Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs SRH IPL 2025: ಸಂಘಟಿತ ಆಟ vs ಬ್ಯಾಟಿಂಗ್‌: ಡೆಲ್ಲಿ ತಂಡದ ಸವಾಲು ಎದುರಿಸಲಿದೆ ಎಸ್‌ಆರ್‌ಎಚ್‌

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ. 18ನೇ ಆವೃತ್ತಿಯ ಐಪಿಎಲ್‌ನ 10 ಪಂದ್ಯಕ್ಕೆ ವಿಶಾಖಪಟ್ಟಣಂ ಮೈದಾನ ಸಾಕ್ಷಿಯಾಗಲಿದೆ. ಉಭಯ ತಂಡಗಳು ಎರಡನೇ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿವೆ. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತವರು ಅಂಗಳವಾಗಿದೆ.

ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಮನೆ ಮಾಡಿದೆ. ಉಭಯ ತಂಡಗಳ ನಡುವೆ ಈಗಾಗಲೇ 24 ಪಂದ್ಯಗಳು ನಡೆದಿದ್ದು, ಡಿಸಿ 11, ಎಸ್‌ಆರ್‌ಎಚ್‌ 13 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಉಭಯ ತಂಡಗಳ ನಡುವಿನ ಪಂದ್ಯದಲ್ಲಿ 266 ರನ್‌ ಗರಿಷ್ಠ ರನ್‌ ಆಗಿದೆ.

Delhi Capitals vs Sunrisers Hyderabad Battle for Second Win in IPL 2024 at Visakhapatnam

ಹೇಗಿರಲಿದೆ ಪಿಚ್?

ವಿಶಾಖಪಟ್ಟಣಂನ ಪಿಚ್‌ ಬ್ಯಾಟರ್‌ಗಳಿಗೆ ಸಹಾಯ ಮಾಡಲಿದೆ. ಹೊಸ ಚೆಂಡಿನಲ್ಲಿ ವೇಗದ ಬೌಲರ್‌ಗಳಿಗೆ ಕೊಂಚ ಸಹಾಯ ಸಿಗಲಿದೆ. ಇನ್ನು ಸ್ಪಿನ್ ಬೌಲರ್‌ಗಳು ಕರಾರುವಕ್ ದಾಳಿ ನಡೆಸಿದರೆ ಯಶ್ ಫಿಕ್ಸ್. ಈ ಮೈದಾನದಲ್ಲಿ ಒಟ್ಟು 16 ಪಂದ್ಯಗಳು ನಡೆದಿದ್ದು, ಎರಡನೇ ಬಾರಿ ಬ್ಯಾಟ್‌ ಮಾಡಿದ ತಂಡ ಕೇವಲ 7 ಪಂದ್ಯಗಳಲ್ಲಿ ಜಯ ಸಾದಿಸಿದೆ. ದೆಹಲಿ ತಂಡ ಈ ಮೈದಾನದಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 5 ಪಂದ್ಯಗಳಲ್ಲಿ ಜಯಗಳಿಸಿದೆ.

ಯಂಗ್‌ ಪ್ಲೇಯರ್‌ ಆಕರ್ಷಣೆ

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಸವಾಲನ್ನು ಡೆಲ್ಲಿ ತಂಡ ಯಶಸ್ವಿಯಾಗಿ ಮೆಟ್ಟಿನಿಲ್ಲುವಲ್ಲಿ ತಂಡದ ಯುವ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು. ಭರವಸೆಯ ಬ್ಯಾಟರ್‌ ಆಶುತೋಷ್‌ ಶರ್ಮಾ, ವಿಪ್ರಜ್‌ ನಿಗಮ್, ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಆರಂಭಿಕರಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಬೇಕಿದೆ. ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದು ಭರವಸೆ ಹೆಚ್ಚಿದೆ. ನಾಯಕ ಅಕ್ಷರ್ ಪಟೇಲ್‌ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡಕ್ಕೆ ನೆರವಾಗಬೇಕಿದೆ.

Delhi Capitals vs Sunrisers Hyderabad Battle for Second Win in IPL 2024 at Visakhapatnam

ವೇಗದ ಬೌಲಿಂಗ್ ನೊಗವನ್ನು ಮಿಚೆಲ್ ಸ್ಟಾರ್ಕ್‌ ಹಾಗೂ ಮೋಹಿತ್ ಶರ್ಮಾ, ಮುಕೇಶ್‌ ಶರ್ಮಾ ಶಿಸ್ತು ಬದ್ದ ದಾಳಿಯನ್ನು ಸಂಘಟಿಸಬೇಕಿದೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗವನ್ನು ಕುಲ್‌ದೀಪ್‌ ಯಾದವ್ ಮುನ್ನಡೆಸಲಿದ್ದು ರನ್‌ ಗಳಿಗೆ ಕಡಿವಾಣ ಹಾಕುವ ಭರವಸೆ ಹೊಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಸಭಾವ್ಯ ತಂಡ: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್, ಅಶುತೋಷ್ ಶರ್ಮಾ.

ಬ್ಯಾಟರ್‌ಗಳ ಆಕರ್ಷಣೆ

ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ ಶಕ್ತಿಯಾಗಿದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಅಭಿಷೇಕ್‌ ಶರ್ಮಾ, ಟ್ರಾವಿಸ್ ಹೆಡ್‌, ಇಶಾನ್‌ ಕಿಶಾನ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ನಿತೀಶ್‌ ಕುಮಾರ್ ರೆಡ್ಡಿ, ವಿಕೆಟ್‌ ಕೀಪರ್ ಬ್ಯಾಟರ್‌ ಹೆನ್ರಿಚ್ ಕ್ಲಾಸೇನ್‌ ಸಹ ಬಿಗ್ ಹಿಟ್‌ಗಳ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಬೌಲಿಂಗ್‌ ವಿಭಾಗದಲ್ಲಿ ಪ್ಯಾಟ್‌ ಕಮಿನ್ಸ್‌, ಮೊಹಮ್ಮದ್‌ ಶಮಿ, ಹರ್ಷಲ್‌ ಪಟೇಲ್‌ ತಂಡದ ಗೆಲುವಿನಲ್ಲಿ ಮಿಂಚಬೇಕಿದೆ. ಅಂದಾಗ ಗೆಲುವು ಸಾಧಿಸಲು ಸಾಧ್ಯ.

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸಿಮರ್‌ಜಿತ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.

Story first published: Sunday, March 30, 2025, 7:03 [IST]
Other articles published on Mar 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+