Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಅಂಕ ಪಟ್ಟಿಯಲ್ಲಿ ಬಡ್ತಿಯ ಮೇಲೆ ಡೆಲ್ಲಿ, ಯುಪಿ ಕಣ್ಣು

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ನ ಆರನೇ ಪಂದ್ಯದಲ್ಲಿ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಕಾದಾಟ ನಡೆಸಲಿವೆ. ಡೆಲ್ಲಿ ಟೂರ್ನಿಯಲ್ಲಿ ಈಗಾಗಲೇ ಮೊದಲ ಗೆಲುವಿನ ನಗೆ ಬೀರಿದ್ದು, ಯುಪಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಎರಡೂ ತಂಡಗಳಲ್ಲಿ ಸ್ಟಾರ್ ವಿದೇಶಿ ಆಟಗಾರರು ಇದ್ದು ರೋಚಕತೆ ಮನೆ ಮಾಡಿದೆ. ಈ ಪಂದ್ಯದಲ್ಲಿ ವಡೋಧರಾದಲ್ಲಿ ನಡೆಯಲಿರುವ ಲೀಗ್‌ ಹಂತದ ಕೊನೆಯ ಪಂದ್ಯವಾಗಿದೆ.

ಯುಪಿ ವಾರಿಯರ್ಸ್ ತಾನಾಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಜೈಂಟ್ಸ್ ತಂಡದ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗೆಲುವಿನ ಹುಡುಕಾಟದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ವಿರುದ್ಧದ ಹಿಂದಿನ ಪಂದ್ಯದಲ್ಲಿ ಸೋಲು ಕಂಡಿದ್ದು, ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಮೈದಾನದಲ್ಲಿ ಟಾಸ್‌ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿದೆ. ಈ ಅಂಗಳದಲ್ಲಿ ಗುರಿಯನ್ನು ಬೆನ್ನುಹತ್ತಿದ ತಂಡವೇ ಪಂದ್ಯಗಳನ್ನು ಗೆದ್ದಿರುವ ದಾಖಲೆ ಹೊಂದಿದೆ.

Delhi Capitals vs UP Warriors WPL 2025 Clash in Vadodara

ಸ್ಟಾರ್ ಆಟಗಾರ್ತಿಯರೇ ಬಲ

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಮೆಗ್ ಲ್ಯಾನಿಂಗ್‌, ಶೆಫಾಲಿ ವರ್ಮಾ ಆರಂಭದಲ್ಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಅನಿವಾರ್ಯತೆ ಇದೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್‌, ಅನ್ನಾಬೆಲ್ ಸದರ್ಲ್ಯಾಂಡ್, ಸಾರಾ ಬ್ರೈಸ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತ ಕಲೆ ಹಾಕುವುದು ಸಾಧ್ಯವಾಗುತ್ತದೆ. ಶಿಖಾ ಪಾಂಡ್ಯ ಹಾಗೂ ಅಂಡರ್ 19 ಟಿ20 ವಿಶ್ವಕಪ್‌ ವಿಜೇತ ತಂಡದ ನಾಯಕಿ ಕನ್ನಡತಿ ನಿಕ್ಕಿ ಪ್ರಸಾದ್ ಅವರಿಗೆ ಅವಕಾಶ ಸಿಕ್ಕರೆ ಸ್ಥಿರ ಪ್ರದರ್ಶನ ನೀಡಬೇಕಿದೆ.

ಪವರ್‌ ಪ್ಲೇನಲ್ಲಿ ಡೆಲ್ಲಿ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಬೇಕಿದೆ. ತಂಡದಲ್ಲಿ ಉತ್ತಮ ಬೌಲಿಂಗ್ ಮಿಶ್ರಣವಿದ್ದು, ಇದರ ಸಂಪೂರ್ಣ ಲಾಭವನ್ನು ಕ್ಯಾಪಿಟಲ್ಸ್‌ ಪಡೆದು ಕೊಳ್ಳಬೇಕಿದೆ.

Delhi Capitals vs UP Warriors WPL 2025 Clash in Vadodara

ಗೆಲುವೊಂದೆ ಟಾರ್ಗೆಟ್‌

ತಾನಾಡಿದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೋತಿರುವ ಯುಪಿ ವಾರಿಯರ್ಸ್‌ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ತಂಡದಲ್ಲಿ ಸ್ಟಾರ್ ಆಟಗಾರ್ತಿಯರಿದ್ದು ಸರಿಯಾದ ಸಮಯದಲ್ಲಿ ತಂಡದ ನೆರವಿಗೆ ಬರುತ್ತಿಲ್ಲ ಎಂಬ ನೋವು ಅಭಿಮಾನಿಗಳಿಗಿದೆ. ದೀಪ್ತಿ ಶರ್ಮಾ, ಉಮಾ ಚೆಟ್ರಿ, ಶ್ವೇತಾ ಸೆಹ್ರಾವತ್, ಅಲಾನಾ ಕಿಂಗ್ ನೆಲಕಚ್ಚಿ ನಿಂತು ಬ್ಯಾಟ್ ಮಾಡಿ ರನ್‌ಗಳಿಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಸೋಫಿ ಎಕ್ಲೆಸ್ಟೋನ್ ಹಾಗೂ ಗ್ರೇಸ್ ಹ್ಯಾರಿಸ್ ಅವರಿಗೆ ಉಳಿದ ಆಟಗಾರ್ತಿಯರು ಉತ್ತಮ ಬೌಲಿಂಗ್ ಸಾಥ್ ನೀಡಬೇಕಿದೆ. ಅಂದಾಗ ಮಾತ್ರ ಮೊದಲ ಗೆಲುವಿನ ಯುಪಿ ಕನಸು ನನಸಾಗುತ್ತದೆ.

Story first published: Wednesday, February 19, 2025, 7:56 [IST]
Other articles published on Feb 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+