದ ಇಂದು ಗೆಲುವಿನ ನಿರೀಕ್ಷೆಯಲ್ಲಿವೆ.

Delhi Capitals vs Rajasthan Royals IPL 2025 32th Match Preview

ರಾಜಸ್ಥಾನ ರಾಯಲ್ಸ್ ತಂಡ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ಆಡಿರುವ ಆರು ಪಂದ್ಯಗಳಲ್ಲಿ ಕೇವಲ 2 ರಲ್ಲಿ ಗೆಲುವು ಸಾಧಿಸಿದ್ದು, ಎಂಟನೇ ಸ್ಥಾನದಲ್ಲಿದೆ.

ಪಿಚ್ ವರದಿ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನ ಪಿಚ್ ಸಮತಟ್ಟಾಗಿದ್ದು, ಬ್ಯಾಟರ್ಸ್‌ಗೆ ರನ್ ಕಲೆ ಹಾಕಲು ಹೇಳಿ ಮಾಡಿಸಿದಂತಿದೆ. ಇಲ್ಲಿನ ಪಿಚ್‌ನಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದವರು ಬೌಲಿಂಗ್ ನಿರ್ಧರಿಸಬೇಕು. ಈ ಪಿಚ್‌ನಲ್ಲಿ ಕೊನೆಯ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದಾಗ, ಒಟ್ಟು 15 ವಿಕೆಟ್‌ಗಳ ನಷ್ಟಕ್ಕೆ 398 ರನ್ ಗಳಿಸಲಾಗಿತ್ತು. ಇಂದು ನಡೆಯಲಿರುವ ಪಂದ್ಯದಲ್ಲೂ ರನ್ ಮಳೆ ಸುರಿಯುವ ಸಾಧ್ಯತೆಯಿದೆ.

ಹೆಡ್‌ ಟು ಹೆಡ್‌

ಐಪಿಎಲ್‌ನಲ್ಲಿ ಇಲ್ಲಿವರೆಗೆ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಒಟ್ಟು 29 ಪಂದ್ಯಗಳು ನಡೆದಿವೆ. ಉಬಯ ತಂಡಗಳ ನಡೆವೆ ಸಮಬಲ ಪ್ರದರ್ಶನವಾಗಿದೆ. ರಾಜಸ್ಥಾನ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಡೆಲ್ಲಿ ತಂಡ 14 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯವನ್ನು ಹೆಚ್ಚು ಗೆದ್ದ ರಾಜಸ್ಥಾನ ಮೇಲುಗೈ ಸಾಧಿಸಿದೆ.

ಡೆಲ್ಲಿ ಟಾಪ್‌ ರನ್‌ ಗೆಟರ್ಸ್‌

ಕೆಎಲ್ ರಾಹುಲ್- 4 ಪಂದ್ಯ, 200 ರನ್
ಟ್ರಿಸ್ಟಾನ್ ಸ್ಟಬ್ಸ್- 5 ಪಂದ್ಯ, 118 ರನ್
ಅಭಿಷೇಕ್ ಪೂರೆಲ್- 5 ಪಂದ್ಯ, 107 ರನ್

ಡೆಲ್ಲಿ ಟಾಪ್‌ ವಿಕೆಟ್‌ ಟೇಕರ್ಸ್‌

ಕುಲ್‌ದೀಪ್ ಯಾದವ್- 5 ಪಂದ್ಯ, 10 ವಿಕೆಟ್
ಮಿಚೆಲ್ ಸ್ಟಾರ್ಕ್- 5 ಪಂದ್ಯ, 9 ವಿಕೆಟ್
ವಿಪ್ರಜ್ ನಿಗಮ್- 5 ಪಂದ್ಯ, 7 ವಿಕೆಟ್

ಡೆಲ್ಲಿ ಸಂಭಾವ್ಯ ತಂಡ: ಅಭಿಷೇಕ್ ಪೊರೆಲ್ , ಫಾಫ್ ಡು ಪ್ಲೆಸಿಸ್/ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ/ಟಿ ನಟರಾಜನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್.

ರಾಜಸ್ಥಾನ ಟಾಪ್ ರನ್ ಗೆಟರ್ಸ್

ಸಂಜು ಸ್ಯಾಮ್ಸನ್- 6 ಪಂದ್ಯ, 193 ರನ್
ಯಶಸ್ವಿ ಜೈಸ್ವಾಲ್- 6 ಪಂದ್ಯ, 182 ರನ್
ರಿಯಾನ್ ಪರಾಗ್- 6 ಪಂದ್ಯ, 165 ರನ್

ರಾಜಸ್ಥಾನ ಟಾಪ್‌ ವಿಕೆಟ್‌ ಟೇಕರ್ಸ್‌

ಮಹೀಶ್ ತೀಕ್ಷಣ- 6 ಪಂದ್ಯ, 6 ವಿಕೆಟ್
ವನಿಂದು ಹಸರಂಗ- 4 ಪಂದ್ಯ, 6 ವಿಕೆಟ್
ಸಂದೀಪ್ ಶರ್ಮಾ- 6 ಪಂದ್ಯ, 5 ವಿಕೆಟ್

ರಾಜಸ್ಥಾನ ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ಕೀಪರ್), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.

Story first published: Wednesday, April 16, 2025, 7:17 [IST]
Other articles published on Apr 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+